ಬಾಗಲಕೋಟೆ:ಉತ್ತರ ಕರ್ನಾಟಕದಲ್ಲೇ ವಿಶಿಷ್ಟವಾಗಿ ಆಚರಿಸುವ ಗುಲಾಲ್ ಜಾತ್ರೆ ನಿಮಿತ್ತ ಶ್ರೀಜ್ಯೋತಿಬಾ ದೇವರ ಜಾತ್ರಾ ಮಹೋತ್ಸವವು ಅತಿ ವಿಜೃಂಭಣೆಯಿಂದ ಆಸಂಗಿ ಗ್ರಾಮದಲ್ಲಿ ನೆರವೇರಿತು.
ಇದು ಗುಲಾಲ್ ಜಾತ್ರೆ ಎಂದೇ ಪ್ರಸಿದ್ದಿಯಾಗಿದ್ದು, ಸುಮಾರು 10-15 ಕ್ವಿಂಟಾಲ್ಗಿಂತಲೂ ಹೆಚ್ಚಿನ ಪ್ರಮಾಣದ ಗುಲಾಲ್ ಎರಚುವುದು ವಿಶೇಷತೆ. ಮಹಾರಾಷ್ಟ್ರ ನಂತರ ಇಲ್ಲಿ ಅತಿ ಹೆಚ್ಚಿನ ಪ್ರಮಾಣದ ಗುಲಾಲನ್ನು ಬಳಸಲಾಗುತ್ತದೆ. ಗ್ರಾಮದ ಪ್ರತಿಯೊಬ್ಬರು ಈ ಜಾತ್ರೆಯಲ್ಲಿ ಪಾಲ್ಗೊಂಡು ಜ್ಯೋತಿಬಾ ದರ್ಶನ ಪಡೆಯುತ್ತಾರೆ.