ಬಾಗಲಕೋಟೆ:ಜಮ್ಮು-ಕಾಶ್ಮೀರದಲ್ಲಿ ಕರ್ತವ್ಯನಿರತ ಬಾಗಲಕೋಟೆ ಮೂಲದ ಯೋಧನೋರ್ವನಿಗೆ ವಿಷಕಾರಿ ಹಾವು ಕಚ್ಚಿ ಮೃತಪಟ್ಟಿರುವ ಘಟನೆ ನಿನ್ನೆ ನಡೆದಿತ್ತು. ಇಂದು ಹುಟ್ಟೂರಿನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅವರ ಮೃತದೇಹದ ಅಂತ್ಯಕ್ರಿಯೆ ನಡೆಸಲಾಯಿತು.
ಹಾವು ಕಚ್ಚಿ ಬಾಗಲಕೋಟೆ ಯೋಧ ಜಮ್ಮು-ಕಾಶ್ಮೀರದಲ್ಲಿ ಸಾವು, ಹುಟ್ಟೂರಿನಲ್ಲಿ ಅಂತ್ಯಕ್ರಿಯೆ - ಹಾವು ಕಚ್ಚಿ ಬಾಗಲಕೋಟೆ ಯೋಧ ಜಮ್ಮು-ಕಾಶ್ಮೀರದಲ್ಲಿ ಸಾವು
ವಿಷಕಾರಿ ಹಾವು ಕಚ್ಚಿರುವ ಪರಿಣಾಮ ಕರ್ತವ್ಯನಿರತ ಬಾಗಲಕೋಟೆ ಯೋಧನೋರ್ವ ಸಾವನ್ನಪ್ಪಿರುವ ಘಟನೆ ನಡೆದಿತ್ತು. ಇಂದು ಅವರ ಅಂತ್ಯಕ್ರಿಯೆ ನಡೆಸಲಾಗಿದೆ.
ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಹಲಕರ್ತಿ ಗ್ರಾಮದ ಚಿದಾನಂದ್ ಹಲಕುರ್ಕಿ(25) ಮೃತಪಟ್ಟಿದ್ದರು. ಯೋಧನ ಪಾರ್ಥಿವ ಶರೀರವನ್ನು ಇಂದು ಸ್ವ-ಗ್ರಾಮಕ್ಕೆ ಕರೆತಂದು ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರದ ನಡೆಸಲಾಯಿತು. ಮೃತ ಯೋಧ ಕಳೆದ 6 ವರ್ಷಗಳಿಂದ ಮರಾಠ ರೆಜಿಮೆಂಟ್ ಸೈನಿಕನಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಸ್ವಗ್ರಾಮಕ್ಕೆ ಯೋಧನ ಪಾರ್ಥಿವ ಶರೀರ ಆಗಮಿಸುತ್ತಿದ್ದಂತೆ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿತು.
ಈ ಸಂದರ್ಭದಲ್ಲಿ ಇಡೀ ಗ್ರಾಮದ ತುಂಬ ಯೋಧನ ಪಾರ್ಥಿವ ಶರೀರ ಮೆರವಣಿಗೆ ನಡೆಸಲಾಯಿತು. ಇದಾದ ಬಳಿಕ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಇದಾದ ಬಳಿಕ ಗ್ರಾಮದ ಹೃದಯ ಭಾಗದ ಅಗಸಿ ಮುಂದೆ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು. ಈ ಸ್ಥಳದಲ್ಲಿ ಯೋಧನ ಪುತ್ಥಳಿ ನಿರ್ಮಾಣ ಮಾಡಿ, ನಮನ ಸಲ್ಲಿಸಲು ಗ್ರಾಮಸ್ಥರು ನಿರ್ಧಾರ ಮಾಡಿರುವುದಾಗಿ ತಿಳಿದು ಬಂದಿದೆ.