ಕರ್ನಾಟಕ

karnataka

ETV Bharat / state

ಬಾಗಲಕೋಟೆ: ಖಜ್ಜಿಡೋಣಿ-ಲೋಕಾಪುರ ರೈಲ್ವೇ ಮಾರ್ಗಕ್ಕೆ ಶಂಕುಸ್ಥಾಪನೆ - bagalakote kuduchi railway project

140 ಕೋಟಿ ವೆಚ್ಚದಲ್ಲಿ ನೂತನ ರೈಲ್ವೇ ಮಾರ್ಗ ನಿರ್ಮಾಣ- ಒಂದು ವರ್ಷದಲ್ಲಿ ಯೋಜನೆ ಪೂರ್ಣಗೊಳ್ಳಲಿದೆ ಎಂದು ಭರವಸೆ ನೀಡಿದ ಸಂಸದರು-ರೈಲು ಮಾರ್ಗದಿಂದ ರೈತರಿಗೆ, ಉದ್ಯಮಿಗಳಿಗೆ ಹೆಚ್ಚು ಅನುಕೂಲ.

bagalkote-foundation-stone-laying-for-khajjidoni-lokapura-railway-line
ಬಾಗಲಕೋಟೆ: ಖಜ್ಜಿಡೋಣಿ-ಲೋಕಾಪೂರ ರೈಲ್ವೇ ಮಾರ್ಗಕ್ಕೆ ಶಂಕುಸ್ಥಾಪನೆ

By

Published : Jan 1, 2023, 8:24 PM IST

Updated : Jan 1, 2023, 8:37 PM IST

ಬಾಗಲಕೋಟೆ: ಖಜ್ಜಿಡೋಣಿ-ಲೋಕಾಪುರ ರೈಲ್ವೇ ಮಾರ್ಗಕ್ಕೆ ಶಂಕುಸ್ಥಾಪನೆ

ಬಾಗಲಕೋಟೆ: ಕುಡಚಿ ರೈಲು ಮಾರ್ಗ ಯೋಜನೆಯ ಭಾಗವಾದ ಖಜ್ಜಿಡೋಣಿ-ಲೋಕಾಪುರ ಹೊಸ ರೈಲು ಮಾರ್ಗದ ಕಾಮಗಾರಿ ಒಂದು ವರ್ಷದಲ್ಲಿ ಪೂರ್ಣಗೊಳ್ಳಲಿದೆ ಎಂದು ಸಂಸದ ಪಿ.ಸಿ.ಗದ್ದಿಗೌಡರ ತಿಳಿಸಿದರು.

ಲೋಕಾಪುರ ಹೊರವಲಯದಲ್ಲಿ ನೈರುತ್ಯ ರೈಲ್ವೆ ವತಿಯಿಂದ ಹಮ್ಮಿಕೊಂಡ ಖಜ್ಜಿಡೋಣಿ-ಲೋಕಾಪುರ ಹೊಸ ರೈಲು ಮಾರ್ಗ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು 142 ಕಿ.ಮೀ ಇರುವ ಬಾಗಲಕೋಟೆ-ಕುಡಚಿ ಹೊಸ ರೈಲುಮಾರ್ಗ ಯೋಜನೆಗೆ 2010-11ರಲ್ಲಿ ಮಂಜೂರಾತಿ ದೊರೆತಿದ್ದು,

ಈಗಾಗಲೇ ಬಾಗಲಕೋಟೆ-ಖಜ್ಜಿಡೋಣಿ 30 ಕಿ.ಮೀ ರೈಲು ಮಾರ್ಗ 2018ರಲ್ಲಿ ಕಾರ್ಯಾರಂಭಗೊಂಡಿದೆ. ಅದರ ಮುಂದುವರಿದ ಭಾಗವಾದ ಖಜ್ಜಿಡೋಣಿ-ಲೋಕಾಪೂರ 9 ಕಿ.ಮೀ ಮಾರ್ಗಕ್ಕೆ ಚಾಲನೆ ನೀಡಿದ್ದು, ವರ್ಷದಲ್ಲಿ ಪೂರ್ಣಗೊಳ್ಳುವ ವಿಶ್ವಾಸವಿದೆ ಎಂದು ಹೇಳಿದರು.

