ಕರ್ನಾಟಕ

karnataka

ETV Bharat / state

ಶೃಂಗೇರಿ ಪ್ರಕರಣ: ಬಾಗಲಕೋಟೆಯಲ್ಲೂ ಪ್ರತಿಭಟನೆ - protest in bagalkote

ಶೃಂಗೇರಿ ನಗರದಲ್ಲಿನ ಶ್ರೀ ಶಂಕರಾಚಾರ್ಯರ ಪುತ್ಥಳಿ ಮೇಲೆ ಧ್ವಜ ಹಾರಿಸಿದ ಪ್ರಕರಣವನ್ನು ಖಂಡಿಸಿ,ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಬಾಗಲಕೋಟೆಯಲ್ಲಿ ಪ್ರತಿಭಟನೆ ನಡೆಸಲಾಗಿದೆ.

bharmin community protest in bagalkote
ಶ್ರೀಶಂಕರಾಚಾರ್ಯರ ಪುತ್ಥಳಿ ಮೇಲೆ ಬ್ಯಾನರ್

By

Published : Aug 18, 2020, 10:42 PM IST

ಬಾಗಲಕೋಟೆ: ಶೃಂಗೇರಿ ಪ್ರವೇಶದ್ವಾರದಲ್ಲಿರುವ ಶ್ರೀಶಂಕರಾಚಾರ್ಯರ ಪುತ್ಥಳಿ ಮೇಲೆ ಧ್ವಜ ಹಾರಿಸಿರುವ ಕಿಡಿಗೇಡಿಗಳ ಮೇಲೆ ಕಠಿಣ ಕ್ರಮಕ್ಕೆ ಒತ್ತಾಯಿಸಿ ಬ್ರಾಹ್ಮಣ ಸಮಾಜ ಮತ್ತು ಹಿಂದೂ ಸಂಘಟನೆಗಳ ಮುಖಂಡರು ಜಿಲ್ಲಾಡಳಿತ ಭವನದೆದುರು ಪ್ರತಿಭಟನೆ ನಡೆಸಿದರು.

ಬೆಂಗಳೂರಿನಲ್ಲಿ ಕೋಮುಗಲಭೆ ನಡೆದಿರುವ ಸಂದರ್ಭದಲ್ಲಿ ಶೃಂಗೇರಿಯಲ್ಲೂ ಇಂಥ ಘಟನೆ ನಡೆದಿದ್ದು, ತಪ್ಪಿತಸ್ಥರು ಯಾರೇ ಆಗಿದ್ದರೂ ಅವರನ್ನು ಶಿಕ್ಷೆಗೆ ಒಳಪಡಿಸಬೇಕು. ಶೃಂಗೇರಿಯಂಥ ಪಾವನಕ್ಷೇತ್ರದಲ್ಲಿ ಈ ರೀತಿ ಘಟನೆ ನಡೆಯದಂತೆ ಕ್ರಮವಹಿಸಬೇಕು. ಅಲ್ಲಿ ಭದ್ರತೆ ದೃಷ್ಟಿಯಿಂದಲೂ ಸರ್ಕಾರ ಬಿಗಿ ಕ್ರಮಗಳನ್ನು ಕೈಗೊಳ್ಳಬೇಕೆಂದು ಒತ್ತಾಯಿಸಲಾಯಿತು. ಈ ಬಗ್ಗೆ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಅವರಿಗೆ ಮನವಿ ಸಲ್ಲಿಸಲಾಯಿತು.

ಹಿರಿಯ ಲೆಕ್ಕಪರಿಶೋಧಕ, ಬ್ರಾಹ್ಮಣ ಸಮಾಜದ ಮುಖಂಡ ಶಿವರಾಂ ಹೆಗಡೆ, ಡಾ.ಆನಂದ ಕುಲಕರ್ಣಿ, ಶೃಂಗೇರಿ ಪೀಠದ ವಿಶೇಷ ವಲಯ ಅಧಿಕಾರಿ ಟಿ.ಎಚ್.ಕುಲಕರ್ಣಿ, ಪಿ.ವಿ.ಬಾಗಿ, ಕೃಷ್ಣಾ ಜೋಶಿ, ಕಿರಣ ಬಾಗಲಕೋಟ, ವಿಜಯ ಸುಲಾಖೆ ಮತ್ತಿತರರು ಉಪಸ್ಥಿತರಿದ್ದರು.

ABOUT THE AUTHOR

...view details