ಬಾಗಲಕೋಟೆ:ಜಿಲ್ಲೆಯಲ್ಲಿ ಕಂದಾಯ ಇಲಾಖೆಯ ನಂತರ ಪೊಲೀಸ್ ಠಾಣೆಗಳಿಗೆ ಕೊರೊನಾ ಲಗ್ಗೆ ಇಡುತ್ತಿದೆ. ಬಾಗಲಕೋಟೆ ಜಿಲ್ಲೆಯ ಇಳಕಲ್ ಗ್ರಾಮೀಣ ಠಾಣೆ, ತೇರದಾಳ, ಬನಹಟ್ಟಿ ಹಾಗೂ ಬಾಗಲಕೋಟೆ ಶಹರ್ ಪೊಲೀಸ್ ಠಾಣೆಗಳಲ್ಲಿ ತಲಾ ಒಬ್ಬ ಸಿಬ್ಬಂದಿಗೆ ಕೊರೊನಾ ಸೋಂಕು ಬಂದಿರುವುದು ವರದಿಯಾಗಿದೆ.
ಬಾಗಲಕೋಟೆ: ಸರ್ಕಾರಿ ಕಚೇರಿಗಳನ್ನು ಆವರಿಸಿಕೊಳ್ತಿದೆ ಕೊರೊನಾ - Bagalkot Revenue Department staff
ಬಾಗಲಕೋಟೆ ಜಿಲ್ಲೆಯಲ್ಲಿ ಕಂದಾಯ ಇಲಾಖೆಯ ನಂತರ ಪೊಲೀಸ್ ಠಾಣೆಗಳಿಗೆ ಕೊರೊನಾ ಲಗ್ಗೆ ಇಡುತ್ತಿದೆ. ಬಾಗಲಕೋಟೆ ಇಳಕಲ್ ಗ್ರಾಮೀಣ ಠಾಣೆ, ತೇರದಾಳ, ಬನಹಟ್ಟಿ ಹಾಗೂ ಬಾಗಲಕೋಟೆ ಶಹರ ಪೊಲೀಸ್ ಠಾಣೆಗೂ ಕೊರೊನಾ ಭೀತಿ ಆವರಿಸಿದೆ.
ಸರ್ಕಾರಿ ಕಚೇರಿಗಳನ್ನು ಆವರಿಸಿಕೊಳ್ಳುತ್ತಿರುವ ಕೊರೊನಾ ಮಹಾಮಾರಿ
ಈ ಠಾಣೆಗಳನ್ನ ಬೇರೆಡೆ ಸ್ಥಳಾಂತರಿಸಿ ಕರ್ತವ್ಯ ನಿರ್ವಹಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಅಲ್ಲದೆ, ಠಾಣೆಗಳಲ್ಲಿ ಸ್ಯಾನಿಟೈಸೇಶನ್ ಮಾಡಿಸಲಾಗಿದೆ.
ಕೊರೊನಾ ಪಾಸಿಟಿವ್ ಬಂದ ಸಿಬ್ಬಂದಿಗಳ ಪ್ರಾಥಮಿಕ ಸಂಪರ್ಕದ ವ್ಯಕ್ತಿಗಳನ್ನು ಗುರುತಿಸಿ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ್ ಜಗಲಾಸರ ತಿಳಿಸಿದ್ದಾರೆ.