ಬಾಗಲಕೋಟೆ:ಜಿಲ್ಲೆಯ ರಬಕವಿ ಬನಹಟ್ಟಿ ಸಮೀಪದ ಕುಲಹಳ್ಳಿ ಗ್ರಾಮದ ಬಾವಿಯೊಂದರಲ್ಲಿ 7 ಅಡಿ ಉದ್ದದ ಮೊಸಳೆ ಕಂಡು ಬಂದಿದೆ. ಸ್ಥಳೀಯ ಮೀನುಗಾರರ ತಂಡ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಸೇರಿ ರಕ್ಷಿಸಿದ್ದು ಸುರಕ್ಷಿತ ಸ್ಥಳಕ್ಕೆ ರವಾನಿಸಿದರು. ಪಕ್ಕದಲ್ಲೇ ಕೃಷ್ಣ ನದಿ ಇರುವುದರಿಂದ ಆಹಾರಕ್ಕಾಗಿ ಅಲೆಯುತ್ತಾ ಬಂದು ಬಾವಿಗೆ ಬಿದ್ದಿರಬಹುದು ಎನ್ನಲಾಗಿದೆ.
ಮೂರು ದಿನಗಳ ಹಿಂದೆ ಸದಾಶಿವ ತೇಲಿ ಎಂಬುವರ ತೋಟದ ಬಾವಿಯೊಳಗೆ ಮೊಸಳೆ ಪ್ರತ್ಯಕ್ಷವಾಗಿತ್ತು. ಆಗ ಅರಣ್ಯ ಇಲಾಖೆ ಅಧಿಕಾರಿಗಳು ಶೋಧ ಕಾರ್ಯ ನಡೆಸಿದ್ದರು. ಬಾವಿಯನ ನೀರು ಹೊರಹಾಕಿದರೂ, ಮೊಸಳೆ ಕಂಡು ಬಂದಿರಲಿಲ್ಲ.
ನಂತರ ಅಲ್ಲಲ್ಲಿ ಸಂಚರಿಸಿ ಸುಮಾರು 300 ಮೀಟರ್ ದೂರದಲ್ಲಿರುವ ಬಾಬುರಾವ್ ಸಿಂಧೆಯವರ ತೋಟದ ಬಾವಿಯೊಳಗೆ ಇಳಿದಿದೆ. ಜಮೀನಿಗೆ ನೀರು ಹಾಯಿಸಲೆಂದು ಬಾವಿಗೆ ತೆರಳಿದಾಗ ಮೊಸಳೆ ಇರುವುದು ಗಮನಕ್ಕೆ ಬಂದಿದೆ. ಪಕ್ಕದಲ್ಲಿಯೇ ಕೃಷ್ಣಾ ನದಿ ನೀರು ನಿಂತಿರುವುದರಿಂದ ಆಹಾರ ಹುಡುಕಿ ಬಂದ ಮೊಸಳೆ ಅಲ್ಲಲ್ಲಿ ಸಂಚರಿಸಿ ಬಾವಿಯೊಳಗೆ ಬಿದ್ದಿದೆ ಎಂದು ಹೇಳಲಾಗುತ್ತಿದೆ. ಸ್ಥಳೀಯ ಮೀನುಗಾರರ ತಂಡ ಹಾಗು ಅರಣ್ಯ ಅಧಿಕಾರಿಗಳು ಹರಸಾಹಸಪಟ್ಟು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿ, ಸುರಕ್ಷಿತ ಸ್ಥಳಕ್ಕೆ ರವಾನಿಸಿದ್ದಾರೆ.
ಇದನ್ನೂ ಓದಿ:ಹಂತ ಹಂತವಾಗಿ 2.5 ಲಕ್ಷ ಹುದ್ದೆ ಭರ್ತಿ, ಕೆಪಿಎಸ್ಸಿಗೆ ಕಾಯಕಲ್ಪ: ಸಿಎಂ ಬೊಮ್ಮಾಯಿ
ಕಳೆದ ಮೂರ್ನಾಲ್ಕು ದಿನಗಳಿಂದ ಎಲ್ಲೆಂದರಲ್ಲಿ ಸಂಚರಿಸಿರುವ ಮೊಸಳೆಯಿಂದಾಗಿ ಕೃಷ್ಣಾ ತೀರದ ಜನತೆಯಲ್ಲಿ ಹಾಗೂ ರೈತರಲ್ಲಿ ಆತಂಕ ಹೆಚ್ಚಿಸಿದೆ. ಈ ಪ್ರದೇಶದಲ್ಲಿ ಮೊಸಳೆ ಹೆಚ್ಚಾಗಿ ಕಂಡು ಬರುತ್ತಿದ್ದು, ರೈತರಲ್ಲಿ ಹಾಗೂ ಸ್ಥಳೀಯ ಜನರಿಗೆ ಆತಂಕ ಮೂಡಿಸಿದೆ. ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಅಪಾಯ ಆಗುವ ಮೊದಲೇ ಎಚ್ಚೆತ್ತುಕೊಂಡು ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.