ಬಾಗಲಕೋಟೆ :ಬಡ ಕುಟುಂಬಕ್ಕೆ ಕೊರೊನಾ ಕಂಟಕವಾಗಿದೆ. ದುಡಿಯಲಿಕ್ಕೆ ಹೋದ ಮನೆಯೊಡೆಯ ಅಬ್ದುಲ್ ಮುನಾಫ್ ಎಂಬಾತ ನಾಪತ್ತೆಯಾಗಿದ್ದಾನೆ. ಈ ಹಿನ್ನೆಲೆ ಜಿಲ್ಲಾಡಳಿತವು ಬಡ ಕುಟುಂಬದ ನೆರವಿಗೆ ನಿಂತಿದೆ.
ಬಡಕುಟುಂಬದ ನೆರವಿಗೆ ನಿಂತ ಬಾಗಲಕೋಟೆ ಜಿಲ್ಲಾಡಳಿತ.. ಉಪ ವಿಭಾಗಾಧಿಕಾರಿ ಗಂಗಪ್ಪ ಹಾಗೂ ಶಿರಸ್ತೇದಾರ್ ಕುಲಕರ್ಣಿ ನೇತೃತ್ವದಲ್ಲಿ 25 ಕೆಜಿ ಅಕ್ಕಿ,10 ಕೆಜಿ ಗೋಧಿ ವಿತರಿಸಿದ್ದಾರೆ. ಇದರ ಜೊತೆಗೆ ಮನೆಯ ಯಜಮಾನ ನಾಪತ್ತೆ ಆಗಿರುವ ಹಿನ್ನೆಲೆ ಡಿವೈಎಸ್ಪಿ ಅವರಿಗೆ ಪತ್ತೆಹಚ್ಚಿ ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.
ಇನ್ನು, ಮನೆಯಲ್ಲಿ ವಿಶೇಷಚೇತನ ವ್ಯಕ್ತಿ ಇರುವ ಹಿನ್ನೆಲೆ ಆತನ ಆಧಾರ್ ಕಾರ್ಡ್ ಪಡೆದು ಪ್ರತಿ ತಿಂಗಳು ಮಾಶಾಸನ ಸಿಗುವಂತೆ ಅಧಿಕಾರಿಗಳು ಅನುಕೂಲ ಮಾಡುತ್ತಿದ್ದಾರೆ. ಯಜಮಾನ ನಾಪತ್ತೆ ಆಗಿರುವ ಹಿನ್ನೆಲೆ, ಆತನ ಹೆಂಡತಿ, ಮೂವರು ಚಿಕ್ಕ ಮಕ್ಕಳು, ವಿಕಲಾಂಗ ಅಣ್ಣ ಬೀದಿಪಾಲು ಆಗಿರುವ ಬಗ್ಗೆ ವರದಿ ಮಾಡಲಾಗಿತ್ತು. ಇದನ್ನು ಗಮನಿಸಿದ ಜಿಲ್ಲಾಡಳಿತ ಸಹಾಯ ಹಸ್ತ ಚಾಚಿದೆ.
ದೇಶದಲ್ಲಿ ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ ಗಣನೀಯ ಇಳಿಕೆ