ಕರ್ನಾಟಕ

karnataka

ETV Bharat / state

ಇನ್ಮುಂದೆ ಕೂಡಲಸಂಗಮ ದೇವ ಅಂಕಿತನಾಮ‌ ಬಳಸಲಿದ್ದೇವೆ: ಮಾತೆ ಗಂಗಾದೇವಿ - ಕೂಡಲಸಂಗಮ ದೇವ ವಚನಾಂಕಿತ

ಬಸವಣ್ಣನವರ ವಚನಗಳ ಅಂಕಿತ ನಾಮವನ್ನು ಲಿಂಗದೇವ ಬದಲಾಗಿ ಕೂಡಲಸಂಗಮ ದೇವ ಎಂದು ಬಳಸಲು ನಿರ್ಧರಿಸಲಾಗಿದೆಯೆಂದು ಬಸವ ಧರ್ಮ ಪೀಠಾಧ್ಯಕ್ಷೆ ಮಾತೆ ಗಂಗಾದೇವಿ ಅವರು ಸ್ಪಷ್ಟಪಡಿಸಿದ್ದಾರೆ.

basava dharma peeta head  maate gangadevi
ಬಸವ ಧರ್ಮ ಪೀಠಾಧ್ಯಕ್ಷೆ ಮಾತೆ ಗಂಗಾದೇವಿ

By

Published : Dec 29, 2021, 4:42 PM IST

ಬಾಗಲಕೋಟೆ: ಇನ್ಮುಂದೆ ವಚನಗಳಲ್ಲಿ ಲಿಂಗದೇವ ಬದಲಾಗಿ ಕೂಡಲಸಂಗಮ ದೇವ ವಚನಾಂಕಿತ ಬಳಸಲು ನಿರ್ಧಾರ ಮಾಡಲಾಗಿದೆ ಎಂದು ಬಸವ ಧರ್ಮ ಪೀಠಾಧ್ಯಕ್ಷೆ ಮಾತೆ ಗಂಗಾದೇವಿ ಅವರು ಸ್ಪಷ್ಟಪಡಿಸಿದ್ದಾರೆ.

ಬಸವ ಧರ್ಮ ಪೀಠಾಧ್ಯಕ್ಷೆ ಮಾತೆ ಗಂಗಾದೇವಿ

ನಗರದಲ್ಲಿ ಈ ಬಗ್ಗೆ ಮಾತನಾಡಿ, ಕೋರ್ಟ್​ ಆದೇಶ ಬಗ್ಗೆ ತಿಳಿಸಿದರು. ಹಲವು ಸ್ವಾಮೀಜಿಗಳ ವಿರೋಧದ ಮಧ್ಯೆ 25 ವರ್ಷಗಳ ಹಿಂದೆ ಈ ವಿವಾದ ಹೈಕೋರ್ಟ್, ಸುಪ್ರೀಂ ಕೋರ್ಟ್​​ ಮೆಟ್ಟಿಲೇರಿತ್ತು. ಇದೀಗ ಬಸವಣ್ಣನವರ ವಚನಗಳ ಅಂಕಿತ ನಾಮ ಬಳಕೆಯಲ್ಲಿದ್ದ ಗೊಂದಲಕ್ಕೆ ತೆರೆ ಎಳೆಯಲಾಗಿದೆ. ಹೈಕೋರ್ಟ್ ಆದೇಶದಂತೆ ಇನ್ನು ಮುಂದೆ ವಚನಗಳಿಗೆ ಕೂಡಲಸಂಗಮದೇವ ಎಂದು ಬಳಸುತ್ತೇವೆ, ಲಿಂಗದೇವ ಎಂಬ ಅಂಕಿತನಾಮವನ್ನು ಹಿಂಪಡೆಯಲಾಗಿದೆ ಎಂದು‌ ತಿಳಿಸಿದರು.

ಇದನ್ನೂ ಓದಿ:ಚಾಮರಾಜನಗರ..ಕುವೆಂಪು ಜನ್ಮದಿನಾಚರಣೆಗೆ ಬರದ ಡಿಸಿ, ಎಸ್ಪಿ, ಸಿಇಒ.. ಕಾರ್ಯಕ್ರಮ ತಡೆದು ಆಕ್ರೋಶ

ABOUT THE AUTHOR

...view details