ಬಾಗಲಕೋಟೆ: ಜಿಲ್ಲೆಯಲ್ಲಿ ಕೊರೊನಾ ವೈರಸ್ ತಗುಲಿದ್ದ ಪೊಲೀಸ್ ಪೇದೆ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ಮರಳಿದ್ದಾರೆ.
ಕೊರೊನಾ ವೈರಸ್ ತಗುಲಿದ್ದ ಪೊಲೀಸ್ ಪೇದೆ ಆಸ್ಪತ್ರೆಯಿಂದ ಡಿಸ್ಚಾರ್ಜ್ - ಕೊರೊನಾ ವೈರಸ್
ಕೊರೊನಾ ವೈರಸ್ ತಗುಲಿದ್ದ ಮುಧೋಳದ ಪೊಲೀಸ್ ಪೇದೆ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದರು.
![ಕೊರೊನಾ ವೈರಸ್ ತಗುಲಿದ್ದ ಪೊಲೀಸ್ ಪೇದೆ ಆಸ್ಪತ್ರೆಯಿಂದ ಡಿಸ್ಚಾರ್ಜ್ A corona patient discharge in bagalkot](https://etvbharatimages.akamaized.net/etvbharat/prod-images/768-512-7134961-959-7134961-1589077891916.jpg)
ಮುಧೋಳದ 32 ವರ್ಷದ ಪೊಲೀಸ್ ಪೇದೆ ರೋಗಿ ಸಂಖ್ಯೆ-372 ಗುಣಮುಖರಾಗಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ್ ಜಗಲಸಾರ ಹೂವಿನಹಾರ ಹಾಕಿ ಸ್ವಾಗತಿಸಿದರು. ಜಿಲ್ಲೆಯಲ್ಲಿ ಇಲ್ಲಿಯವರೆಗೆ 19 ಜನರು ಗುಣಮುಖರಾಗಿದ್ದು, 44 ಜನರ ವರದಿ ನೆಗಟಿವ್ ಬಂದಿದೆ. ಹೊಸದಾಗಿ ಮತ್ತೆ 90 ಸ್ಯಾಂಪಲ್ಗಳನ್ನು ಪರೀಕ್ಷೆಗೆ ರವಾನಿಸಲಾಗಿದೆ. 938 ಜನ ಪ್ರತ್ಯೇಕ ನಿಗಾದಲ್ಲಿದ್ದು, ಇನ್ಸ್ಟಿಟ್ಯೂಟ್ ಕ್ವಾರಂಟೈನ್ನಲ್ಲಿ 327 ಜನರಿದ್ದಾರೆ.
ಇಲ್ಲಿಯವರೆಗೆ ಕಳುಹಿಸಲಾದ 4,158 ಸ್ಯಾಂಪಲ್ಗಳಲ್ಲಿ 4,006 ಪಾಸಿಟಿವ್ ಬಂದಿವೆ. 51 ಜನರಲ್ಲಿ ಕೊರೊನಾ ಪಾಸಿಟಿವ್ ಬಂದಿದ್ದು, ಒಬ್ಬರು ಮೃತಪಟ್ಟಿದ್ದಾರೆ. 31 ಜನ ಚಿಕಿತ್ಸೆಯಲ್ಲಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ಕೆ.ರಾಜೇಂದ್ರ ಮಾಹಿತಿ ನೀಡಿದ್ದಾರೆ.