ಕರ್ನಾಟಕ

karnataka

ETV Bharat / state

ನಿಷೇಧದ ನಡುವೆಯೂ ನಡೆದ ಬನಶಂಕರಿ ದೇವಾಲಯದ ಜಾತ್ರೆ : ಹರಸಾಹಸ ಪಟ್ಟ ಪೊಲೀಸರು

ರಥೋತ್ಸವ ನಡೆಯುವ ಒಂದು ಗಂಟೆಮೊದಲು ಆವರಣದಲ್ಲಿ ಜನ ಇರದೆ ಇಡೀ ಪ್ರದೇಶ ಬಿಕೋ ಎನ್ನುತ್ತಿತ್ತು. ಆದರೆ ರಥ ಎಳೆಯುವ ಸಮಯದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ದಿಢೀರನೆ ನೆರೆದು ಪೊಲೀಸರಿಗೆ ದಂಗು ಬಡಿಸಿದರು.

ನಿಷೇಧದ ನಡುವೆಯೂ ನಡೆದ ಬನಶಂಕರಿ ದೇವಾಲಯದ ಜಾತ್ರೆ
ನಿಷೇಧದ ನಡುವೆಯೂ ನಡೆದ ಬನಶಂಕರಿ ದೇವಾಲಯದ ಜಾತ್ರೆ

By

Published : Jan 18, 2022, 2:20 AM IST

ಬಾಗಲಕೋಟೆ: ಉತ್ತರ ಕರ್ನಾಟಕ ಧಾರ್ಮಿಕ ಕೇಂದ್ರ,ಶಕ್ತಿ ಪೀಠಗಳಲ್ಲಿ ಒಂದಾದ ಬಾದಾಮಿ ಬನಶಂಕರಿ ದೇವಾಲಯ ಜಾತ್ರಾ ಮಹೋತ್ಸವವನ್ನು ಕೊರೊನಾ ಹಿನ್ನಲೆ ನಿಷೇಧ ಮಾಡಲಾಗಿತ್ತು. ಎಷ್ಟೇ ಬಿಗಿ ಭದ್ರತೆ ಏರ್ಪಡಿಸಿದ್ದರೂ ಸಹ ಜನ ದಟ್ಟನೆ ತಡೆಯಲು ಹೆಚ್ಚಾಗಿ, ರಥೋತ್ಸವ ಸಮಯದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಸೇರಿ ಅದ್ಧೂರಿಯಾಗಿ ಜಾತ್ರೆ ನಡೆಸಿದ್ದಾರೆ.

ರಥೋತ್ಸವ ನಡೆಯುವ ಒಂದು ಗಂಟೆಮೊದಲು ಆವರಣದಲ್ಲಿ ಜನ ಇರದೆ ಇಡೀ ಪ್ರದೇಶ ಬಿಕೋ ಎನ್ನುತ್ತಿತ್ತು. ಆದರೆ, ರಥ ಎಳೆಯುವ ಸಮಯದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ದಿಢೀರನೆ ನೆರೆದು ಪೊಲೀಸರಿಗೆ ದಂಗು ಬಡಿಸಿದರು.

ಭಕ್ತರನ್ನ ನಿಯಂತ್ರಣ ಮಾಡಲು ಪೊಲೀಸರು ಲಾಠಿ ಬೀಸಿರುವ ಪ್ರಸಂಗ ಕೂಡ ನಡೆದಿದೆ. ಸರ್ಕಾರದ ಆದೇಶವನ್ನ ಉಲ್ಲಂಘನೆ ಮಾಡಿ ರಥೋತ್ಸವ ಮಾಡಿದ್ದಕ್ಕೆ ದೇವಸ್ಥಾನದ ಆಡಳಿತ ಮಂಡಳಿ ವಿರುದ್ಧ ಎರಡು ಪ್ರತ್ಯೇಕ ದೂರುಗಳು ದಾಖಲಾಗಿವೆ.

ನಿಷೇಧದ ನಡುವೆಯೂ ನಡೆದ ಬನಶಂಕರಿ ದೇವಾಲಯದ ಜಾತ್ರೆ

ಪ್ರತೀ ವರ್ಷ ಬಣದ ಹುಣ್ಣಿಮೆ ದಿನದಂದು ನಡೆಯುವ ಜಾತ್ರೆಯಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಸೇರುತ್ತಿದ್ದರು. ಈ ಬಾರಿ ಜಾತ್ರೆ ರದ್ದು ಮಾಡಿದ ಹಿನ್ನೆಲೆ ದೇವಸ್ಥಾನದ ಆವರಣಕ್ಕೆ ಭಕ್ತರಿಗೆ ನಿರ್ಬಂಧ ಹಾಕಲಾಗಿತ್ತು. ಹೀಗಾಗಿ ದೇವಸ್ಥಾನದಿಂದ ಎರಡು ಕಿಲೋಮೀಟರ್ ದೂರದಲ್ಲಿ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಬ್ಯಾರಿಕೇಡ್ ಹಾಕಿ ಭಕ್ತರನ್ನ ಪೊಲೀಸರು ತಡೆ ಹಿಡಿದಿದ್ದರು.

ದೇವಸ್ಥಾನದ ಆಡಳಿತ ಮಂಡಳಿ ಕೊನೆಗಳಿಗೆಯಲ್ಲಿ ರಥೋತ್ಸವ ನಡೆಸಲು ನಿರ್ಧಾರ ತೆಗೆದುಕೊಂಡಿದ್ದರಿಂದ ನೋಡ ನೋಡುತ್ತಲೇ ದೇವಸ್ಥಾನದ ಆವರಣಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು.

ಜಾತ್ರೆ ನಡೆಸಿದವರ ವಿರುದ್ಧ FIR:

ನಿಯಮಗಳನ್ನು ಮೀರಿ ರಥೋತ್ಸವ ನಡೆಸಿದ ಹಿನ್ನೆಲೆ ಬಾದಾಮಿ ಪೊಲೀಸ್​ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲು ಮಾಡಲಾಗಿದೆ. ದೇವಸ್ಥಾನ ಆಡಳಿತ ಮಂಡಳಿ ಮತ್ತು ಮೆರವಣಿಗೆ ಮೂಲಕ ಬಂದಿದ್ದ ಮಾಡಲಗೇರಿ ಗ್ರಾಮಸ್ಥರ ವಿರುದ್ಧ ದೂರು ದಾಖಲು ಮಾಡಲಾಗಿದ್ದು, ಎಸ್ಪಿ ಲೋಕೇಶ್ ಈ ಸಂಬಂಧ ಮಾದ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ABOUT THE AUTHOR

...view details