ಕರ್ನಾಟಕ

karnataka

ETV Bharat / state

SSLC ಪರೀಕ್ಷೆಯಲ್ಲಿ ಸಾಧನೆ: ನೂರಕ್ಕೆ ನೂರರಷ್ಟು ಅಂಕ ಪಡೆದ ಗಂಗಮ್ಮ - sslc examination,

ಗಂಗಮ್ಮ ಬಸಪ್ಪ ಹುಡೇದ ಎಂಬ ವಿದ್ಯಾರ್ಥಿನಿ ಬಾಗಲಕೋಟೆ ನಗರ ಸಮೀಪ ಇರುವ ಮುಚಖಂಡಿ ಗ್ರಾಮದ ನಿವಾಸಿಯಾಗಿದ್ದಾಳೆ. ಪಕ್ಕದಲ್ಲಿಯೇ ಇದ್ದ ಮುಚಖಂಡಿ ತಾಂಡಾದ ದುರ್ಗಾದೇವಿ ಹೈಸ್ಕೂಲ್​ನಲ್ಲಿ ಅಧ್ಯಯನ ಮಾಡಿ, ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ 625 ಅಂಕಗಳಿಗೆ 625 ಅಂಕಗಳನ್ನು ಪಡೆದು ಸಾಧನೆ ಮಾಡಿದ್ದಾಳೆ.

Gangamma Basappa Hoodeda
ಗಂಗಮ್ಮ ಬಸಪ್ಪ ಹುಡೇದ

By

Published : Aug 9, 2021, 7:15 PM IST

ಬಾಗಲಕೋಟೆ: ಕಡು ಬಡತನದಿಂದ ಬಂದ ಕುಟುಂಬದ ವಿದ್ಯಾರ್ಥಿನಿ ಹತ್ತನೇ ತರಗತಿ ಪರೀಕ್ಷೆಯಲ್ಲಿ ನೂರಕ್ಕೆ ನೂರರಷ್ಟು ಅಂಕಗಳನ್ನು ‌ಪಡೆದು, ಸಾಧನೆ ಮಾಡುವ ಮೂಲಕ ಗಮನ ಸೆಳೆದಿದ್ದಾಳೆ.

ನೂರಕ್ಕೆ ನೂರರಷ್ಟು ಅಂಕ ಪಡೆದ 'ಗಂಗಮ್ಮ' ತಮ್ಮ ಅನುಭವ ಹಂಚಿಕೊಂಡಿದ್ದಾರೆ

ಗಂಗಮ್ಮ ಬಸಪ್ಪ ಹುಡೇದ ಎಂಬ ವಿದ್ಯಾರ್ಥಿನಿ ಬಾಗಲಕೋಟೆ ನಗರ ಸಮೀಪ ಇರುವ ಮುಚಖಂಡಿ ಗ್ರಾಮದ ನಿವಾಸಿಯಾಗಿದ್ದಾಳೆ. ಪಕ್ಕದಲ್ಲಿಯೇ ಇದ್ದ ಮುಚಖಂಡಿ ತಾಂಡಾದ ದುರ್ಗಾದೇವಿ ಹೈಸ್ಕೂಲ್​ನಲ್ಲಿ ಅಧ್ಯಯನ ಮಾಡಿ, ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ 625 ಅಂಕಗಳಿಗೆ 625 ಅಂಕಗಳನ್ನು ಪಡೆದು ಸಾಧನೆ ಮಾಡಿದ್ದಾಳೆ.

ತಾಯಿ ಆಶಾ ಕಾರ್ಯಕರ್ತೆ ಆಗಿ ಕುಟುಂಬದ ನಿರ್ವಹಣೆಗೆ ಸಹಾಯ ಮಾಡುತ್ತಿದ್ದರೆ, ತಂದೆ ಬಸಪ್ಪ‌ ಎಲೆಕ್ಟ್ರಿಕಲ್ ಕೂಲಿ ಕೆಲಸ ಮಾಡುತ್ತಾ ಜೀವನ ಸಾಗಿಸುತ್ತಿದ್ದಾರೆ. ಇಂತಹ ಬಡತನದಲ್ಲಿಯೂ ಅಧ್ಯಯನ ಮಾಡಿ, ಊರಿನ‌ ಹೆಸರು, ತಂದೆ-ತಾಯಿಗೆ ರಾಜ್ಯ ಮಟ್ಟದಲ್ಲಿ ಕೀರ್ತಿ ತಂದಿದ್ದಾಳೆ.

ಕೊರೊನಾ ಸಮಯದಲ್ಲಿ ಮನೆಯಲ್ಲೇ ಅಧ್ಯಯನ ಮಾಡುತ್ತಿರುವ ಈ ವಿದ್ಯಾರ್ಥಿನಿಗೆ ಶಿಕ್ಷಕರು, ಪೋಷಕರು ಅಭಿನಂದನೆ ಸಲ್ಲಿಸಿದ್ದಾರೆ. ಮನೆಗೆ ಬಂದು ಶಿಕ್ಷಕರು ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಈ ಸಂದರ್ಭದಲ್ಲಿ ಶಿಕ್ಷಕರು ಹಾಗೂ ಪಾಲಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ, ಸಂತಸ ಹಂಚಿಕೊಂಡಿದ್ದಾರೆ.

ನೂರಕ್ಕೆ ನೂರರಷ್ಟು ಅಂಕ ಪಡೆದ ಗಂಗಮ್ಮ ಮಾತನಾಡಿ, ಯಾವುದೇ ವಿಶೇಷ ಕೋಚಿಂಗ್ ಪಡೆದುಕೊಂಡಿಲ್ಲ. ಮನೆಯಲ್ಲಿ ಅಧ್ಯಯನ ಮಾಡಿದ್ದೇನೆ. ನನಗೆ ಸಾಧನೆ ಮಾಡಬೇಕು ಎಂಬ ಗುರಿ ಇತ್ತು. ಅದು ಈಡೇರಿದೆ. ಮುಂದೆ ಸಿ ಎ ಅಧ್ಯಯನ ಮಾಡಬೇಕು ಎಂದು ಗುರಿ ಇಟ್ಟುಕೊಂಡಿದ್ದೇನೆ. ನಮ್ಮ ತಂದೆ - ತಾಯಿಗಳ ಸಹಕಾರದಿಂದ ಅವರ ಆಸೆಯಂತೆ ಮುಂದಿನ ಅಧ್ಯಯನ ಮಾಡುವುದಾಗಿ ತನ್ನ ಮುಂದಿನ ಗುರಿ ಬಗ್ಗೆ ವಿವರಿಸಿದಳು.

ಓದಿ:ಲಿಬೇರಿಯಾ ದೇಶದಲ್ಲಿ ಕನ್ನಡಿಗನಿಗೆ ಸಂಕಷ್ಟ: ತಾಯ್ನಾಡಿಗೆ ಮರಳದಂತೆ ಬೆದರಿಕೆ

ABOUT THE AUTHOR

...view details