ಕರ್ನಾಟಕ

karnataka

ETV Bharat / state

ಸುಮ್ನೆ ಕೂರೋಣಾ ಅಂದ್ರೂ ಬಿಡ್ತಿಲ್ಲ ಕೊರೊನಾ: ಸೌದಿಯಿಂದ ಬಂದ ವ್ಯಕ್ತಿಗೆ ತಪಾಸಣೆ - Coronavirus Inspection of person,

ಕೊರೊನಾ ಸೋಂಕು ಎಲ್ಲೆಡೆ ಆತಂಕ ಹೆಚ್ಚಿಸುತ್ತಿದೆ. ಈ ಕೊರೊನಾ ವೈರಸ್​ ಯಾರನ್ನೂ ಸುಮ್ನೆ ಇರುವುದಕ್ಕೂ ಬಿಡ್ತಿಲ್ಲ. ಈಗ ಸೌದಿ ಅರೇಬಿಯಾದಿಂದ ಬಂದ ವ್ಯಕ್ತಿಗೆ ತಪಾಸಣೆ ನಡೆಸಲಾಗಿದೆ.

Coronavirus Inspection, Coronavirus Inspection of person, Coronavirus Inspection of person from Saudi, Coronavirus Inspection of person from Saudi in Bagalkot, ಕೊರೊನಾ ವೈರಸ್​ ತಪಾಸಣೆ, ವ್ಯಕ್ತಿಗೆ ಕೊರೊನಾ ವೈರಸ್​ ತಪಾಸಣೆ, ಸೌದಿಯಿಂದ ಬಂದ ವ್ಯಕ್ತಿಗೆ ಕೊರೊನಾ ವೈರಸ್​ ತಪಾಸಣೆ, ಬಾಗಲಕೋಟೆಯಲ್ಲಿ ಸೌದಿಯಿಂದ ಬಂದ ವ್ಯಕ್ತಿಗೆ ಕೊರೊನಾ ವೈರಸ್​ ತಪಾಸಣೆ,
ಸೌದಿಯಿಂದ ಬಂದ ವ್ಯಕ್ತಿಗೆ ತಪಾಸಣೆ

By

Published : Mar 6, 2020, 10:23 PM IST

ಬಾಗಲಕೋಟೆ:ಸೌದಿ ಅರೇಬಿಯಾದಿಂದ ಬಂದ ವ್ಯಕ್ತಿಗೆ ಕೊರೊನಾ ವೈರಸ್ ತಪಾಸಣೆ ಮಾಡಿರುವ ಘಟನೆ ಬಾಗಲಕೋಟೆ ನಗರದಲ್ಲಿ ನಡೆದಿದೆ.

ಜಿಲ್ಲಾಸ್ಪತ್ರೆಯ ಐಸೋಲೇಶನ್ ವಾರ್ಡ್​ನಲ್ಲಿ ಸೌದಿ ಅರೇಬಿಯಾದಿಂದ ವ್ಯಕ್ತಿಯನ್ನು ವೈದ್ಯರು ಪರೀಕ್ಷೆಗೆ ಒಳಪಡಿಸಿದ್ದಾರೆ. ವಿದೇಶದಲ್ಲಿ ಕೊರೊನಾ ವೈರಸ್ ಹರಡಿರುವ ಹಿನ್ನೆಲೆ ಒಣಕೆಮ್ಮು, ಕಫದ ತೊಂದರೆಯಿಂದ ಬಳಲುತ್ತಿರುವ ವ್ಯಕ್ತಿಗೆ ಮುನ್ನೆಚ್ಚರಿಕೆ ಕ್ರಮವಾಗಿ ಚಿಕಿತ್ಸೆ ನೀಡಿ ವೈದ್ಯರು ಪರೀಕ್ಷೆ ಮಾಡಿದರು.

ಹುನಗುಂದ ಮೂಲದ ವ್ಯಕ್ತಿ ಎಂದು ತಿಳಿದು ಬಂದಿದ್ದು, ಉದ್ಯೋಗಕ್ಕಾಗಿ ಸೌದಿ ಅರೇಬಿಯಾಗೆ ಹೋಗಿದ್ದ. ವ್ಯಕ್ತಿ ವಾಪಸ್ಸಾದ ಪರಿಣಾಮ ಆರೋಗ್ಯ ತಪಾಸಣೆ ಒಳಪಡಿಸಲಾಗಿದೆ. ಆದರೆ ಯಾವುದೇ ಆತಂಕ ಬೇಡ ಎಂದು ವೈದ್ಯರ ಮನವಿ ಮಾಡಿಕೊಂಡಿದ್ದು, ವಿದೇಶದಿಂದ ಬಂದಿದ್ದರಿಂದ ಆರೋಗ್ಯ ತಪಾಸಣೆ ಮಾಡ್ತಿದ್ದೇವೆ. ರಕ್ತದ ಮಾದರಿ ಪರೀಕ್ಷೆಗಾಗಿ ಬೆಂಗಳೂರಗೆ ಕಳುಹಿಸಲಾಗುತ್ತಿದೆ ಎಂದರು.

ಜಿಲ್ಲಾ ಸರ್ವೇಕ್ಷಣಾಧಿಕಾರಿ ವಿಜಯಕುಮಾರ ಕಂಠಿ ಸೇರಿದಂತೆ ವೈದ್ಯರ ತಂಡವು ಮುನ್ನೆಚ್ಚರಿಕೆ ಕ್ರಮಗಳು ಸೇರಿದಂತೆ ಜನತೆಗೆ ಜಾಗೃತಿ ಮೂಡಿಸುವ ಕಾರ್ಯ ನಡೆಸಿದೆ.

ABOUT THE AUTHOR

...view details