ಕರ್ನಾಟಕ

karnataka

ETV Bharat / state

ಬಾಗಲಕೋಟೆಯಲ್ಲಿ ಸಹೋದರರ ಸವಾಲ್​? ಬಿಜೆಪಿ ಶಾಸಕ ಚರಂತಿಮಠ ವಿರುದ್ಧ ಸಹೋದರನ ಬಂಡಾಯ - ಬಿಜೆಪಿ ಅಭ್ಯರ್ಥಿ

ಮಲ್ಲಿಕಾರ್ಜುನ ಚರಂತಿಮಠ ಅವರು ಸಾವಿರಾರು ಸಂಖ್ಯೆಯ ಅಭಿಮಾನಿಗಳ ಸಮ್ಮುಖದಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಯುವ ಮುಖಂಡ ಸಂತೋಷ ಹೊಕ್ರಾಣಿ ಹೇಳಿದ್ದಾರೆ.

Youth leader Santhosh Hokrani clarified
ಯುವ ಮುಖಂಡ ಸಂತೋಷ ಹೋಕ್ರಾಣಿ ಸ್ಪಷ್ಟನೆ

By

Published : Apr 14, 2023, 7:10 PM IST

Updated : Apr 14, 2023, 10:53 PM IST

ಯುವ ಮುಖಂಡ ಸಂತೋಷ ಹೊಕ್ರಾಣಿ ಮಾತನಾಡಿದರು.

ಬಾಗಲಕೋಟೆ: ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಇಲ್ಲಿನ ಶಾಸಕರ ಸಹೋದರ ಮಲ್ಲಿಕಾರ್ಜುನ ಚರಂತಿಮಠ ಸ್ಪರ್ಧೆ ಮಾಡುವುದು ಖಚಿತವಾಗಿದೆ. ಇದರಿಂದ ಸಹೋದರ ಸವಾಲ್​​ಗೆ ಚುನಾವಣೆ ಅಖಾಡ ಸಿದ್ಧಗೊಂಡಿದ್ದು ನೀನಾ...ನಾನಾ ಎಂಬಂತಾಗಿ ಚುನಾವಣೆಯ ಕಣ ರಂಗೇರಿದೆ.

ಕಳೆದ ಆರು ತಿಂಗಳನಿಂದಲೂ ಶಾಸಕ ವೀರಣ್ಣ ಚರಂತಿಮಠ ಅವರಿಗೆ ಬಿಜೆಪಿ ಪಕ್ಷದಿಂದ ಟಿಕೆಟ್ ನೀಡಬಾರದು. ಈ ಬಾರಿ ಬದಲಾವಣೆ ಮಾಡುವಂತೆ ಹೈಕಮಾಂಡ್​ಗೆ ಸಾಕಷ್ಟು ಒತ್ತಡ ತಂದಿದ್ದರು. ಈಗಿನ ಹಾಲಿ ಶಾಸಕರಿಗೆ ಟಿಕೆಟ್ ನೀಡಿದ್ದಲ್ಲಿ, ಬಂಡಾಯದ ಬಾವುಟ ಹಾರಿಸಲಾಗುವುದು ಎಂದು ಮೊದಲೇ ತಿಳಿಸಿದ್ದರು.

ಈಗ ಶಾಸಕ ವೀರಣ್ಣ ಚರಂತಿಮಠ ಅವರಿಗೆ ಟಿಕೆಟ್ ನೀಡಿರುವುದಕ್ಕೆ ಮಲ್ಲಿಕಾರ್ಜುನ ಚರಂತಿಮಠ ಬಂಡಾಯದ ಬಾವುಟ ಹಾರಿಸಿದ್ದಾರೆ. ಈ ಬಗ್ಗೆ ಯುವ ಮುಖಂಡ ಸಂತೋಷ ಹೋಕ್ರಾಣಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಒಳ್ಳೆಯ ದಿನವನ್ನು ನೋಡಿಕೊಂಡು ಸಾವಿರಾರು ಸಂಖ್ಯೆಯ ಜನರ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಶಾಸಕರು ಕಾರ್ಯಕರ್ತರನ್ನು ಕಡೆಗಣಿಸಿದ್ದರಿಂದ ಬಿಜೆಪಿ ಅಭ್ಯರ್ಥಿ ಬದಲಾವಣೆ ಆಗಬೇಕೆಂದು ಪ್ರತಿ ಗ್ರಾಮಗಳಲ್ಲಿ ಅಭಿಪ್ರಾಯವಿದೆ. ಬಿಜೆಪಿ ಅಭ್ಯರ್ಥಿಯನ್ನು ಬದಲಿಸದಿದ್ದರೆ, ಅನಿವಾರ್ಯವಾಗಿ ಕಾರ್ಯಕರ್ತರ ಕೂಗಿನಂತೆ ಬಿಜೆಪಿ ಬಂಡಾಯವಾಗಿ ಅಭ್ಯರ್ಥಿ ಮಲ್ಲಿಕಾರ್ಜುನ ಚರಂತಿಮಠ ಅವರನ್ನು ತಯಾರು ಮಾಡಿದ್ದೇವೆ.

