ಕರ್ನಾಟಕ

karnataka

ETV Bharat / state

ಮಾತೃವಂದನಾ ಯೋಜನೆಯಲ್ಲಿ ಬಾಗಲಕೋಟೆ ಅಗ್ರ ಸಾಧನೆ: ಸಿಇಒ - ಮುಖ್ಯಮಂತ್ರಿ ಮಾತೃಶ್ರೀ ಯೋಜನೆ

ಪ್ರಧಾನಮಂತ್ರಿ ಮಾತೃವಂದನಾ ಯೋಜನೆ ಹಾಗೂ ಮುಖ್ಯಮಂತ್ರಿ ಮಾತೃಶ್ರೀ ಯೋಜನೆಯಲ್ಲಿ ಬಾಗಲಕೋಟೆ ‌ಜಿಲ್ಲೆಯು ಹೆಚ್ಚು ಸಾಧನೆ ಮಾಡಿ ಇತರ ಜಿಲ್ಲೆಗೆ ಮಾದರಿಯಾಗಿದೆ ಎಂದು ಜಿ.ಪಂ. ಜಿಲ್ಲಾ ಪಂಚಾಯತ್​ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಂಗೂಬಾಯಿ ಮಾನಕರ್ ತಿಳಿಸಿದ್ದಾರೆ.

ಮಾತೃವಂದನಾ ಯೋಜನೆಯಲ್ಲಿ ಬಾಗಲಕೋಟೆ ಅಗ್ರ ಸಾಧನೆ: ಸಿಇಒ

By

Published : Oct 15, 2019, 8:10 PM IST

Updated : Oct 16, 2019, 1:55 PM IST

ಬಾಗಲಕೋಟೆ:ಪ್ರಧಾನಮಂತ್ರಿ ಮಾತೃವಂದನಾ ಯೋಜನೆ ಹಾಗೂ ಮುಖ್ಯಮಂತ್ರಿ ಮಾತೃಶ್ರೀ ಯೋಜನೆಯಲ್ಲಿ ಬಾಗಲಕೋಟೆ ‌ಜಿಲ್ಲೆಯು ಹೆಚ್ಚು ಸಾಧನೆ ಮಾಡಿ, ಇತರ ಜಿಲ್ಲೆಗೆ ಮಾದರಿಯಾಗಿದೆ ಎಂದು ಜಿಪಂ ಸಿಇಒ ಗಂಗೂಬಾಯಿ ಮಾನಕರ್ ತಿಳಿಸಿದ್ದಾರೆ.

ಬಾಗಲಕೋಟೆ ಜಿಲ್ಲಾ ಪಂಚಾಯತ್ ತಮ್ಮ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಏಪ್ರಿಲ್ 1, 2109ರಿಂದ ಸೆ. 30ರವರೆಗೆ 5578 ಬಾಣಂತಿಯರು ಪ್ರಧಾನಮಂತ್ರಿ ಮಾತೃವಂದನಾ ಯೋಜನೆಯ ಲಾಭ ಪಡೆದುಕೊಂಡಿದ್ದಾರೆ. ಅಂದರೆ, ಶೇ. 93.72ರಷ್ಟು ಯೋಜನೆಯು ಫಲಾನುಭವಿಗಳಿಗೆ ತಲುಪಿದೆ. ಅದೇ ರೀತಿಯಾಗಿ ಮಾತೃಶ್ರೀ ಯೋಜನೆಯಲ್ಲಿ 10,744 ಬಾಣಂತಿಯರು ಲಾಭ ಪಡೆದಿದ್ದು, ಶೇ. 95.16ರಷ್ಟು ಯೋಜನೆಯನ್ನು ಫಲಾನುಭವಿಗಳಿಗೆ ತಲುಪಿದೆ ಎಂದು ತಿಳಿಸಿದರು.

ಮಾತೃವಂದನಾ ಯೋಜನೆಯಲ್ಲಿ ಬಾಗಲಕೋಟೆ ಅಗ್ರ ಸಾಧನೆ: ಸಿಇಒ

ಅಂಗನವಾಡಿ ಮಕ್ಕಳಿಗೆ ಕಾನ್ವೆಂಟ್ ಶಾಲಾ ಮಕ್ಕಳ ಮಾದರಿಯಲ್ಲಿ ಅಧ್ಯಯನ ಬಟ್ಟೆ ಕೊಡುವ ಬಗ್ಗೆ ಹಾಗೂ ಶಾಲೆಗಳಲ್ಲಿ ನೀಡುವ ಬಿಸಿಯೂಟದಲ್ಲಿ ವಾರದ ಆರು ದಿನಗಳಲ್ಲಿ ವೆರೈಟಿ ಮೆನು ತಯಾರಿಸಲಾಗಿದೆ. ಅದೇ ರೀತಿ ಬಿಸಿಯೂಟ ನೀಡುವ ಬಗ್ಗೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದರು.

ಅಭಿವೃದ್ಧಿ ವಿಷಯದಲ್ಲಿ ಜಿಲ್ಲಾ ಪಂಚಾಯತ್​ ಸದಸ್ಯರ ಗಮನಕ್ಕೆ ತರದೇ ಕೆಲವೊಂದು ಯೋಜನೆ ಜಾರಿಗೆ ತರುವುದು ಅನಿವಾರ್ಯವಿರುತ್ತದೆ. ಪ್ಲಾಸ್ಟಿಕ್​ಗೆ ಪಯಾರ್ಯವಾಗಿ ಪೇಪರ್​ ಬ್ಯಾಗ್​ ಬಳಸುವ ದೃಷ್ಟಿಯಿಂದ ಸ್ತ್ರೀ ಶಕ್ತಿ ಸಂಘಟನೆ ಮೂಲಕ ಜಾಗೃತಿ ಮೂಡಿಸಲು ಮೇಳ ಆಯೋಜಿಸಲಾಗುವುದು. ಇದಕ್ಕೆ ಸರ್ಕಾರದಿಂದ ಒಂದು‌ ಕೋಟಿಗೂ ಅಧಿಕ ಹಣ ಅನುದಾನ ಬಂದಿದೆ ಎಂದು‌ ತಿಳಿಸಿದರು.

Last Updated : Oct 16, 2019, 1:55 PM IST

ABOUT THE AUTHOR

...view details