ಬಾಗಲಕೋಟೆ:ದುಡಿಯಲು ಹೊರ ಹೋದ ವ್ಯಕ್ತಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಇದರಿಂದ ಭಯಭೀತನಾಗಿ ನಾಪತ್ತೆ ಆಗಿರುವ ಘಟನೆ ಬಾಗಲಕೋಟೆ ನಗರದಲ್ಲಿ ನಡೆದಿದೆ.
ಓದಿ: ಪತಿಯ ಅಂತ್ಯಕ್ರಿಯೆ ಮಾಡಲಾಗದೇ ಪತ್ನಿ ಗೋಳಾಟ.. ಶವ ಸಂಸ್ಕಾರಕ್ಕೆ ಸಹಾಯ ಮಾಡಿದ ಯುವಕರ ತಂಡ!

ಮನೆ ಯಜಮಾನ ನಾಪತ್ತೆ ಆಗಿರುವ ಹಿನ್ನೆಲೆ, ಆತನ ಹೆಂಡತಿ, ಮೂವರು ಚಿಕ್ಕ ಮಕ್ಕಳು, ವಿಕಲಾಂಗ ಅಣ್ಣ ಬೀದಿ ಪಾಲಾಗಿದ್ದಾರೆ. ಬಾಗಲಕೋಟೆ ನಗರದ ಮಾಬು ಸುಭಾನಿ ದರ್ಗಾ ಹತ್ತಿರದ ನಿವಾಸಿ ಅಬ್ದುಲ್ ಮುನಾಫ್ ಎಂಬುವವರು, ಕಳೆದ ಒಂದು ತಿಂಗಳಿಂದ ನಾಪತ್ತೆ ಆಗಿದ್ದಾರೆ.
ಲಾಕ್ಡೌನ್ ವೇಳೆ ಕೆಲಸ ಅರಸಿ ಲೋಕಾಪೂರದ ಸಿಮೆಂಟ್ ಫ್ಯಾಕ್ಟರಿಗೆ ಹೋಗಿದ್ದ ಅಬ್ದುಲ್ ಮುನಾಫ್ ಕೋವಿಡ್ ಟೆಸ್ಟ್ ಮಾಡಿಸಿದ್ದು, ಅದರಲ್ಲಿ ಸೋಂಕು ಧೃಡಪಟ್ಟಿದೆ. ಕೋವಿಡ್ ಪತ್ತೆಯಾಗುತ್ತಿದ್ದಂತೆ ಇದಕ್ಕೆ ಹೆದರಿ ಅಬ್ದುಲ್ ಮುನಾಫ್ ನಾಪತ್ತೆಯಾಗಿದ್ದಾನೆ. ಕುಟುಂಬಕ್ಕೆ ಆಧಾರವಾಗಿದ್ದ ಮುನಾಫ್ ನಾಪತ್ತೆ ಹಿನ್ನೆಲೆ ಈಗ ಕುಟುಂಬದವರು ಬೀದಿಗೆ ಬಿದ್ದಿದ್ದಾರೆ.
ಚಿಕ್ಕ - ಚಿಕ್ಕ ಮಕ್ಕಳನ್ನ ಕಟ್ಟಿಕೊಂಡು ತುತ್ತು ಅನ್ನಕ್ಕೂ ಪರದಾಟ ಮಾಡುತ್ತಿರುವ ಪತ್ನಿಗೆ, ಏನು ಮಾಡಬೇಕು ಎಂಬುದು ದಿಕ್ಕು ತೋಚದಂತಾಗಿದೆ. ಮಹಾಮಾರಿ ಶಾಪಕ್ಕೆ ಕಣ್ಣೀರು ಹಾಕುತ್ತಿರುವ ಈ ಬಡ ಕುಟುಂಬಕ್ಕೆ ಪತಿಯನ್ನು ಎಲ್ಲಿ ಹುಡುಕುವುದು..? ಏನು ಮಾಡುವುದು..? ಎಂಬುದು ತಿಳಿಯದಾಗಿದೆ.