ಬಾಗಲಕೋಟೆ :ಇಲ್ಲಿನಗುಳೇದಗುಡ್ಡದ ನಿವಾಸಿ ಹಾಗು ರಂಗಭೂಮಿ ಕಲಾವಿದೆ ಜ್ಯೋತಿ ತಮ್ಮ ಮನೆಯ ಸಾಕುನಾಯಿಗೆ ಸಂಭ್ರಮದ ಸೀಮಂತ ಮಾಡಿದ್ದಾರೆ. ಜೂಲಿ ಜಾತಿಯ ಚಿಂಕವ್ವ ಹೆಸರಿನ ನಾಯಿಗೆ ಹಸಿರು ಬಳೆ, ಹಸಿರು ಸೀರೆ, ಕುಂಕುಮ, ಅರಿಶಿನ ಹಚ್ಚಿ ಆರತಿ ಬೆಳಗಿದರು.
ಮುದ್ದಿನ ಶ್ವಾನಕ್ಕೆ ಅದ್ಧೂರಿ ಸೀಮಂತ ಕಾರ್ಯ ಮಾಡಿದ ರಂಗಭೂಮಿ ಕಲಾವಿದೆ - ಸೀಮಂತ
ಪ್ರಾಣಿಗಳಂದ್ರೆ ಕೆಲವರಿಗೆ ಪಂಚಪ್ರಾಣ. ಮನೆಯಲ್ಲಿ ಮಕ್ಕಳಂತೆ ಸಾಕುವುದುಂಟು. ಇದಕ್ಕೆ ಪೂರಕವೆಂಬಂತೆ ಇಲ್ಲೊಂದೆಡೆ ಮುದ್ದಿನ ಶ್ವಾನಕ್ಕೆ ಮನೆಮಂದಿ ಸೇರಿ ಅದ್ದೂರಿಯಾಗಿ ಸೀಮಂತ ನೆರವೇರಿಸಿದ್ದಾರೆ..

ಮುದ್ದಿನ ಶ್ವಾನಕ್ಕೆ ಮನೆಯಲ್ಲಿ ಸೀಮಂತ ಕಾರ್ಯ ಮಾಡಿದ ರಂಗಭೂಮಿ ಕಲಾವಿದೆ
ಶ್ವಾನಕ್ಕೆ ಅಚ್ಚುಮೆಚ್ಚಿನ ಹಣ್ಣುಗಳು, ಸಿಹಿ ತಿನಿಸು ಮಾಡಿ ಮನೆ ಮಂದಿ ಉಣಬಡಿಸಿದ್ದಾರೆ. ಸೀಮಂತ ಕಾರ್ಯದ ವೇಳೆ ನಾಯಿಯೂ ಶಾಂತವಾಗಿ ಕುಳಿತಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಸೀಮಂತ ಮಾಡಿಸಿಕೊಂಡ ನಾಯಿ ಇದೀಗ 1 ವಾರದ ಬಳಿಕ 6 ಮರಿಗಳಿಗೆ ಜನ್ಮ ನೀಡಿದೆ. 3 ಹೆಣ್ಣು ಹಾಗೂ 3 ಗಂಡು ಮರಿಗಳಿಗೆ ಚಿಂಕವ್ವ ಜನ್ಮ ನೀಡಿದೆ.
ಇದನ್ನೂ ಓದಿ:ಗಂಡನ ಕೃಷಿ ಕೆಲಸಕ್ಕೆ ಸಾಥ್ ನೀಡಿದ 'ಡ್ರೋನ್' ರೈತ ಮಹಿಳೆ !