ಬಾಗಲಕೋಟೆ: ವಿಶ್ವದಲ್ಲಿಯೇ ವ್ಯಾಪಕವಾಗಿ ಹಬ್ಬುತ್ತಿರುವ ಕೊರೊನಾ ವೈರಸ್ ತಡೆಗಟ್ಟಲು ಎಲ್ಲೆಡೆ ಅಗತ್ಯ ಕ್ರಮದ ಜೊತೆಗೆ ಲಾಕ್ಡೌನ್ ನಿಯಮ ಜಾರಿಮಾಡಲಾಗಿದೆ. ಇದಲ್ಲದೇ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹರಡುತ್ತಿರುವ ಕೊರೊನಾ ವೈರಸ್ ನಿಯಂತ್ರಿಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಶೇಷ ಕಾರ್ಯಕ್ರಮಗಳನ್ನು ಜಾರಿ ಮಾಡಿದ್ದು, ಇವರ ಕೈ ಬಲಪಡಿಸುವ ಉದ್ದೇಶದಿಂದ ಕೊರೊನಾ ವೈರಸ್ ಪರಿಹಾರ ನಿಧಿಗೆ ಹಣ ಹರಿದು ಬರುತ್ತಿದೆ.
ಸಿಎಂ ಪರಿಹಾರ ನಿಧಿಗೆ 2.05 ಕೋಟಿ ದೇಣಿಗೆ ನೀಡಿದ ವೀರಶೈವ ವಿದ್ಯಾವರ್ಧಕ ಸಂಘ - ಸಿಎಂ ಪರಿಹಾರ ನಿಧಿಗೆ 2.5 ಕೋಟಿ ನೀಡಿದ ವೀರಣ್ಣ
ಕೊರೊನಾ ವೈರಸ್ ವಿರುದ್ಧ ಹೋರಾಡಲು ಸಿಎಂ ಪರಿಹಾರ ನಿಧಿಗೆ ಹಣ ಹರಿದು ಬರ್ತಿದೆ. ಬಾಗಲಕೋಟೆಯ ಪ್ರತಿಷ್ಠಿತ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದಿಂದ 2 ಕೋಟಿ ರೂ. ಹಾಗೂ ವೈಯಕ್ತಿಕವಾಗಿ ರೂ.5 ಲಕ್ಷ ನೀಡುವುದಾಗಿ ಬಾಗಲಕೋಟೆ ಕ್ಷೇತ್ರದ ಶಾಸಕರು ಹಾಗೂ ಬಿವಿವಿ ಸಂಘದ ಕಾರ್ಯಾಧ್ಯಕ್ಷರಾದ ಡಾ.ವೀರಣ್ಣ ಚರಂತಿಮಠ ಘೋಷಣೆ ಮಾಡಿದ್ದಾರೆ.

ಬಾಗಲಕೋಟೆಯ ಪ್ರತಿಷ್ಠಿತ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದಿಂದ 2 ಕೋಟಿ ರೂ. ಹಾಗೂ ವೈಯಕ್ತಿಕವಾಗಿ ರೂ.5 ಲಕ್ಷ ನೀಡುವುದಾಗಿ ಬಾಗಲಕೋಟೆ ಕ್ಷೇತ್ರದ ಶಾಸಕರು ಹಾಗೂ ಬಿವಿವಿ ಸಂಘದ ಕಾರ್ಯಾಧ್ಯಕ್ಷರಾದ ಡಾ.ವೀರಣ್ಣ ಚರಂತಿಮಠ ಘೋಷಣೆ ಮಾಡಿದ್ದಾರೆ.
ಜಗತ್ತಿನಾಧ್ಯಂತ ಹರಡುತ್ತಿರುವ ಕೊರೊನಾ ವೈರಸ್ ಭಾರತ ದೇಶದಲ್ಲಿಯೂ ಹೆಚ್ಚು ಹರಡುತ್ತಿರುವುದು ದುರದೃಷ್ಟಕರ ಸಂಗತಿ, ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕೊರೊನಾ ವೈರಸ್ ವಿರುದ್ಧ ವಿಶ್ವವೇ ಮೆಚ್ಚುವಂತಹ ಕೆಲಸ ಮಾಡುತಿದ್ದು, ಇಡೀ ದೇಶದ ಜನ ಅವರೊಂದಿಗೆ ಕೈಜೋಡಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಅವರ ಮಾರ್ಗದರ್ಶನದಲ್ಲಿಯೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಸಹ ಕೊರೊನಾ ವೈರಸ್ ತಡೆಗಟ್ಟಲು ಹಲವು ಕ್ರಮ ಕೈಗೊಂಡಿದ್ದಾರೆ ಅದಕ್ಕೆ ನಾವೆಲ್ಲ ಕೈಜೋಡಿಸಬೇಕು ಎಂದಿದ್ದಾರೆ.