ಕರ್ನಾಟಕ

karnataka

ETV Bharat / state

ಜಗತ್ತಿನಾದ್ಯಂತ ಕೊರೊನಾ ನಿರ್ಮೂಲನೆಗಾಗಿ ಭಾಗವತ ದಶಮ ಸ್ಕಂದ ಹೋಮ - ನವನಗರದ ಶ್ರೀ ಉತ್ತರಾಧಿ ಮಠ

ಪೂರ್ಣಾಹುತಿ ನೀಡಿ ಜಗತ್ತಿಗೆ ಶಾಂತಿ ಸಮೃದ್ಧಿಗಾಗಿ ಪ್ರಾರ್ಥಿಸಿದರು. ವಿಪ್ರ ಅಭಿವೃದ್ದಿ ಮಂಡಳಿ ರಾಯರ ಮಠದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಖ್ಯಾತ ಯಾಜ್ಞಿಕರಾದ ರಾಘವಾಚಾರ್ಯ ಕಿರಸೂರ ಅವರು ನವಗ್ರಹ, ಧನ್ವಂತರಿಯನ್ನು ಆಹ್ವಾನಿಸಿ ಹೋಮ ಕಾರ್ಯಕ್ರಮ ನೆರವೇರಿಸಿದರು..

Bhagavata Dashama Skanda Homa for the eradication of corona around the world
ದಶಮ ಸ್ಕಂದ ಹೋಮ

By

Published : Oct 5, 2020, 8:29 PM IST

ಬಾಗಲಕೋಟೆ :ಜಗತ್ತಿನಾದ್ಯಂತ ಕೊರೊನಾ ನಿರ್ಮೂಲನೆ ಮಾಡಲು ನವನಗರದ ಶ್ರೀ ಉತ್ತರಾಧಿ ಮಠ ಹಾಗೂ ವಿದ್ಯಾಗಿರಿ ವಿಪ್ರ ಮಂಡಳಿಯ ಶ್ರೀ ರಾಘವೇಂದ್ರಸ್ವಾಮಿಗಳ ಮಠದಲ್ಲಿ 107 ಅಧ್ಯಾಯ ಮನನ ಮಾಡುವ ಭಾಗವತ ದಶಮಸ್ಕಂದ ಹೋಮ ನಡೆಸಲಾಯಿತು.

ಎರಡು ಮಠಗಳಲ್ಲಿ ನಡೆದ ಹೋಮದಲ್ಲಿ ತಲಾ 40 ದಂಪತಿ ಹೋಮ ಹವನಾದಿಯನ್ನು ನೆರವೇರಿಸಿ, ಪೂರ್ಣಾಹುತಿ ನೀಡಿ ಜಗತ್ತಿಗೆ ಶಾಂತಿ ಸಮೃದ್ಧಿಗಾಗಿ ಪ್ರಾರ್ಥಿಸಿದ್ರು. ವಿಪ್ರ ಅಭಿವೃದ್ದಿ ಮಂಡಳಿ ರಾಯರ ಮಠದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಖ್ಯಾತ ಯಾಜ್ಞಿಕರಾದ ರಾಘವಾಚಾರ್ಯ ಕಿರಸೂರ ಅವರು ನವಗ್ರಹ, ಧನ್ವಂತರಿಯನ್ನು ಆಹ್ವಾನಿಸಿ ಹೋಮ ಕಾರ್ಯಕ್ರಮ ನೆರವೇರಿಸಿದರು.

ಭಾಗವತ ದಶಮ ಸ್ಕಂದ ಹೋಮ

ಪ್ರತಿಯೊಬ್ಬರಿಗೂ ಧನ್ವಂತರಿ ಪ್ರತಿಮೆ, ಫಲಪುಷ್ಪ ನೀಡಿ ಆಶೀರ್ವದಿಸಲಾಯಿತು. ಶನಿ ಭೂಮಿಯ ಅಧಿಪತಿ ಆತನ ಸ್ಮರಣೆ ಮೂಲಕ ನವಗ್ರಹ ಆರಾಧನೆ, ಧನ್ವಂತರಿಗೆ ಶರಣು ಹೋಗಬೇಕೆಂದು ರಾಘವಾಚಾರ್ಯ ಕಿರಸೂರ ಈ ಸಂದರ್ಭದಲ್ಲಿ ಹೇಳಿ ಇದೊಂದು ಅಪರೂಪದ ಹೋಮ ಎಂದರು.

ABOUT THE AUTHOR

...view details