ಬಾಗಲಕೋಟೆ: ಸಹಕಾರ ಬ್ಯಾಂಕ್ಗಳ ಮೇಲ್ವಿಚಾರಣೆ ಸಂಬಂಧ ಆರ್ಬಿಐ ಹೊರಡಿಸುವ ಸುಗ್ರೀವಾಜ್ಞೆಗೆ ಜಿಲ್ಲೆಯಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದು, ಯಾವುದೋ ಒಂದು ಬ್ಯಾಂಕ್ ಮಾಡಿದ ತಪ್ಪಿನಿಂದ ಗುಣಮಟ್ಟ ಹೊಂದಿರುವ ಬ್ಯಾಂಕ್ಗಳಿಗೂ ತೊಂದರೆಯಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಆರ್ಬಿಐ ನಿಯಮದಿಂದ ಹಲವರಿಗೆ ತೊಂದರೆಯಾಗಲಿದೆ: ಪ್ರಕಾಶ್ ತಪಶೆಟ್ಟಿ - Basaveshwar Bank President Prakash Tapashetty
ಸಹಕಾರ ಬ್ಯಾಂಕ್ಗಳ ಮೇಲ್ವಿಚಾರಣೆ ಸಂಬಂಧ ಆರ್ಬಿಐ ಹೊರಡಿಸುವ ಸುಗ್ರೀವಾಜ್ಞೆಯಿಂದ ಬ್ಯಾಂಕಿನ ಗ್ರಾಹಕರು, ಕೂಲಿ ಕಾರ್ಮಿಕರು ಹಾಗೂ ರೈತಾಪಿ ವರ್ಗದವರಿಗೆ ತೊಂದರೆಯಾಗಲಿದೆ ಎಂದು ಬಸವೇಶ್ವರ ಬ್ಯಾಂಕ್ ಅಧ್ಯಕ್ಷ ಪ್ರಕಾಶ್ ತಪಶೆಟ್ಟಿ ಹೇಳಿದ್ದಾರೆ.
ಆರ್ಬಿಐ ಹೊರಡಿಸುವ ಸುಗ್ರಿವಾಜ್ಞೆಯಿಂದ ಹಲವರಿಗೆ ತೊಂದರೆಯಾಗಲಿದೆ: ಪ್ರಕಾಶ್ ತಪಶೆಟ್ಟಿ
ಆರ್ಬಿಐ ನಿಯಮಗಳು ಹಾಗೂ ಸುಗ್ರೀವಾಜ್ಞೆ ಬಗ್ಗೆ ಪ್ರತಿಕ್ರಿಯಿಸಿದ ಬಸವೇಶ್ವರ ಬ್ಯಾಂಕ್ ಅಧ್ಯಕ್ಷ ಪ್ರಕಾಶ್ ತಪಶೆಟ್ಟಿ, ಇದರಿಂದ ಬ್ಯಾಂಕಿನ ಗ್ರಾಹಕರು, ಕೂಲಿ ಕಾರ್ಮಿಕರು ಹಾಗೂ ರೈತಾಪಿ ವರ್ಗದವರಿಗೆ ತೊಂದರೆಯಾಗಲಿದೆ. ಆರ್ಬಿಐನ ಎಲ್ಲಾ ನಿಯಮಗಳನ್ನ ಪಾಲಿಸುತ್ತೇನೆ. ಆದರೆ ರಾಷ್ಟ್ರೀಯ ಬ್ಯಾಂಕುಗಳಿಗೆ ನೀಡಿರುವ ಸೌಲಭ್ಯಗಳನ್ನ ಸಹಕಾರ ಬ್ಯಾಂಕುಗಳಿಗೆ ನೀಡಿಲ್ಲ.
ಸರ್ಕಾರದ ಯೋಜನೆಗಳು, ಸಬ್ಸಿಡಿ, ತೆರಿಗೆ ವಿನಾಯಿತಿ ಸಿಗುವುದಿಲ್ಲ. ಸ್ವತಂತ್ರವಾಗಿ ಕೆಲಸ ಮಾಡಲಿಕ್ಕೆ ಮುಜಗರ ಆಗುತ್ತದೆ ಎಂದಿದ್ದಾರೆ.