ಬಾಗಲಕೋಟೆ :ನಗರದ ಖಾಸಗಿ ವೈದ್ಯ ಹಾಗೂ ವಕೀಲರೊಬ್ಬರಿಗೆ ಕೊರೊನಾ ಸೋಂಕು ಧೃಡ ಪಟ್ಟಿರುವ ಹಿನ್ನೆಲೆ ಆಯಾ ಪ್ರದೇಶದ ಜನತೆ ಆತಂಕ ಪಡುವಂತಾಗಿದೆ. ಮಾತ್ರವಲ್ಲ ವೈದ್ಯನ ಸಂಪರ್ಕದಿಂದಾಗಿ ಮಾಜಿ ಸಚಿವರಿಗೂ ಕೊರೊನಾ ಆತಂಕ ಉಂಟಾಗಿದೆ.
ಹಳೇ ಬಾಗಲಕೋಟೆಯಲ್ಲಿ ಕ್ಲಿನಿಕ್ ನಡೆಸುತ್ತಿದ್ದ ವೈದ್ಯ ಪ್ರತಿನಿತ್ಯ 40 ರಿಂದ 50 ರೋಗಿಗಳನ್ನು ಪರೀಕ್ಷಿಸುತ್ತಿದ್ದರು ಎನ್ನಲಾಗಿದೆ. ಇದೀಗ ವೈದ್ಯರಿಗೆ ಸೋಂಕು ಬಂದಿರುವುದರಿಂದ ಚಿಕಿತ್ಸೆ ಪಡೆದವ್ರೂ ಆತಂಕ ಪಡುವಂತಾಗಿದೆ. ಜೊತೆಗೆ ವಿದ್ಯಾಗಿರಿಯ 17ನೇ ಕ್ರಾಸ್ನ ವಕೀಲರೊಬ್ಬರಿಗೂ ಸೋಂಕು ಪತ್ತೆಯಾದ ಹಿನ್ನೆಲೆ ಆ ಪ್ರದೇಶವನ್ನು ಸೀಲ್ಡೌನ್ ಮಾಡ್ಲಾಗಿದೆ.