ಕರ್ನಾಟಕ

karnataka

ETV Bharat / state

ಕೃಷ್ಣಾ ಜಲಾನಯನ ಪ್ರದೇಶದಲ್ಲಿ ನಿರಂತರ ಮಳೆ: ಸೇತುವೆ ಮುಳುಗಡೆ - Krishna watershed

ಮಹಾರಾಷ್ಟ್ರದ ಹಲವೆಡೆ ಧಾರಾಕಾರ ಮಳೆ ಸುರಿಯುತ್ತಿದೆ. ಇನ್ನು ಕೃಷ್ಣಾ ಜಲಾನಯನ ಪ್ರದೇಶಗಳಲ್ಲಿಯೂ ನಿರಂತರ ಮಳೆ ಬೀಳುತ್ತಿದ್ದು ಕೃಷ್ಣಾ ನದಿಗೆ ಮಂಗಳವಾರ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ.

ಕೃಷ್ಣಾ ಜಲಾನಯನ ಪ್ರದೇಶಗಳಲ್ಲಿ ನಿರಂತರ ಮಳೆ

By

Published : Jul 3, 2019, 11:36 AM IST

ಬಾಗಲಕೋಟೆ: ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಮಳೆಯಾಗುತ್ತಿರುವುದರಿಂದ ಕೃಷ್ಣಾ ನದಿಗೆ ಮಂಗಳವಾರ 25,300 ಕ್ಯೂಸೆಕ್ ನೀರು ಹರಿದು ಬಂದಿತು. ಅಪಾರ ಪ್ರಮಾಣದ ನೀರು ಹರಿದು ಬಂದಿದ್ದರಿಂದ ಮಂಗಳವಾರದಿಂದ ರಬಕವಿ - ಬನಹಟ್ಟಿ ಹಾಗೂ ಜಮಖಂಡಿ ತಾಲೂಕುಗಳಿಂದ ಅಥಣಿ ತಾಲೂಕಿನ ವಿವಿಧ ಗ್ರಾಮಗಳಿಗೆ ತೆರಳಲು ಬೋಟ್ ಸೇವೆ ಆರಂಭಿಸಲಾಗಿದೆ.

ಜಲಾವೃತಗೊಂಡ ಸೇತುವೆ:

ಮೂರು ತಿಂಗಳುಗಳಿಂದ ನದಿ ಪಾತ್ರದ ಜನರು ಅಂದರೆ ಅಥಣಿ ತಾಲೂಕಿನ ಹಲವು ಗ್ರಾಮಸ್ಥರು ಬನಹಟ್ಟಿ - ರಬಕವಿ, ತೇರದಾಳ ಮಹಾಲಿಂಗಪೂರ ಮುಂತಾದ ನಗರಗಳಿಗೆ ಹಣ್ಣು, ತರಾಕರಿ, ಮೊಸರು ಸೇರಿದಂತೆ ವಾಣಿಜ್ಯ ವ್ಯವಹಾರದ ಸಲುವಾಗಿ ಸಂಪರ್ಕ ಸಾಧಿಸಲು ಈ ಸೇತುವೆ ಮಾರ್ಗವನ್ನು ಬಳಸುತ್ತಿದ್ದರು. ಈಗ ಅಪಾರ ಪ್ರಮಾಣದ ನೀರು ಹರಿದು ಬರುತ್ತಿರುವುದರಿಂದ ಸೇತುವೆ ಮುಳಗಿದ್ದು, ಜನರು ಈಗ ಬೋಟ್ ಮೂಲಕ ಹೋಗುತ್ತಿದ್ದಾರೆ.

ಕೃಷ್ಣಾ ಜಲಾನಯನ ಪ್ರದೇಶಗಳಲ್ಲಿ ನಿರಂತರ ಮಳೆ

ಸಮೀಪದ ಹಿಪ್ಪರಗಿ ಜಲಾಶಯಕ್ಕೆ ಬೆಳಗ್ಗೆ 25,300 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು ಅಷ್ಟೇ ಪ್ರಮಾಣದ ನೀರನ್ನು ನದಿಯ ಮುಂಭಾಗಕ್ಕೆ ಹರಿ ಬಿಡಲಾಗುತ್ತಿದೆ. ಕೃಷ್ಣಾ ಜಲಾನಯನ ಪ್ರದೇಶಗಳಾದ ಕೊಯ್ನಾದಲ್ಲಿ 107 ಮಿ.ಮೀ, ನವುಜಾ 190 ಮಿ.ಮೀ, ಮಹಾಬಲೇಶ್ವರ 149 ಮಿ.ಮೀ, ಸಾಂಗ್ಲಿ 12 ಮಿ.ಮೀ, ವಾರಣಾ 64 ಮಿ.ಮೀ, ಕೊಲ್ಲಾಪುರ 21 ಮಿ.ಮೀ, ರಾಧಾನಗರಿ 60 ಮಿ.ಮೀ, ದೂಧಗಂಗಾ 54 ಮಿ.ಮೀ ಮಳೆಯಾದ ವರದಿಯಾಗಿದೆ ಎಂದು ರಬಕವಿ-ಬನಹಟ್ಟಿ ಗ್ರೇಡ್ 2 ತಹಶೀಲ್ದಾರ್ ಎಸ್.ಬಿ.ಕಾಂಬಳೆ ತಿಳಿಸಿದರು.

ABOUT THE AUTHOR

...view details