ಕರ್ನಾಟಕ

karnataka

By

Published : Feb 9, 2021, 12:50 PM IST

ETV Bharat / state

ಕೊರೊನಾ ವಾರಿಯರ್ಸ್​ಗೆ ಸರ್ಕಾರಿ ಸೌಲಭ್ಯಗಳ ಮೀಸಲಾತಿ ನೀಡಬೇಕು: ನೇತ್ರ ತಜ್ಞನ ಒತ್ತಾಯ

ಸಚಿವರು, ಸಂಸದರು ಹಾಗೂ ಶಾಸಕರಿಗೆ ವಿಐಪಿ ಸೌಲಭ್ಯ ಕಡಿತಗೊಳಿಸಬೇಕು. ಸಚಿವರಿಗೆ ಬೆಂಗಾವಲು ಪಡೆ ಕಡಿಮೆ ಮಾಡಬೇಕು. ಇದರಿಂದ ಪೆಟ್ರೋಲಿಯಂ ಬಳಕೆ ಕಡಿಮೆಯಾಗಿ, ಸರ್ಕಾರಕ್ಕೆ ಆದಾಯ ಬರಲಿದೆ. ಜನಪ್ರತಿನಿಧಿಗಳು ಸರಳತೆ ಮೆರೆಯುವ ಮೂಲಕ ಮಾದರಿ ಆಗಬೇಕು ಎಂದು ನೇತ್ರ ತಜ್ಞ ಡಾ.ಗಿರೀಶ್ ಹೇಳಿದ್ದಾರೆ.

corona-warriors-should-get-government-facilities-reservation
ಕೊರೊನಾ ವಾರಿಯರ್ಸ್​ಗೆ ಸರ್ಕಾರಿ ಸೌಲಭ್ಯಗಳ ಮೀಸಲಾತಿ ನೀಡಬೇಕು: ನೇತ್ರ ತಜ್ಞ

ಬಾಗಲಕೋಟೆ:ಕೊರೊನಾ ವಾರಿಯರ್ಸ್​ ಮಕ್ಕಳಿಗೆ ಶಿಕ್ಷಣ ಸೇರಿದಂತೆ ಇತರ ಸರ್ಕಾರಿ ಸೌಲಭ್ಯಗಳ ಮೀಸಲು ನೀಡುವಂತೆ ಸರ್ಕಾರಕ್ಕೆ ನೇತ್ರ ತಜ್ಞ ಡಾ.ಗಿರೀಶ್ ಮಾಸೂರಕರ್​ ಒತ್ತಾಯಿಸಿದ್ದಾರೆ.

ಕೊರೊನಾ ವಾರಿಯರ್ಸ್​ಗೆ ಸರ್ಕಾರಿ ಸೌಲಭ್ಯಗಳ ಮೀಸಲಾತಿ ನೀಡಬೇಕು: ನೇತ್ರ ತಜ್ಞ

ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, ಸಚಿವರು, ಸಂಸದರು ಹಾಗೂ ಶಾಸಕರಿಗೆ ವಿಐಪಿ ಸೌಲಭ್ಯ ಕಡಿತಗೊಳಿಸಬೇಕು. ಸಚಿವರಿಗೆ ಬೆಂಗಾವಲು ಪಡೆ ಕಡಿಮೆ ಮಾಡಬೇಕು. ಇದರಿಂದ ಪೆಟ್ರೋಲಿಯಂ ಬಳಕೆ ಕಡಿಮೆಯಾಗಿ, ಸರ್ಕಾರಕ್ಕೆ ಆದಾಯ ಬರಲಿದೆ. ಜನಪ್ರತಿನಿಧಿಗಳು ಸರಳತೆ ಮೆರೆಯುವ ಮೂಲಕ ಮಾದರಿ ಆಗಬೇಕು ಎಂದರು.

ಇನ್ನು, ಸರ್ಕಾರಿ ನೌಕರರಿಗೆ ಏಳನೇಯ ವೇತನ ನೀಡದೇ, ವೇತನ ಕಡಿಮೆ ಮಾಡಿ ರಾಜ್ಯದ ಬೊಕ್ಕಸಕ್ಕೆ ಭಾರವಾಗದಂತೆ ನೋಡಿಕೊಳ್ಳಬೇಕಾಗಿದೆ. ಕೋವಿಡ್ ಹಿನ್ನೆಲೆ, ಜಾತ್ರೆ, ಮದುವೆ ಸೇರಿದಂತೆ ಇತರ ಶುಭ ಕಾರ್ಯಕ್ರಮಗಳಿಗೆ ಕಡಿವಾಣ ಹಾಕಿದ ರೀತಿಯಲ್ಲಿ ರಾಜಕೀಯ ಪಕ್ಷಗಳು ಹಮ್ಮಿಕೊಳ್ಳುವ ಸಮಾವೇಶಕ್ಕೂ ಕಡಿವಾಣ ಹಾಕಬೇಕು ಎಂದಿದ್ದಾರೆ.

ABOUT THE AUTHOR

...view details