ಬಾಗಲಕೋಟೆ : ಜಿಲ್ಲೆಯ ಚೌಡಾಪುರ ಗ್ರಾಮದಲ್ಲಿ ಎರಡು ಗುಂಪುಗಳ ಮಧ್ಯೆ ಘರ್ಷಣೆ ಉಂಟಾಗಿ ಹಾಡಹಗಲೇ ರಕ್ತ ಬರುವ ರೀತಿ ಹಲ್ಲೆ ನಡೆದಿದೆ. ಈ ಘಟನೆಯಲ್ಲಿ15 ಜನ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಎರಡು ಗುಂಪುಗಳ ನಡುವೆ ಮಾರಾಮಾರಿ.. ಹಳೆಯ ವೈಷಮ್ಯ ಹಾಗೂ ರಾಜಕೀಯ ತಿಕ್ಕಾಟದಿಂದ ಎರಡು ಕುಟುಂಬಗಳ ಮಧ್ಯೆ ಗಲಾಟೆ ಉಂಟಾಗಿದ್ದು, ಪರಸ್ಪರ ಕಲ್ಲು ತೂರಾಟ ನಡೆದಿರುವ ವಿಡಿಯೋ ಇದೀಗ ವೈರಲ್ ಆಗಿದೆ. ಚೌಡಾಪುರ ಗ್ರಾಮದ ಶಂಕರಪ್ಪ ಭಗವತಿ ಹಾಗೂ ವಾಸಪ್ಪ ಬೀರಗೊಂಡ ಕುಟುಂಬಗಳ ನಡುವೆ ಹೊಲದ ದಾರಿಗೆ ಸಂಬಂಧ ಬಹಳ ದಿನಗಳಿಂದ ವೈರತ್ವ ಇತ್ತು ಎನ್ನಲಾಗಿದೆ.
ಎರಡು ಕುಟುಂಬದವರು ಕೈಯಲ್ಲಿ ದೊಣ್ಣೆ, ಕೊಡಲಿ ಹಿಡಿದು ಪರಸ್ಪರ ಹಲ್ಲೆ ಮಾಡಿಕೊಂಡಿದ್ದಾರೆ. ಗಾಯಗೊಂಡವರನ್ನು ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಹಲ್ಲೆಯಿಂದ ಮನೆ ಮುಂದೆ ನಿಲ್ಲಿಸಿ, ಬೈಕ್, ಟ್ರ್ಯಾಕ್ಟರ್ ಜಖಂಗೊಂಡಿವೆ.
ಘಟನೆಯ ಮಾಹಿತು ಪಡೆದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ್ ಜಗಲಾಸರ ಸೂಕ್ತ ಭದ್ರತೆ ಏರ್ಪಡಿಸಿ, ತನಿಖೆ ನಡೆಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡೂ ಕಡೆಯಿಂದ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.