ಬಾಗಲಕೋಟೆ: ಕೋವಿಡ್-19 ರೋಗ ಹರಡುತ್ತಿರುವ ಹಿನ್ನೆಲೆ ಮುಖ್ಯಮಂತ್ರಿ ಪರಿಹಾರ ನಿಧಿಗೆ ಜಿಲ್ಲೆಯ ವಿವಿಧ ವ್ಯಾಪಾರಸ್ಥರು ಒಟ್ಟು 4.65.555 ರೂಪಾಯಿಗಳನ್ನು ನೀಡುವ ಮೂಲಕ ರೋಗ ಹತೋಟಿಗೆ ತರುವುದಕ್ಕೆ ಕೈ ಜೋಡಿಸಿದ್ದಾರೆ.
ಸಿಎಂ ಪರಿಹಾರ ನಿಧಿಗೆ ಬಾಗಲಕೋಟೆ ವ್ಯಾಪಾರಸ್ಥರಿಂದ ದೇಣಿಗೆ - ಕೋವಿಡ್ ರೋಗ ಹರಡುತ್ತಿರುವ ಹಿನ್ನೆಲೆ
ಕೋವಿಡ್-19 ರೋಗ ಹರಡುತ್ತಿರುವ ಹಿನ್ನೆಲೆ ಮುಖ್ಯಮಂತ್ರಿ ಪರಿಹಾರ ನಿಧಿಗೆ ಜಿಲ್ಲೆಯ ವಿವಿಧ ವ್ಯಾಪಾರಸ್ಥರು ದೇಣಿಗೆ ನೀಡುವ ಮೂಲಕ ರೋಗ ಹತೋಟಿಗೆ ತರುವುದಕ್ಕೆ ಕೈ ಜೋಡಿಸಿದ್ದಾರೆ.
ನಗರದ ಶೀಲವಂತ ಆಂಡ್ ಸನ್ಸ್ ಜುವೆಲ್ಸ್ ಪ್ರೈವೇಟ್ ಲಿಮಿಟೆಡ್ ನಿರ್ದೇಶಕ ರಾಜಶೇಖರ ಶೀಲವಂತ, ಮುಖ್ಯಮಂತ್ರಿ ಪರಿಹಾರ ನಿಧಿಗೆ 2 ಲಕ್ಷ ದೇಣಿಗೆ ನೀಡಿದ್ದಾರೆ. ಅದೇ ರೀತಿಯಾಗಿ ನಗರದ ಪಾಟೀಲ ಪಾಲಿವುಡ್ ಮಾಲೀಕ ಸಿದ್ದೇಗೌಡ ಎಸ್. ಪಾಟೀಲ, ಶಾಸಕ ವೀರಣ್ಣ ಚರಂತಿಮಠ ಅವರೊಂದಿಗೆ ಜಿಲ್ಲಾಧಿಕಾರಿಗಳ ಮೂಲಕ 1 ಲಕ್ಷ ರೂ. ದೇಣಿಗೆ ನೀಡಿದ್ದಾರೆ.
ಮುರುಗೆಪ್ಪ ಜಿಗಜಿನ್ನಿ ಎಂಬುವರು ಮುಖ್ಯಮಂತ್ರಿ ಪರಿಹಾರ ನಿಧಿಗೆ 1.10 ಲಕ್ಷ ರೂ.ಗಳ ಚೆಕ್ ನೀಡಿದ್ದಾರೆ. ಇನ್ನು ಚಿನ್ನಾಭರಣ ವ್ಯಾಪಾರಸ್ಥರಾದ ವೈಭವ ಭಾರ್ಶಿ ಮತ್ತು ಅವರ ಪತ್ನಿ ಪ್ರವೀಣಬೇನ್ 55.555 ರೂ.ಗಳ ದೇಣಿಗೆ ಚೆಕ್ಅನ್ನು ಜಿಲ್ಲಾಧಿಕಾರಿಗಳಿಗೆ ನೀಡಿದ್ದಾರೆ. ಹೀಗೆ ಒಂದೇ ದಿನದಲ್ಲಿ ವಿವಿಧ ವ್ಯಾಪಾರಸ್ಥರು ಕೋವಿಡ್-19 ವಿರುದ್ಧ ಹೋರಾಟಲು ಕೈ ಜೋಡಿಸಿದ್ದಾರೆ.