ಕರ್ನಾಟಕ

karnataka

ETV Bharat / state

ಮೋದಿಗೆ ಧಿಕ್ಕಾರ ಕೂಗುವವರು ಪಾಕಿಸ್ತಾನಕ್ಕೆ ಹೋಗಿ: ಬಸನಗೌಡ ಪಾಟೀಲ ಯತ್ನಾಳ್ - ಶಾಸಕಬಸವನಗೌಡ ಪಾಟೀಲ ಯತ್ನಾಳ್

10 ರೂ.ಪೆಟ್ರೋಲ್ ಬೆಲೆ ಹೆಚ್ಚಾದರೆ ಮೋದಿಗೆ ಧಿಕ್ಕಾರ ಅಂತಾರೆ - ಧಿಕ್ಕಾರ ಕೂಗುವವರು ಪಾಕಿಸ್ತಾನಕ್ಕೆ ಹೋಗಿ- ಯತ್ನಾಳ್

Basanagouda patil yatnal
ಬಸವನಗೌಡ ಪಾಟೀಲ ಯತ್ನಾಳ್

By

Published : Feb 20, 2023, 1:26 PM IST

ಬಸವನಗೌಡ ಪಾಟೀಲ ಯತ್ನಾಳ್..

ಬಾಗಲಕೋಟೆ: ಪಾಕಿಸ್ತಾನದಲ್ಲಿ ಸಿಲಿಂಡರ್ ಬೆಲೆ 10 ಸಾವಿರ ರೂಪಾಯಿ ಆಗಿದೆ. ನಮ್ಮಲ್ಲಿ 100 ರೂ.ಹೆಚ್ಚಾದರೆ ಮೋದಿ ಕಾರಣ ಎಂದು ಹೇಳುತ್ತಾರೆ. 10 ರೂ.ಪೆಟ್ರೋಲ್ ಬೆಲೆ ಹೆಚ್ಚಾದರೆ ಮೋದಿಗೆ ಧಿಕ್ಕಾರ ಅಂತಾರೆ. ಧಿಕ್ಕಾರ ಕೂಗುವವರು ಪಾಕಿಸ್ತಾನಕ್ಕೆ ಹೋಗಿ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿದರು.

ಬಾಗಲಕೋಟೆ ನಗರದಲ್ಲಿ ಶಿವಾಜಿ ಮಹಾರಾಜರ ಜಯಂತಿ ಅಂಗವಾಗಿ ಆಯೋಜನೆ ಮಾಡಿರುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "ಇಲ್ಲಿ ದರ ಹೆಚ್ಚಾಗಿದೆ ಅನ್ನುವವರು ಪಾಕಿಸ್ತಾನಕ್ಕೆ ಹೋಗಿ. ನಮ್ಮ ಗಾಂಧಿ ಪಾಕಿಸ್ತಾನ ಮಾಡಿ ಕೊಟ್ಟಾರಲ್ಲ. ಅಲ್ಲಿಗೆ ಹೋಗ್ರಿ. ಎಲ್ಲಾರೂ ಒಂದು ಕಡೆಯಿಂದ ಗುಳೆ ಹೋಗಿ ಪಾಕಿಸ್ತಾನದಲ್ಲಿರಿ. ನಾವೆಲ್ಲ ಹಿಂದೂಗಳು ಆರಾಮವಾಗಿ ಇರ್ತಿವಿ. ಅಂಬೇಡ್ಕರ್ ಆವಾಗ್ಲೆ ಹೇಳಿದ್ರು. ಪಾಕಿಸ್ತಾನ ಒಡೆಯಬೇಡಿ. ಒಡೆದು ಕೊಡುವುದಾದರೆ ಇಲ್ಲಿಯವರೆನ್ನೆಲ್ಲ ಅಲ್ಲಿಗೆ ಕಳಿಸಿ ಬಿಡಿ ಅಂದ್ರು‌. ಅಲ್ಲಿಯ ಹಿಂದೂಗಳನ್ನೆಲ್ಲ ಇಲ್ಲಿ ತಂದು ಒಗಿರಿ. ಭಾರತ ಸುರಕ್ಷಿತವಾಗಿರುತ್ತದೆ" ಎಂದರು.

ಮೋದಿ ಛತ್ರಪತಿ ಶಿವಾಜಿ ಅವತಾರ: "ಅವರೆಂದು ನಮ್ಮ ಜತೆ ಒಂದಾಗಿರೋದಿಲ್ಲ. ಅವರೆಲ್ಲ ನಮಗೆ ಕಾಫೀರರು ಅಂತಾರೆ. ಪಾಕಿಸ್ತಾನದವರು ಹೇಳ್ತಾರೆ ಕಾಫೀರ ಕೋ ಮಾರೆಂಗೆ.. ಘರ್ ಘರ್ ಮೇ ಶಿವಾಜಿ ಹೈ.. ಘರ್ ಮೆ ಮಹಾರಾಣಾ ಪ್ರತಾಪ ಪೈದಾ ಹೋರಹೆ ಹೈ‌‌‌ ಹಿಂದುಸ್ತಾನ್ ಮೆ ಎಂದು ಕಿಡಿಕಾರಿದ ಯತ್ನಾಳ್​ ಪ್ರಧಾನಮಂತ್ರಿ ನರೇಂದ್ರ ಮೋದಿ ಛತ್ರಪತಿ ಶಿವಾಜಿ ಕಾ ಅವತಾರ್ ಹೈ" ಎಂದರು.

