ಬಾಗಲಕೋಟೆ: ಜಿಲ್ಲೆಯ ಜಮಖಂಡಿ ನಗರದಲ್ಲಿ ಇಂದು ಮೂವರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಇದು ನಗರದ ಜನತೆಯಲ್ಲಿ ಆತಂಕವನ್ನುಂಟು ಮಾಡಿದೆ.
ಜಮಖಂಡಿಯಲ್ಲಿ ಮತ್ತೆ ಮೂವರಲ್ಲಿ ಕೊರೊನಾ ಸೋಂಕು ಪತ್ತೆ - Jamakhandi
ಬಾಗಲಕೋಟೆಯ ಜಮಖಂಡಿ ನಗರದಲ್ಲಿ ಇಂದು ಮತ್ತೆ ಮೂವರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಇದರಿಂದ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 29ಕ್ಕೇರಿದೆ.
![ಜಮಖಂಡಿಯಲ್ಲಿ ಮತ್ತೆ ಮೂವರಲ್ಲಿ ಕೊರೊನಾ ಸೋಂಕು ಪತ್ತೆ ಜಮಖಂಡಿಯಲ್ಲಿ ಮತ್ತೆ ಮೂವರಲ್ಲಿ ಕೊರೊನಾ](https://etvbharatimages.akamaized.net/etvbharat/prod-images/768-512-6980471-692-6980471-1588092651297.jpg)
ಜಮಖಂಡಿಯಲ್ಲಿ ಮತ್ತೆ ಮೂವರಲ್ಲಿ ಕೊರೊನಾ
ಇದರಿಂದ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 29ಕ್ಕೇರಿದೆ. ರೋಗಿ-381ರ ಸಂಪರ್ಕದಿಂದ ಇಬ್ಬರಿಗೆ ಸೋಂಕು ಹರಡಿದೆ. ರೋಗಿ- 456 ಪ್ರಾಥಮಿಕ ಸಂಪರ್ಕದಿಂದ ಒಬ್ಬರಿಗೆ ಸೋಂಕು ಹರಡಿದೆ. ರೋಗಿ-381ರ ಸಂಪರ್ಕದಿಂದ 20 ವರ್ಷದ ಯುವತಿ p-521 ಸೋಂಕು ದೃಢವಾಗಿದೆ.
ರೋಗಿ- 523 ನಿಗೂ 381ರ ಸಂಪರ್ಕ ದಿಂದ ಸೋಂಕು ತಗುಲಿದೆ. ರೋಗಿ- 456ರ ದ್ವಿತೀಯ ಸಂಪರ್ಕದಿಂದ 11 ವರ್ಷದ ಬಾಲಕನಿಗೆ ಸೋಂಕು ಬಂದಿದೆ. ಇದರಿಂದ ಜಮಖಂಡಿ ನಗರದಲ್ಲೇ ಸೋಂಕಿತರ ಸಂಖ್ಯೆ 9 ಕ್ಕೇರಿದೆ.