ಬಾಗಲಕೋಟೆ: ಜಿಲ್ಲೆಯಲ್ಲಿ ಇಂದು ಮತ್ತೆ ಇಬ್ಬರಲ್ಲಿ ಕೊರೊನಾ ಸೋಂಕು ದೃಢವಾಗಿದ್ದು ಈ ಪೈಕಿ ಪೇದೆಯೂ ಸೇರಿದ್ದಾರೆ.
ಮಾರ್ಚ್ 27ರಂದು ಮುಧೋಳ ನಗರದ ಮದರಸಾದಲ್ಲಿ ನಿಷೇದಾಜ್ಞೆ ಉಲ್ಲಂಘಿಸಿ ಪ್ರಾರ್ಥನೆ ನಡೆಸಿದ ಹಿನ್ನೆಲೆ ಲಾಠಿ ಪ್ರಹಾರ ನಡೆದಿತ್ತು.
ಬಾಗಲಕೋಟೆ: ಜಿಲ್ಲೆಯಲ್ಲಿ ಇಂದು ಮತ್ತೆ ಇಬ್ಬರಲ್ಲಿ ಕೊರೊನಾ ಸೋಂಕು ದೃಢವಾಗಿದ್ದು ಈ ಪೈಕಿ ಪೇದೆಯೂ ಸೇರಿದ್ದಾರೆ.
ಮಾರ್ಚ್ 27ರಂದು ಮುಧೋಳ ನಗರದ ಮದರಸಾದಲ್ಲಿ ನಿಷೇದಾಜ್ಞೆ ಉಲ್ಲಂಘಿಸಿ ಪ್ರಾರ್ಥನೆ ನಡೆಸಿದ ಹಿನ್ನೆಲೆ ಲಾಠಿ ಪ್ರಹಾರ ನಡೆದಿತ್ತು.
ಲಾಠಿ ಚಾರ್ಜ್ಗೂ ಮುನ್ನ ಪೇದೆ ಜೊತೆ ಮೌಲ್ವಿಗಳು ತಳ್ಳಾಟ ನಡೆಸಿದ್ದರು. ಇನ್ನು ನಿಜಾಮುದ್ದಿನ್ ಜಮಾತ್ನಲ್ಲಿ ಭಾಗಿಯಾಗಿದ್ದ ವ್ಯಕ್ತಿಯು ಕೂಡ ಲಾಠಿ ಏಟು ತಿಂದಿದ್ದ ಎನ್ನಲಾಗಿದೆ. ಈಗಾಗಲೇ ಮದರಸಾದಲ್ಲಿ ಏಟು ತಿಂದ ವ್ಯಕ್ತಿಗೆ ಕೊರೊನಾ ಕಾಣಿಸಿಕೊಂಡಿದ್ದು, ಆತನ ಸಂಪರ್ಕದಿಂದ ಕೊರೊನಾ ಬಂದಿರುವ ಶಂಕೆ ವ್ಯಕ್ತವಾಗಿದೆ.
ಇನ್ನು ಕೊರೊನಾ ಸೋಂಕು ತಗುಲಿದ ಪೊಲೀಸ್ ಮುಧೋಳ ಠಾಣೆ ಪೇದೆ ಎನ್ನಲಾಗಿದೆ. ಇನ್ನು ಜಿಲ್ಲೆಯಲ್ಲಿ ಒಟ್ಟು 12 ಪಾಸಿಟಿವ್ ಪ್ರಕರಣಗಳಲ್ಲಿ ಓಬ್ಬ ವೃದ್ಧ ಮೃತ ಪಟ್ಟಿದ್ದು,11 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ.