ಬಾಗಲಕೋಟೆ:ಕಳೆದ ಮೂರು ದಿನಗಳಿಂದಲೂಮಲಪ್ರಭಾ ನದಿ ಪ್ರವಾಹದಿಂದ ಸಾಕಷ್ಟು ಹಾನಿಗೊಳಗಾಗಿದ್ದ ಬಾದಾಮಿ ಕ್ಷೇತ್ರವೂ ಸೇರಿ ಬಾಗಲಕೋಟೆ ಜಿಲ್ಲೆಯಹತ್ತಾರು ಗ್ರಾಮಗಳಿಗೆ ತೆರಳಿ ಮಾಜಿ ಸಿಎಂ ಸಿದ್ದರಾಮಯ್ಯ ಪರಿಶೀಲನೆ ನಡೆಸುತ್ತಿದ್ದಾರೆ. ಸಂತ್ರಸ್ತರ ನೋವು, ಸಮಸ್ಯೆಗಳನ್ನ ಆಲಿಸುತ್ತಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರವಾಹ ವೀಕ್ಷಣೆಯಲ್ಲೂ ದ್ವೇಷದ ರಾಜಕೀಯ ಆರೋಪ.. - kannadanews
ಪ್ರವಾಹಕ್ಕೆ ತುತ್ತಾಗಿ ನಲುಗಿದ್ದ ಬಾಗಲಕೋಟೆಗೆ ತೆರಳಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಪ್ರವಾಹ ವೀಕ್ಷಣೆಯಲ್ಲೂ ದ್ವೇಷದ ರಾಜಕೀಯ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಸಿದ್ದರಾಮಯ್ಯ ವಿರುದ್ಧ ಪ್ರವಾಹ ವೀಕ್ಷಣೆಯಲ್ಲೂ ದ್ವೇಷದ ರಾಜಕೀಯ ಆರೋಪ
ಆದರೆ, ಪ್ರವಾಹ ವೀಕ್ಷಣೆ ವೇಳೆ ಸಿದ್ದರಾಮಯ್ಯ ಬಾದಾಮಿ ತಾಲೂಕಿನ ಪ್ರಸಿದ್ದ ಧಾರ್ಮಿಕ ಕೇಂದ್ರ ಶ್ರೀಶಿವಯೋಗ ಮಂದಿರಕ್ಕೆ ಭೇಟಿ ನೀಡುವುದನ್ನು ಉದ್ದೇಶಪೂರ್ವಕವಾಗಿ ಮರೆತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಲಿಂಗೈಕ್ಯ ಹಾನಗಲ್ ಕುಮಾರಸ್ವಾಮಿಗಳು ಆರಂಭಿಸಿದ ಶಿವಯೋಗ ಮಂದಿರ ಪ್ರವಾಹಕ್ಕೆ ನಲುಗಿ ಸಾಕಷ್ಟು ಹಾನಿ ಉಂಟಾಗಿತ್ತು. ಇದು ಮಾಜಿ ಸಿಎಂ ಸಿದ್ದರಾಮಯ್ಯನವರ ಕ್ಷೇತ್ರವಾಗಿದ್ರೂ, ಶಿವಯೋಗ ಮಂದಿರದ ಅಕ್ಕಪಕ್ಕ, ಹಿಂದೆ, ಮುಂದಿನ ಗ್ರಾಮಗಳಿಗೆ ಭೇಟಿ ಮಾಡಿದ್ದ ಸಿದ್ದರಾಮಯ್ಯನವರು ಧಾರ್ಮಿಕ ಕ್ಷೇತ್ರಕ್ಕೆ ಮಾತ್ರ ಭೇಟಿ ನೀಡದೆ ಇರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.