ಬಾಗಲಕೋಟೆ:ಗೆದ್ದ ಹತ್ತು ಶಾಸಕರಿಗೆ ಸಚಿವ ಸ್ಥಾನ ಕೊಟ್ಟು ಮಹೇಶ ಕುಮಟಳ್ಳಿ ಒಬ್ಬರನ್ನೇ ಕೈ ಬಿಡ್ತಿರೋದು ಸರಿಯಲ್ಲ. ಇದರಿಂದ ಪಂಚಮಸಾಲಿ ಸಮಾಜಕ್ಕೆ ತಪ್ಪು ಸಂದೇಶ ಹೋಗುತ್ತದೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.
ಮಹೇಶ ಕುಮಟಳ್ಳಿಗೆ ಸಚಿವ ಸ್ಥಾನ ನೀಡದಿರೋದು ಸರಿಯಲ್ಲ: ಬಸವಜಯ ಮೃತ್ಯುಂಜಯ ಸ್ವಾಮೀಜಿ - ಮಹೇಶ ಕುಮಟಳ್ಳಿ
ಗೆದ್ದ 10 ಶಾಸಕರಿಗೆ ಸಚಿವ ಸ್ಥಾನ ಕೊಟ್ಟು ಮಹೇಶ ಕುಮಟಳ್ಳಿ ಒಬ್ಬರನ್ನೇ ಕೈ ಬಿಡ್ತಿರೋದು ಸರಿಯಲ್ಲ. ಇದರಿಂದ ಪಂಚಮಸಾಲಿ ಸಮಾಜಕ್ಕೆ ತಪ್ಪು ಸಂದೇಶ ಹೋಗುತ್ತದೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.
ಮಹೇಶ ಕುಮಟಳ್ಳಿ ಒಬ್ಬರನ್ನೇ ಕೈ ಬಿಡ್ತಿರೋದು ಸರಿಯಲ್ಲ: ಬಸವಜಯ ಮೃತ್ಯುಂಜಯ ಸ್ವಾಮೀಜಿ
ಅಥಣಿ ಶಾಸಕ ಮಹೇಶ ಕುಮಟಳ್ಳಿಗೆ ಸಚಿವ ಸ್ಥಾನ ನೀಡದ್ದಕ್ಕೆ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕುಮಟಳ್ಳಿ ಆರಂಭದಲ್ಲಿ ರಮೇಶ ಜಾರಕಿಹೊಳಿ ಜೊತೆ ಇದ್ದವರು. ಕುಮಟಳ್ಳಿ ಕೈ ಬಿಡ್ತಿರೋದಕ್ಕೆ ರಾಜ್ಯಾದ್ಯಂತ ನಮ್ಮ ಸಮಾಜದ ಜನರು ಬೇಸರಗೊಂಡಿದ್ದಾರೆ. ಸಿಎಂ ಯಡಿಯೂರಪ್ಪ ಅವರು ಹೈಕಮಾಂಡ್ ಒತ್ತಡದಿಂದಾಗಿ ಕುಮಟಳ್ಳಿ ಅವ್ರನ್ನು ಸಚಿವ ಸ್ಥಾನದಿಂದ ಕೈಬಿಟ್ಟಿದ್ದಾರೆಂದು ತಿಳಿಸಿದರು.
ಸರ್ಕಾರ ಪಂಚಮಸಾಲಿ ಸಮಾಜದ ಬಗ್ಗೆ ಯಾಕೆ ಕಾಳಜಿ ವಹಿಸುತ್ತಿಲ್ಲ ಅನ್ನೋದು ಬೇಸರವಾಗಿದೆ ಸ್ವಾಮೀಜಿ ಹೇಳಿದರು.