ಬಾಗಲಕೋಟೆ: ಕೂಡಲಸಂಗಮದಲ್ಲಿ ಅತ್ಯಂತ ಸರಳವಾಗಿ ಬಸವಜಯಂತಿ ಆಚರಣೆ ಮಾಡಲಾಯಿತು.
ಕೂಡಲ ಸಂಗಮದಲ್ಲಿ ವಚನ ಪಠಣ ಮಾಡಿ ಸರಳ ಬಸವ ಜಯಂತಿ ಆಚರಣೆ - Basavanna
ಕೂಡಲಸಂಗಮದಲ್ಲಿರುವ ಬಸವಣ್ಣನವರ ಪುತ್ಥಳಿಗೆ ಲಿಂಗಾಯತ ಪಂಚಮಸಾಲಿ ಜಗದ್ಗುರು ಬಸವ ಜಯ ಮೃತ್ಯುಂಜಯ ಸ್ವಾಮೀಜಿಯವರು ವಚನ ಪಠಣ ಮಾಡಿ ಪುಷ್ಪಮಾಲೆ ಅರ್ಪಿಸಿದರು.

ಬಸವಣ್ಣನ ಧಾರ್ಮಿಕ ಕ್ಷೇತ್ರದಲ್ಲಿ ಸರಳ ಬಸವ ಜಯಂತಿ ಆಚರಣೆ
ವಿಶ್ವಗುರು ಬಸವಣ್ಣನವರ ಐಕ್ಯ ಹಾಗೂ ವಿದ್ಯಾಭೂಮಿ ಕೂಡಲಸಂಗಮದಲ್ಲಿರುವ ಬಸವಣ್ಣನವರ ಪುತ್ಥಳಿಗೆ ಲಿಂಗಾಯತ ಪಂಚಮಸಾಲಿ ಜಗದ್ಗುರು ಬಸವ ಜಯ ಮೃತ್ಯುಂಜಯ ಸ್ವಾಮೀಜಿಯವರು ವಚನ ಪಠಣ ಮಾಡಿ ಪುಷ್ಪಮಾಲೆ ಅರ್ಪಿಸಿದರು.
ಪ್ರತಿ ವರ್ಷ ಕೂಡಲಸಂಗಮದಲ್ಲಿ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಿಕೊಂಡು ಬರಲಾಗುತಿತ್ತು.ಆದರೆ, ಈ ಬಾರಿ ಕೋವಿಡ್ ಹಿನ್ನೆಲೆ ಸರಳವಾಗಿ ಯುಗಪುರುಷನಿಗೆ ಗೌರವ ಸಲ್ಲಿಸಲಾಗಿದೆ.