ಬಾಗಲಕೋಟೆ: ಕಳೆದ ರಾತ್ರಿಯಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಜಿಲ್ಲೆಯಲ್ಲಿ ಮನೆಗಳು ಕುಸಿದು ಹಾನಿ ಉಂಟಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
ಬಾಗಲಕೋಟೆಯಲ್ಲಿ ಧಾರಾಕಾರ ಮಳೆಗೆ ಮಣ್ಣಿನ ಮನೆಗಳು ಕುಸಿತ: ರಸ್ತೆಗಳು ಜಲಾವೃತ - ಬಾಗಲಕೋಟೆ ಮಳೆ ಸುದ್ದಿ
ಮನ್ನಿಕಟ್ಟಿ ಗ್ರಾಮದ ಈಶಪ್ಪ ಬಡಿಗೇರ, ಬಸಮ್ಮ ಹುಣಸಿಕಟ್ಟಿ ಎಂಬುವರ ಮಣ್ಣಿನ ಮನೆ ಕುಸಿತವಾಗಿದೆ. ರಾತ್ರಿಯಿಡೀ ಸುರಿದ ಮಳೆಗೆ ಬೆಳಗ್ಗೆ ಐದು ಗಂಟೆ ಸುಮಾರಿಗೆ ಮನೆ ಗೋಡೆ ಮೇಲ್ಛಾವಣಿ ಕುಸಿದು ಬಿದ್ದಿದೆ. ಮನೆಯವರು ಬೆಳಗ್ಗೆ ಬೇಗ ಎದ್ದ ಹಿನ್ನೆಲೆ ಅನಾಹುತ ತಪ್ಪಿದೆ.

ಜಿಲ್ಲೆಯಲ್ಲಿ ರಾತ್ರಿ ಸುರಿದ ಧಾರಾಕಾರ ಮಳೆ ಹಿನ್ನೆಲೆ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿದ್ದು, ರಸ್ತೆ, ಜಮೀನಿಗೆ ನೀರು ನುಗ್ಗಿದೆ. ಹುನಗುಂದ ತಾಲೂಕಿನ ಕರಡಿ ಮಾರ್ಗದ ಬೇಕಮಲದಿನ್ನಿ ಗ್ರಾಮದ ಬಳಿ ರಸ್ತೆ ಜಲಾವೃತಗೊಂಡಿದೆ. ಹುನಗುಂದ ಕರಡಿ ಮಾರ್ಗದ ಹತ್ತು ಹಳ್ಳಿಗಳ ಸಂಪರ್ಕ ಕಡಿತವಾಗಿದೆ. ರಸ್ತೆ ಮೇಲೆ ನಾಲ್ಕು ಅಡಿಗೂ ಹೆಚ್ಚು ನೀರು ಹರಿಯುತ್ತಿದ್ದು, ಸಂಚಾರಕ್ಕೆ ಗ್ರಾಮಸ್ಥರು ಪರದಾಡುವಂತಾಗಿದೆ.