ಮರಾಠ ಸಾಮ್ರಾಜ್ಯ ಅಂತಾ ಹೇಳಿದರು. ವ್ಯವಸ್ಥಿತವಾಗಿ ಈ ಲೇಖಕರು ಬುದ್ಧಿಜೀವಿಗಳಂತೆ. ಆದರೆ ನಾನು ಹೇಳುತ್ತೇನೆ ನೀವು ಲದ್ದಿ ಜೀವಿಗಳು. ನಮ್ಮ ಕನ್ನಡ ಪುಸ್ತಕದಲ್ಲಿ ಶಿವಾಜಿ ಬಗ್ಗೆ ಏನೂ ಬರೆಯಲಿಲ್ಲ. ಆದರೆ ಗುಣವಂತನಾದ ಅಕ್ಬರ್, ಅಕ್ಬರ್ ದಿ ಗ್ರೇಟ್ ಅಂತಾ ಬರೆದರು. ಆದರೆ ಅಕ್ಬರ್ ದಬ್ಬಾಳಿಕೆ ಮಾಡಿದ್ದ. ಲಕ್ಷಾಂತರ ಹಿಂದೂಗಳ ಕಗ್ಗೊಲೆ, ಮತಾಂತರ ಮಾಡಿದ. ಅಲ್ಲದೇ ಮಹಿಳೆಯರ ಮೇಲೆ ಅತ್ಯಾಚಾರ ಮಾಡಿದ. ನಾವು ಉಳಿದಿದ್ದು ಮಹಾನ್ ಪುರುಷ ಶಿವಾಜಿಯಿಂದ. ಇಂದು ಭಾರತ ಸಶಕ್ತವಾಗಲು ಪ್ರಧಾನಿ ನರೇಂದ್ರ ಮೋದಿ ಕಾರಣ ಎಂದು ಯತ್ನಾಳ್​ ಹೇಳಿದರು.

ಶಿವಾಜಿ ಮಹಾರಾಜರ ಬಗ್ಗೆ ಮಾತನಾಡಿದ್ರೆ ಕೆಲವರಿಗೆ ಬ್ಯಾನಿ:ಟಿಪ್ಪು ಸುಲ್ತಾನ್ ಸುಮಾರು ಮೂರೂವರೆ ಸಾವಿರ ದೇವಸ್ಥಾನಗಳನ್ನು ಕೆಡವಿ ಹಾಕಿದ್ದ. ಲಕ್ಷಾಂತರ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಮಾಡಿದ‌. ಲಕ್ಷಾಂತರ ಜನರನ್ನು ಮತಾಂತರ ಮಾಡಿದ. ಶಿವಾಜಿ ಮಹಾರಾಜರ ಬಗ್ಗೆ ಮಾತನಾಡಿದ್ರೆ ಕೆಲವರಿಗೆ ಬ್ಯಾನಿ ಆಗುತ್ತಿದೆ. ನಾ ಹಿಂದೂ. ಆದರೆ ಹಿಂದುತ್ವ ಒಪ್ಪಲ್ಲ ಅಂತಾರೆ ಎನ್ನುವ ಮೂಲಕ ಪರೋಕ್ಷವಾಗಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

ಛತ್ರಪತಿ ಶಿವಾಜಿ ಮಹಾರಾಜ ಸಮುದಾಯಕ್ಕೆ, ಮರಾಠ ಅಭಿವೃದ್ಧಿ ಪ್ರಾಧಿಕಾರ ಮಾಡಲು ಸರ್ಕಾರ ಮುಂದಾದಾಗ ಕೆಲವರು ವಿರೋಧ ವ್ಯಕ್ತಪಡಿದರು. ನಾನು ಬೆಳಗಾವಿ ಅಧಿವೇಶನದಲ್ಲಿ ಹೇಳಿದೆ. ಛತ್ರಪತಿ ಶಿವಾಜಿ ಹುಟ್ಟದೇ ಇದ್ದಿದ್ದರೆ, ನಾವು ಇಲ್ಲಿ ಇರುತ್ತಿರಲಿಲ್ಲ. ನೀವ್ಯಾರು ಹಿಂದೂಗಳಾಗಿ ಇರುತ್ತಿರಲಿಲ್ಲ. ನೀವು ಗಡ್ಡ ಬಿಟ್ಟುಕೊಂಡು ಪಾಕಿಸ್ತಾನ ಸೆಷನ್​​ನಲ್ಲಿ ಕೂರುತ್ತಿದ್ರಿ. ಶಿವಾಜಿ ಮೂರ್ತಿಗೆ ರಾತ್ರಿ ಕಪ್ಪು ಮಸಿ ಹಚ್ಚಿ, ಟಿಪ್ಪು ಸುಲ್ತಾನ್​​ನನ್ನು ಹೊಗಳುತ್ತಾರೆ. ಯಾರೂ ಅಪಮಾನದ ಬಗ್ಗೆ ಮಾತನಾಡೋದಿಲ್ಲ. ಭಾರತದಲ್ಲಿ ಕ್ಷತ್ರಿಯರು ಇದ್ದಾರೆ ಎನ್ನುವ ಕಾರಣಕ್ಕೆ ಹಿಂದೂ ಸಮಾಜ ಉಳಿದಿದೆ ಎಂದು ಯತ್ನಾಳ್​ ಹೇಳಿದರು.

ಇದನ್ನೂ ಓದಿ:ಹೈಕಮಾಂಡ್ ನೋಟಿಸ್ ನೀಡಿಲ್ಲ, ನೋಟಿಸ್ ತೋರಿಸಿದ್ರೆ ₹10 ಲಕ್ಷ ಕೊಡ್ತೇನೆ: ಯತ್ನಾಳ್

ABOUT THE AUTHOR

...view details