ಬಾಗಲಕೋಟೆ:ಇಲ್ಲಿನ ನಗರಸಭೆ ವ್ಯಾಪ್ತಿಯಲ್ಲಿ ಬರುವ ಎಲ್ಲ ಹೋಟೆಲ್, ರೆಸ್ಟೋರೆಂಟ್‍ಗಳಲ್ಲಿ ಸ್ವಚ್ಛತೆಗೆ ಹೆಚ್ಚು ಗಮನ ಹರಿಸಿ, ಅಲ್ಲಿಗೆ ಬರುವ ಜನರ ಮೇಲೆ ಹೆಚ್ಚಿನ ನಿಗಾವಹಿಸುವಂತೆ ನಗರಸಭೆ ಪೌರಾಯುಕ್ತ ಮುನಿಶಾಮಪ್ಪ ಮಾಲೀಕರಿಗೆ ಸೂಚಿಸಿದರು.
ನಗರಸಭೆಯ ಸಭಾಭವನದಲ್ಲಿ ನಡೆದ ಹೋಟೆಲ್, ಸಲೂನ್ ಮಾಲೀಕರು ಮತ್ತು ಮಸೀದಿಯ ಅಧ್ಯಕ್ಷರುಗಳ ತುರ್ತು ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸರ್ಕಾರ ಜೂನ್ 8ರಿಂದ ಹೋಟೆಲ್, ರೆಸ್ಟೋರೆಂಟ್, ಸಲೂನ್, ಪಾರ್ಲರ್, ಧಾರ್ಮಿಕ ಸ್ಥಳಗಳಿಗೆ ಅನುಮತಿ ನೀಡಿದೆ. ಆದರೆ ಸರಕಾರ ನೀಡಿರುವ ನಿಯಮಗಳನ್ನು ಚಾಚೂ ತಪ್ಪದೇ ಪಾಲನೆಯಾಗಬೇಕು. ಕೊರೊನಾ ಸೋಂಕು ಒಬ್ಬರಿಂದ ಒಬ್ಬರಿಗೆ ಹರಡುವ ಸಾಂಕ್ರಾಮಿಕ ರೋಗವಾಗಿದ್ದು, ಹೋಟೆಲ್‍ಗೆ ಬರುವವರನ್ನು ಥರ್ಮಲ್ ಟೆಸ್ಟಿಂಗ್ ಮಾಡಲು ತಿಳಿಸಿದರು.
ಹೋಟೆಲ್, ರೆಸ್ಟೋರೆಂಟ್‍ಗಳಿಗೆ ಸ್ಥಳೀಯ, ಹೊರ ರಾಜ್ಯ, ಹೊರ ದೇಶದಿಂದ ಬರುವುದರಿಂದ ಅವರ ಮೇಲೆ ನಿಗಾ ವಹಿಸಬೇಕು. ಮಕ್ಕಳು ಮತ್ತು 60 ವರ್ಷ ಮೇಲ್ಪಟ್ಟವರ ಬಗ್ಗೆ ಹೆಚ್ಚಿನ ಗಮನಹರಿಸುವ ಅಗತ್ಯವಿದೆ. ಹೋಟೆಲ್‍ನಲ್ಲಿ ಕೈತೊಳೆಯಲು ಸ್ಯಾನಿಟೈಸರ್, ಸೋಪನ್ನು ವಾಷ್ಬೇಸ್ನಲ್ಲಿ ಇಡಬೇಕು. ಸ್ನಾನಗೃಹ, ಶೌಚಾಲಯಗಳ ಸ್ವಚ್ಛತೆ ಕಾಪಾಡಿಕೊಳ್ಳತಕ್ಕದ್ದು. ಊಟ, ಉಪಹಾರ, ಟೀ, ಪಾನೀಯಗಳನ್ನು ಮಾಡಿದ ನಂತರ ಪ್ಲೇಟ್, ಗ್ಲಾಸ್, ಲೋಟಾ ಮತ್ತು ಕಪ್‍ಗಳನ್ನು ತಕ್ಷಣವೇ ಬಿಸಿ ನೀರಿನಲ್ಲಿ ಸ್ವಚ್ಛವಾಗಿ ತೊಳೆಯಲು ಸೂಚಿಸಿದರು.
ಸಾರ್ವಜನಿಕರಿಗೆ ಕುಡಿಯಲು ಬಿಸಿ ನೀರನ್ನು ಹಾಗೂ ಚೆನ್ನಾಗಿ ಬೇಯಿಸಿದ ಆಹಾರವನ್ನುಪೂರೈಸತಕ್ಕದ್ದು. ಹೋಟೆಲ್ ಮಾಲೀಕರು ಮತ್ತು ಕಾರ್ಮಿಕರು ಆರೋಗ್ಯದ ದೃಷ್ಠಿಯಿಂದ ಪ್ರತಿದಿನ ಬೆಳಗ್ಗೆ ಕಷಾಯ ಕುಡಿಯಲು ಸಲಹೆ ನೀಡಿದರು.
ಹೋಟೆಲ್, ನಗರಸಭೆಯಿಂದ ರೆಸ್ಟೋರೆಂಟ್‍ಗಳಿಗೆ ವಾರಕ್ಕೊಮ್ಮೆ ಸೋಡಿಯಂ ಹೈಪೋಕ್ಲೋರೈಟ್ ಸೊಲ್ಯೂಶನ್ನಿಂದ ಸಾನಿಟೈಸರ್ ಮಾಡಿಕೊಡಲಾಗುವುದು. ಸರ್ಕಾರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಮಹಾಮಾರಿ ಕೊರೊನಾನಿಯಂತ್ರಣಕ್ಕೆ ಪೌರಾಯುಕ್ತರು ಸಹಕರಿಸುವಂತೆ ತಿಳಿಸಿದರು.