ಬಾಗಲಕೋಟೆ: ಜಿಲ್ಲೆಯ ವಿವಿಧ ಪ್ರವಾಹ ಪೀಡಿತ ಪ್ರದೇಶಗಳಿಗೆ ಕೇಂದ್ರ ಅಧ್ಯಯನ ತಂಡವು ಭೇಟಿ ನೀಡಿ, ಪರಿಶೀಲನೆ ನಡೆಸಿದೆ. ಮೊದಲು ಬದಾಮಿ ಗೋವನಕೊಪ್ಪ ಗ್ರಾಮದ ಬಳಿಯ ಮಲಪ್ರಭಾ ನದಿಯ ಸೇತುವೆ ವೀಕ್ಷಣೆ ಮಾಡಿ, ಪರಿಶೀಲಿಸಲಾಯಿತು.
ಬೆಂಗಳೂರಿನ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಪ್ರಾದೇಶಿಕ ಕಚೇರಿಯ ಅಧೀಕ್ಷಕ ಎಂಜಿನಿಯರ್ ಸದಾನಂದ ಬಾಬು ಹಾಗೂ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಕಾರ್ಯದರ್ಶಿ ವಿ.ಪಿ.ರಾಜವೇದಿ ಒಳಗೊಂಡ ಅಧಿಕಾರಿಗಳ ತಂಡವು ಗದಗ ಜಿಲ್ಲೆಯ ಪ್ರವಾಹ ಹಾನಿ ವೀಕ್ಷಣೆ ನಂತರ ಜಿಲ್ಲೆಗೆ ಆಗಮಿಸಿತ್ತು. ಕೊಣ್ಣೂರ ಸೇತುವೆ ಬಳಿ ನಿಂತು ಮಲಪ್ರಭಾ ನದಿಯ ಹರಿಯುವ ನೀರಿನ ಪ್ರಮಾಣ ಹಾಗೂ ಬೆಳೆಗಳಿಗೆ ಹಾನಿಯ ಬಗ್ಗೆ ಈ ವೇಳೆ ವೀಕ್ಷಣೆ ಮಾಡಲಾಯಿತು.