ಕರ್ನಾಟಕ

karnataka

ETV Bharat / state

ಕೊರೊನಾ ನೆಗೆಟಿವ್​​: ಬಾಗಲಕೋಟೆಯಲ್ಲಿ ಇಬ್ಬರು ಡಿಸ್ಟಾರ್ಜ್​ - ಇಬ್ಬರದು ನೆಗೆಟಿವ್

ಕೊರೊನಾ ವೈರಸ್ ಭೀತಿಯಿಂದ ಆತಂಕಗೊಂಡಿದ್ದ ಬಾಗಲಕೋಟೆ ಜಿಲ್ಲೆ ಈಗ ತುಸು ಸಮಾಧಾನಗೊಂಡಿದೆ.

Corona Negative: Two Disturge in Bagalkot.
ಕೊರೊನಾ ನೆಗೆಟಿವ್​​: ಬಾಗಲಕೋಟೆಯಲ್ಲಿ ಇಬ್ಬರು ಡಿಸ್ಟಾರ್ಜ್

By

Published : Apr 21, 2020, 1:20 PM IST

ಬಾಗಲಕೋಟೆ:ಜಿಲ್ಲೆಯಲ್ಲಿ ಒಟ್ಟು 21 ಕೊರೊನಾ ಸೋಂಕಿತರಲ್ಲಿ ಒಬ್ಬ ವೃದ್ದ ಮಾತ್ರ ಮೃತಪಟ್ಟಿದ್ದು, ಇದೀಗ ಇಬ್ಬರು ರೋಗಿಗಳ ಪರೀಕ್ಷೆಯಲ್ಲಿ ನೆಗೆಟಿವ್ ರಿಸಲ್ಟ್​ ಬಂದಿದೆ. ಈ ಹಿನ್ನೆಲೆ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ರಾಜೇಂದ್ರ ಸ್ಪಷ್ಟಪಡಿಸಿದ್ದಾರೆ.

ಸ್ಕಾಬ್ ಪರೀಕ್ಷೆಯಲ್ಲಿ ಇಬ್ಬರದು ನೆಗಟಿವ್ ಬಂದಿದ್ದು, ಇವರನ್ನು ಮತ್ತೆ 14 ದಿನಗಳ ಕಾಲ ಹೋಮ್ ಕ್ವಾರಂಟೈನ್​​​ನಲ್ಲಿ ಇಡಲಾಗುತ್ತದೆ. ಆದರೆ, ಬಿಡುಗಡೆ ಆಗಿರುವ ವ್ಯಕ್ತಿಗಳಿಗೆ ಯಾವುದೇ ರೀತಿಯಲ್ಲಿ ಕೊರೊನಾ ವೈರಸ್ ಲಕ್ಷಣ ಕಂಡು ಬಂದಿಲ್ಲ ಎಂಬುದೇ ವಿಶೇಷವಾಗಿದೆ.

ಒಟ್ಟಿನಲ್ಲಿ ಆತಂಕಗೊಂಡಿರುವ ಜಿಲ್ಲೆಯಲ್ಲಿ ಈ ಇಬ್ಬರು ವ್ಯಕ್ತಿಗಳ ರಕ್ತ ಪರೀಕ್ಷೆ ಮಾದರಿ ನೆಗಟಿವ್ ಬಂದಿರುವುದು ಸ್ವಲ್ಪ ಸಮಾಧಾನವನ್ನಂತೂ ತಂದಿದೆ.

ABOUT THE AUTHOR

...view details