ಬಾಗಲಕೋಟೆ:ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರ ಕ್ಷೇತ್ರವಾಗಿರುವ ಮುಧೋಳ ಪಟ್ಟಣದಲ್ಲಿ ಬೆಡ್ ಸಿಗದೇ ಆಸ್ಪತ್ರೆ ಬಾಗಲಲ್ಲೇ ಕೋವಿಡ್ ಸೋಂಕಿತನೊಬ್ಬ ಪ್ರಾಣ ಬಿಟ್ಟಿರುವ ಘಟನೆ ನಡೆದಿದೆ.
ಡಿಸಿಎಂ ತವರಲ್ಲೂ ಆಕ್ಸಿಜನ್ ಬೆಡ್ ಸಮಸ್ಯೆ.. ಆಸ್ಪತ್ರೆ ಮುಂಭಾಗದಲ್ಲೇ ಪ್ರಾಣಬಿಟ್ಟ ಕೋವಿಡ್ ರೋಗಿ - ಆಸ್ಪತ್ರೆ ಆವರಣದಲ್ಲಿ ಕೋವಿಡ್ ಸೋಂಕಿತ ಸಾವು
ರಾಜ್ಯದ ವಿವಿಧ ನಗರಗಳಲ್ಲೂ ಆಕ್ಸಿಜನ್ ಬೆಡ್ ಸಮಸ್ಯೆ ಉಲ್ಭಣಗೊಂಡಿದ್ದು, ಸದ್ಯ ಬಾಗಲಕೋಟೆ ಮುದೋಳ ಸರ್ಕಾರಿ ಆಸ್ಪತ್ರೆ ಮುಂಭಾಗದಲ್ಲೇ ವ್ಯಕ್ತಿಯೋರ್ವ ಪ್ರಾಣ ಕಳೆದುಕೊಂಡಿದ್ದಾನೆ.
![ಡಿಸಿಎಂ ತವರಲ್ಲೂ ಆಕ್ಸಿಜನ್ ಬೆಡ್ ಸಮಸ್ಯೆ.. ಆಸ್ಪತ್ರೆ ಮುಂಭಾಗದಲ್ಲೇ ಪ್ರಾಣಬಿಟ್ಟ ಕೋವಿಡ್ ರೋಗಿ Covid Death](https://etvbharatimages.akamaized.net/etvbharat/prod-images/768-512-11731661-2-11731661-1620809833924.jpg)
ಮುಧೋಳ ತಾಲೂಕಿನ ಸರ್ಕಾರಿ ಆಸ್ಪತ್ರೆ ಮುಂದೆ ಈ ದಾರುಣ ಘಟನೆ ನಡೆದಿದ್ದು,ಆಕ್ಸಿಜನ್ ಬೆಡ್ ಸಿಗದೇ ತಿಮ್ಮಣ್ಣ ಬಂಡಿವಡ್ಡರ್ ಎಂಬ ವ್ಯಕ್ತಿ ಪ್ರಾಣ ಕಳೆದುಕೊಂಡಿದ್ದಾನೆ.
ಕೋವಿಡ್ ದೃಢಗೊಂಡಿದ್ದ ಕಾರಣ ಕೊರೊನಾ ಕೇರ್ ಸೆಂಟರ್ನಲ್ಲಿ ಹೋಂ ಐಸೋಲೇಷನ್ನಲ್ಲಿದ್ದ ಸೋಂಕಿತನಿಗೆ ಪಲ್ಸ್ ಬಿಟ್ ಕಡಿಮೆಯಾಗಿ ಸಾವು -ಬದುಕಿನ ಮದ್ಯೆ ಹೋರಾಟ ನಡೆಸಿದ್ದ ಎನ್ನಲಾಗಿದೆ. ಸೂಕ್ತ ಸಮಯಕ್ಕೆ ಆಕ್ಸಿಜನ್ ಬೆಡ್ ಸಿಗದೇ ಪ್ರಾಣ ಕಳೆದುಕೊಂಡಿದ್ದಾನೆ. ಡಿಸಿಎಂ ಗೋವಿಂದ್ ಕಾರಜೋಳ ಅವರ ಕ್ಷೇತ್ರ ಮುಧೋಳ ತಾಲೂಕು ಆಸ್ಪತ್ರೆಯಲ್ಲೂ ಆಕ್ಸಿಜನ್ ಬೆಡ್ ಕೊರತೆ ಇದ್ದು, ತಾಲೂಕಿನಲ್ಲಿ ಕೊರೊನಾ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಸಿಗದೇ ಪರದಾಡುವಂತಾಗಿದೆ.