ಬಾಗಲಕೋಟೆ: ಜಿಲ್ಲೆಯ ಕೃಷ್ಣ, ಘಟಪ್ರಭಾ ಹಾಗೂ ಮಲ್ಲಪ್ರಭಾ ನದಿಗಳಿಂದ ಪ್ರವಾಹ ಉಂಟಾಗಿರುವ ಪ್ರದೇಶಗಳಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಹೆಲಿಕ್ಟಾಪರ್ ಮೂಲಕ ವೈಮಾನಿಕ ಸಮೀಕ್ಷೆ ನಡೆಸಿದರು.
ನೆರೆಯಿಂದ ನಲುಗಿದ ಬಾಗಲಕೋಟೆ: ವೈಮಾನಿಕ ಸಮೀಕ್ಷೆ ನಡೆಸಿದ ಸಿಎಂ - undefined
ಪ್ರವಾಹ ಉಂಟಾಗಿರುವ ಪ್ರದೇಶಗಳಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಹೆಲಿಕ್ಟಾಪರ್ ಮೂಲಕ ವೈಮಾನಿಕ ಸಮೀಕ್ಷೆ ನಡೆಸಿದರು.
![ನೆರೆಯಿಂದ ನಲುಗಿದ ಬಾಗಲಕೋಟೆ: ವೈಮಾನಿಕ ಸಮೀಕ್ಷೆ ನಡೆಸಿದ ಸಿಎಂ](https://etvbharatimages.akamaized.net/etvbharat/prod-images/768-512-4086601-thumbnail-3x2-cm.jpg)
ವೈಮಾನಿಕ ಸಮೀಕ್ಷೆ ನಡೆಸಿದ ಸಿಎಂ
ವೈಮಾನಿಕ ಸಮೀಕ್ಷೆ ನಡೆಸಿದ ಸಿಎಂ
ಮುಧೋಳ ಪಟ್ಟಣದಿಂದ ಹೆಲಿಕಾಪ್ಟರ್ ಮೂಲಕ ಕೃಷ್ಣ ನದಿಯ ಚಿಕ್ಕ ಪಡಸಲಗಿ ಬ್ಯಾರೇಜ್, ಹಿಪ್ಪರಗಿ ಬ್ಯಾರೇಜ್ ನಂತರ ಆಲಮಟ್ಟಿ ಜಲಾಶಯದ ಮೂಲಕ ಕೂಡಲಸಂಗಮ, ಬಾದಾಮಿ ತಾಲೂಕಿನಲ್ಲಿ ಐತಿಹಾಸಿಕ ಸ್ಥಳಗಳು, ಐಹೊಳೆ, ಪಟ್ಟದಕಲ್ಲು ಹಾಗೂ ಶಿವಯೋಗಿ ಮಂದಿರ ಸೇರಿದಂತೆ ನಡುಗಡ್ಡೆ ಆಗಿರುವ ಪ್ರದೇಶಗಳ ಸಮೀಕ್ಷೆ ನಡೆಸಿದರು.
ಬಳಿಕ ಬಾಗಲಕೋಟೆ ನಗರಕ್ಕೆ ಆಗಮಿಸಿ, ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.