ವೈಯಕ್ತಿಕವಾಗಿ ಮಲ್ಲಿಕಾರ್ಜುನ ಚರಂತಿಮಠ ತೀರ್ಮಾನ ಅಲ್ಲ. ಇದು ಕಾರ್ಯಕರ್ತರ ತೀರ್ಮಾನ. ಕ್ಷೇತ್ರದ ವಿವಿಧ ಗ್ರಾಮದ ಮುಖಂಡರು ಬೆಂಬಲ ಸೂಚಿಸಿದ್ದು, ಇನ್ನಿತರ ಸಮಾಜದವರು ಬೆಂಬಲ ನೀಡಿದ್ದಾರೆ. ಬದಲಾವಣೆ ಗಾಳಿ ಬೀಸುತ್ತಿದೆ ಅನ್ನುವುದು ನಮಗ ಖಾತ್ರಿ ಇದೆ. ಪ್ರಸಕ್ತ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಚರಂತಿಮಠ ಶಾಸಕರಾಗುವ ಬಗ್ಗೆ ನಮಗೆ ವಿಶ್ವಾಸವಿದೆ ಎಂದು ಹೇಳಿದರು.

ಇದರಿಂದ ಶಾಸಕರ ವಿರುದ್ಧ ಅವರ ಸಹೋದರರ ತೊಡೆ ತೊಟ್ಟಿದ್ದಾರೆ. ಹಲವು ದಿನಗಳಿಂದ ಇಬ್ಬರು ಸಹೋದರರ ಮಧ್ಯೆ‌ ಬಿರುಕು ಉಂಟಾಗಿದ್ದು, ಈಗ ಸ್ಪರ್ಧೆ ಮಾಡುವ ಹಂತಕ್ಕೆ ಬಂದಿದೆ. ಈ ಹಿಂದಿನ ಎಲ್ಲ ಚುನಾವಣೆಯಲ್ಲಿ ಶಾಸಕರ ಪರ ಅವರ ಸಹೋದರ ಮಲ್ಲಿಕಾರ್ಜುನ ಚರಂತಿಮಠ ತೆರೆಮೆರೆಯಲ್ಲಿ ಎಲ್ಲ ಕೆಲಸ ಕಾರ್ಯಗಳನ್ನು ಮಾಡಿಕೊಂಡು ರಾಜಕೀಯ ತಂತ್ರಗಾರಿಕೆಯಿಂದ ಸಹೋದರ ಗೆಲುವಿಗೆ ಕಾರಣವಾಗಿದ್ದರು.

ಬಂಡಾಯ ಶಮನಗೊಳಿಸಲು ಹೊಂದಾಣಿಕೆ- ನಿರಾಣಿ:ಬಾಗಲಕೋಟೆ ಮತಕ್ಷೇತ್ರದಲ್ಲಿಯೂ ಬಂಡಾಯದ ಬಿಸಿ ಇದೆ. ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದಲ್ಲಿ ಅವರನ್ನು ಕರೆದು ಹೊಂದಾಣಿಕೆ ಮಾಡಿಕೊಳ್ಳಲಾಗುವುದು ಎಂದು ಸಚಿವ ಮುರುಗೇಶ ನಿರಾಣಿ ಸ್ಪಷ್ಟಪಡಿಸಿದರು. ಬೀಳಗಿ ಪಕ್ಷದ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಾಗಲಕೋಟೆ ಜಿಲ್ಲೆಯ ಏಳು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯಗಳಿಸುವುದು ಖಚಿತ. ಈಗಾಗಲೇ ಬಾದಾಮಿ ಹಾಗೂ ಜಮಖಂಡಿ ಕ್ಷೇತ್ರದಲ್ಲಿ ಬೇರೆ ಅಭ್ಯರ್ಥಿಗಳನ್ನು ಹೈಕಮಾಂಡ್ ಕಣಕ್ಕಿಳಿಸಿದೆ. ಟಿಕೆಟ್ ತಪ್ಪಿದಲ್ಲಿ ಸ್ವಲ್ಪ ಅಸಮಾಧಾನ ಉಂಟಾಗುವುದು ಸಹಜ. ಅತೃಪ್ತರ ಜತೆ ಮಾತುಕತೆ ಮಾಡಿ, ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.

ಇದನ್ನೂ ಓದಿ:ಅಸಮಾಧಾನಿತರ ಮನವೊಲಿಕೆ ಯತ್ನ: ನೆಹರೂ ಓಲೇಕಾರ್ ಜೊತೆ ಬಿಎಸ್​ವೈ ಮಾತುಕತೆ

Last Updated : Apr 14, 2023, 10:53 PM IST

ABOUT THE AUTHOR

...view details