ಬಾಗಲಕೋಟೆ:ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಬಾಗಲಕೋಟೆಯಲ್ಲಿ ಕೊವಿಡ್ ಮೊಬೈಲ್ ಕ್ಲಿನಿಕ್ ತೆರೆಯಲಾಗಿದೆ.
ಕೆಎಸ್ಆರ್ಟಿಸಿ ಎಮ್ಡಿ ಶಿವಯೋಗಿ ಕಳಸದ ಕೋವಿಡ್ ಮೊಬೈಲ್ ಫಿವರ್ ಕ್ಲಿನಿಕ್ಗೆ ಚಾಲನೆ ನೀಡಿದರು. ಕೆಎಸ್ಆರ್ಟಿಸಿ ಬಸ್ ಕೋವಿಡ್ ಮೊಬೈಲ್ ಫಿವರ್ ಕ್ಲಿನಿಕ್ ಆಗಿ ಬದಲಾವಣೆಯಾಗಿದ್ದು, ಬಾಗಲಕೋಟೆ ಡಿಸಿ ಕಚೇರಿ ಎದುರು ಕ್ಲಿನಿಕ್ಗೆ ಚಾಲನೆ ನೀಡಿದ ಬಳಿಕ ಶಿವಯೋಗಿ ಕಳಸದ ಸ್ಕ್ರೀನಿಂಗ್ ಮಾಡಿಸಿಕೊಂಡರು.
ಕೋವಿಡ್ ಮೊಬೈಲ್ ಕ್ಲಿನಿಕ್ಗೆ ಚಾಲನೆ ಕಂಟೈನ್‌ಮೆಂಟ್ ಹಾಗೂ ಬಫರ್ ಜೋನ್ನ ಜನರ ತಪಾಸಣೆಗೆ ಈ ಬಸ್ ಬಳಕೆಯಾಗಲಿದೆ. ಇದೇ ಬಸ್ನಲ್ಲೇ ಸ್ಕ್ರೀನಿಂಗ್, ಮಾತ್ರೆ, ಔಷಧ ಸೌಲಭ್ಯ ದೊರೆಯಲಿವೆ. ಬಸ್ನಲ್ಲಿ ಒಂದು ಬೆಡ್ ಇದ್ದು, ಇಬ್ಬರು ವೈದ್ಯಕೀಯ ಸಿಬ್ಬಂದಿಗೆ ಆಸನ ವ್ಯವಸ್ಥೆ ಮಾಡಲಾಗಿದೆ.
ಚಾಲನೆ ಕಾರ್ಯಕ್ರಮದ ವೇಳೆ ಬಾಗಲಕೋಟೆ ಡಿಸಿ ಕ್ಯಾಪ್ಟನ್ ರಾಜೇಂದ್ರ, ಸಿಇಓ ಗಂಗೂಬಾಯಿ ಮಾನಕರ್, ಜಿಲ್ಲಾ ಆರೋಗ್ಯಾಧಿಕಾರಿ ಅನಂತ ದೇಸಾಯಿ, ಜಿಲ್ಲಾಸ್ಪತ್ರೆ ಸರ್ಜನ್ ಪ್ರಕಾಶ್ ಬಿರಾದಾರ ಇದ್ದರು.