ಕರ್ನಾಟಕ

karnataka

ETV Bharat / state

ಉಮೇಶ್​ ಕತ್ತಿ ಪಕ್ಷ ತೊರೆಯುವುದಿಲ್ಲ: ಕೆ.ಎಸ್.ಈಶ್ವರಪ್ಪ ಸ್ಪಷ್ಟನೆ - bagaloke political news

ಶಾಸಕ ಉಮೇಶ ಕತ್ತಿ ಯಾವುದೇ ಕಾರಣಕ್ಕೂ ಪಕ್ಷ ತೊರೆಯುವುದಿಲ್ಲ. ರಾಜಕೀಯ ಸಂತ್ರಸ್ತರಾಗಿರುವ ಕಾಂಗ್ರೆಸ್​ ಮಾತಿಗೆ ಕಿವಿಗೊಡಬೇಡಿ ಎಂದು ಸಚಿವ ಕೆ.ಎಸ್.ಈಶ್ವರಪ್ಪ ನೇರವಾಗಿ ಕುಟುಕಿದ್ದಾರೆ.

ಸಚಿವ ಕೆ.ಎಸ್​.ಈಶ್ವರಪ್ಪ

By

Published : Aug 22, 2019, 7:59 PM IST

ಬಾಗಲಕೋಟೆ:ಯಾವುದೇ ಕಾರಣಕ್ಕೂ ಶಾಸಕ ಉಮೇಶ್​ ಕತ್ತಿ ಪಕ್ಷ ತೊರೆಯುವುದಿಲ್ಲ. ಇಂತಹ ಊಹಾಪೋಹಗಳಿಗೆ ಕಿವಿಗೊಡಬೇಡಿ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಸ್ಪಷ್ಟಪಡಿಸಿದರು.

ಇಲ್ಲಿನ ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಮಠ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಮಾತನಾಡಿದರು.

ಸಚಿವ ಕೆ.ಎಸ್​.ಈಶ್ವರಪ್ಪ

ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್​ನ ನಾಯಕರೂ ಸಂತ್ರಸ್ತರಾಗಿದ್ದಾರೆ. ಅವರ ಮಾತುಗಳಿಗೆ ಕಿವಿಗೊಡಬೇಡಿ. ಇಂತಹ ನಿರಾಶ್ರಿತರಿಗೆ ಉಮೇಶ ಕತ್ತಿ ನೆರವು

ನೀಡಬಹುದೇನೋ ಎಂದು ಕಾಂಗ್ರೆಸ್​ನವರು ಕರೆದಿರಬಹುದು ಎಂದು ವ್ಯಂಗ್ಯವಾಡಿದರು.

ರಾಜ್ಯದ ವಿಪಕ್ಷ ನಾಯಕರನ್ನು, ರಾಷ್ಟ್ರೀಯ ಅಧ್ಯಕ್ಷರನ್ನು ಆಯ್ಕೆ ಮಾಡುವ ಶಕ್ತಿ ಕಾಂಗ್ರೆಸ್​ಗೆ ಇಲ್ಲ ಎಂದು ಕುಟುಕಿದರು. ಇದೇ ಸಂದರ್ಭದಲ್ಲಿ ಸಾಮಾಜಿಕ ನ್ಯಾಯದಡಿ ಭೋವಿ ಸಮಾಜಕ್ಕೆ ಸಚಿವ ಸ್ಥಾನ ಬೇಕು ಎಂದು ಶ್ರೀಗಳು ಒತ್ತಾಯಿಸಿದರು.

ABOUT THE AUTHOR

...view details