ಬಾಗಲಕೋಟೆ:ಜಿಲ್ಲಾ ಪಂಚಾಯತ್ ಸಭಾಭವನದಲ್ಲಿ 11ನೇ ಸಾಮಾನ್ಯ ಸಭೆಯು ಅಧ್ಯಕ್ಷೆ ಬಾಯಕ್ಕ ಮೇಟಿ ಅಧ್ಯಕ್ಷತೆಯಲ್ಲಿ ಜರುಗಿತು.
ಬಾಗಲಕೋಟೆ ಜಿಲ್ಲಾ ಪಂಚಾಯತ್ 11ನೇ ಸಾಮಾನ್ಯ ಸಭೆ - ಬಾಗಲಕೋಟೆ ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆ
ಬಾಗಲಕೋಟೆ ಜಿಲ್ಲಾ ಪಂಚಾಯತ್ ಸಭಾಭವನದಲ್ಲಿ 11ನೇ ಸಾಮಾನ್ಯ ಸಭೆ ನಡೆಯಿತು.
![ಬಾಗಲಕೋಟೆ ಜಿಲ್ಲಾ ಪಂಚಾಯತ್ 11ನೇ ಸಾಮಾನ್ಯ ಸಭೆ ಸಾಮಾನ್ಯ ಸಭೆ](https://etvbharatimages.akamaized.net/etvbharat/prod-images/768-512-5745909-thumbnail-3x2-tyfsdfg.jpg)
ಸಾಮಾನ್ಯ ಸಭೆ
ಸಭೆಯಲ್ಲಿ ಗುಡೂರ ಜಿ.ಪಂ ಸದಸ್ಯ ಶಶಿಕಾಂತ, ತಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ನಡೆದಿರುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಅವ್ಯವಹಾರ ಬಗ್ಗೆ ಕಿಡಿಕಾರಿದರು. ಈ ಯೋಜನೆ ಬಗ್ಗೆ ಮಾಹಿತಿ ಕೇಳಿದರೆ ಸಿಇಓ ಸರಿಯಾಗಿ ಸ್ಪಂದಿಸುತ್ತಿಲ್ಲ. ಸಿಇಓ ಗಂಗೂಬಾಯಿ ಮಾನಕರ್, ಸದಸ್ಯರ ಫೋನು ಸ್ವೀಕರಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ಪಂಚಾಯತ್ 11ನೇ ಸಾಮಾನ್ಯ ಸಭೆಯಲ್ಲಿ ಗದ್ದಲ
ಬಳಿಕ ವೇದಿಕೆಯ ಮುಂದೆ ಬಂದ ಶಶಿಕಾಂತ ಪಾಟೀಲ, ಈ ಯೋಜನೆ ಬಗ್ಗೆ ನಡೆದಿದೆ ಎನ್ನಲಾದ ಅವ್ಯವಹಾರದ ತನಿಖೆಯ ಮಾಹಿತಿಯನ್ನು ಲಿಖಿತ ರೂಪದಲ್ಲಿ ದಾಖಲೆ ನೀಡಿ, ಇಲ್ಲವೇ ರಾಜಿನಾಮೆ ತೆಗೆದುಕೊಳ್ಳಿ ಎಂದು ಆಗ್ರಹಿಸಿದರು .