ಕರ್ನಾಟಕ

karnataka

ETV Bharat / state

ಪ್ರವಾಹಕ್ಕೆ ಮುಗುಚಿದ ವಾಹನ : 7 ಮಂದಿ ಬಚಾವ್​ ಆಗಿದ್ದು ಹೇಗೆ? - Vinod baragi

ನಿಯಂತ್ರಣ ತಪ್ಪಿ ರಸ್ತೆಯಿಂದ ಪ್ರವಾಹಕ್ಕೆ ಮುಗುಚಿದ ವಾಹನದಲ್ಲಿದ್ದ 7 ಮಂದಿ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಧಿಕಾರಿಗಳ ಸಮಯ ಪ್ರಜ್ಞೆಯಿಂದ ಭಾರೀ ದುರಂತ ತಪ್ಪಿದೆ.

ಪ್ರವಾಹಕ್ಕೆ ಮುಗುಚಿದ ವಾಹನ

By

Published : Aug 16, 2019, 3:35 PM IST

ಬಾಗಲಕೋಟೆ : ನೆರೆ ಪೀಡಿತ ಪ್ರದೇಶದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಬೊಲೆರೋ ವಾಹನ ಪ್ರವಾಹದ ನೀರಿನಲ್ಲಿ ಬಿದ್ದಿದೆ. ಹಿಪ್ಪರಗಿ ಬ್ಯಾರೇಜ್​ನಲ್ಲಿ ಅವಘಡ ಸಂಭವಿಸಿದ್ದು, ಅಪಾಯದಲ್ಲಿದ್ದ 7 ಮಂದಿಯನ್ನು ರಕ್ಷಿಸಲಾಗಿದೆ.

ಪ್ರವಾಹದ ನೀರಲ್ಲಿ ಮುಳುಗುತ್ತಿದ್ದ ಏಳು ಜನರನ್ನು ಜಮಖಂಡಿ ಕೃಷಿ ಇಲಾಖೆ ವಾಹನ ಚಾಲಕ ವಿನೋದರೆಡ್ಡಿ ಬರಗಿ ಕಾಪಾಡಿದ್ದಾರೆ. ಕೃಷಿ ಅಧಿಕಾರಿಗಳು ಹಿಪ್ಪರಗಿಯಿಂದ ಜಮಖಂಡಿಗೆ ಪ್ರಯಾಣಿಸುತ್ತಿದ್ದಾಗ ಕಣ್ಣ ಮುಂದೆಯೇ ಅವಘಡ ಸಂಭವಿಸಿದೆ. ಕೂಡಲೇ ರಕ್ಷಣೆಗೆ ಇಳಿದ ಕೃಷಿ ಇಲಾಖೆ ಸಿಬ್ಬಂದಿ ನೀರಿನಲ್ಲಿ ಮುಳುಗುತ್ತಿದ್ದವರನ್ನು ರಕ್ಷಿಸಿದೆ.

ಪ್ರವಾಹಕ್ಕೆ ಮುಗುಚಿದ ವಾಹನ

ಬೊಲೆರೊ ವಾಹನದಲ್ಲಿದ್ದ ಏಳು ಮಂದಿ ಮಹಾರಾಷ್ಟ್ರ ಮೂಲದವರು ಎನ್ನಲಾಗುತ್ತಿದೆ. ಜಮಖಂಡಿಯಿಂದ ಮಹಾರಾಷ್ಟ್ರದ ಕಡೆಗೆ ಪ್ರಯಾಣಿಸುತ್ತಿದ್ದ ವೇಳೆ ಘಟನೆ ನಡೆದಿದೆ. ಸದ್ಯ ವಾಹನದಲ್ಲಿದ್ದ ಏಳೂ ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ABOUT THE AUTHOR

...view details