ಲೋಕಾಪುರ -ಯಾದವಾಡ 21 ಕಿ.ಮೀ ರೈಲ್ವೇ ಮಾರ್ಗಕ್ಕೂ ಸಹ ಈಗಾಗಲೇ ಟೆಂಡರ್ ಕರೆಯಲಾಗಿದ್ದು, ಒಂದೆರಡು ತಿಂಗಳಲ್ಲಿ ಕೆಲಸ ಪ್ರಾರಂಭಿಸಲಾಗುತ್ತದೆ ಎಂದು ರೇಲ್ವೆ ಅಧಿಕಾರಿಗಳು ಭರವಸೆ ನೀಡಿದ್ದಾರೆ, 2010-11ರಲ್ಲಿ ಬಾಗಲಕೋಟೆ-ಕುಡಚಿ ರೈಲು ಮಾರ್ಗದ ಯೋಜನೆಗೆ ಕೇಂದ್ರ ಸರ್ಕಾರ ಶೇ.50ರಷ್ಟು, ರಾಜ್ಯ ಸರ್ಕಾರ ಶೇ.50ರಷ್ಟು ಅನುದಾನದಲ್ಲಿ ನಿರ್ಮಾಣಗೊಳ್ಳುವ ಈ ಯೋಜನೆ ರೈತರಿಗೆ, ಉದ್ಯಮಿಗಳಿಗೆ ಹೆಚ್ಚು ಅನುಕೂಲವಾಗಲಿದೆ. ಹೊಸ ರೈಲ್ವೇ ಮಾರ್ಗ ನಿರ್ಮಾಣದಿಂದಾಗಿ ಈ ಭಾಗ ಹೆಚ್ಚು ಅಭಿವೃದ್ದಿ ಹೊಂದಲಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಮಾತನಾಡಿ 140 ಕೋಟಿ ರೂ. ಗಳ ವೆಚ್ಚದಲ್ಲಿ 9 ಕಿ.ಮೀ ಖಜ್ಜಿಡೋಣಿ-ಲೋಕಾಪುರ ರೈಲು ಮಾರ್ಗ ನಿರ್ಮಾಣವಾಗುತ್ತಿದೆ. ಲೋಕಾಪುರ ವಾಣಿಜ್ಯ ನಗರವಾಗಿ ಬೆಳೆಯುತ್ತಿರುವುದರಿಂದ ಇಲ್ಲಿ ಸುಣ್ಣ, ಸಿಮೆಂಟ್, ಹಣ್ಣು ಹಾಗೂ ಕೃಷಿಯೇತರ ಬೆಳೆಗಳನ್ನು ರಪ್ತು, ಪ್ರವಾಸೋದ್ಯಮ ಅಭಿವೃದ್ದಿಗೆ ಸಹಕಾರವಾಗಲಿದ್ದು, ಆದಷ್ಟು ಬೇಗನೇ ಕಾಮಗಾರಿ ಪೂರ್ಣಗೊಳಿಸುವುದಾಗಿ ಹೇಳಿದರು.

ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿದ್ದ ವಿಧಾನ ಪರಿಷತ್ ಸದಸ್ಯ ಪಿ.ಎಚ್. ಪೂಜಾರ್​ ಮಾತನಾಡಿ, ಬಾಗಲಕೋಟೆ-ಕುಡಚಿ ರೈಲು ಮಾರ್ಗ ಯೋಜನೆಯು ಅನೇಕ ವರ್ಷಗಳ ಕನಸಾಗಿದ್ದು, ಈ ಯೋಜನೆ ಪೂರ್ಣಗೊಂಡಲ್ಲಿ ಈ ಭಾಗದ ಜನರಿಗೆ ಬಹಳಷ್ಟು ಅನುಕೂಲವಾಗಲಿದೆ. ಹಣ್ಣು-ಹಂಪಲು ಸಾಗಾಣಿಕೆ, ಲೈಮ್​ ಸ್ಟೋನ್(ಸುಣ್ಣ), ಸಿಮೆಂಟ್, ನೇಕಾರರ ಉತ್ಪನ್ನಗಳನ್ನು ಸಾಗಿಸಲು ಹಾಗೂ ಕೈಗಾರಿಕೋದ್ಯಮ ಬೆಳೆವಣಿಗೆಗೆ ಪೂರಕವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ನೈರುತ್ಯ ರೈಲ್ವೆಯ ಅಪರ ವಿಭಾಗೀಯ ವ್ಯವಸ್ಥಾಪಕ ಸಂತೋಷ ಕುಮಾರ ವರ್ಮಾ, ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕಿ ಹಿರಿತಾ, ನಿರ್ಮಾಣದ ಮುಖ್ಯ ಇಂಜಿನೀಯರ್ ಮುರಳಿಕೃಷ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಇದನ್ನೂ ಓದಿ:ಮುಂದೆ ರಾಜ್ಯ, ರಾಷ್ಟ್ರದಲ್ಲಿ ಕಾಂಗ್ರೆಸ್ ಸರ್ಕಾರ ಬರಲಿ ಎಂಬುದು ನಮ್ಮ ಆಶಯ: ಪರಮೇಶ್ವರ್

Last Updated : Jan 1, 2023, 8:37 PM IST

ABOUT THE AUTHOR

...view details