ಬಾಗಲಕೋಟೆ:ಕೋವಿಡ್ ಪರಿಸ್ಥಿತಿಯ ಲಾಭ ಮಾಡಿಕೊಂಡಿರುವ ಆಸ್ಪತ್ರೆಗಳು ಜನರಿಂದ ಹೆಚ್ಚಿನ ಹಣ ಪೀಕುತ್ತಿರುವ ಬಗ್ಗೆ ಈಟಿವಿ ಭಾರತ ಪ್ರಕಟಿಸಿದ್ದ ವರದಿಯಿಂದ ಎಚ್ಚೆತ್ತ ಅಧಿಕಾರಿಗಳು ನಗರದ ಖಾಸಗಿ ಆಸ್ಪತ್ರೆಗಳಿಗೆ ನೋಟಿಸ್ ಜಾರಿ ಮಾಡಿದ್ದಾರೆ.
ನಗರದ ಶಕುಂತಲಾ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಅಲ್ಲಮ ಪ್ರಭು ಆಸ್ಪತ್ರೆಗೆ ಬಾಗಲಕೋಟೆ ಉಪವಿಭಾಗಾಧಿಕಾರಿ ಎಂ.ಗಂಗಪ್ಪ ನೋಟಿಸ್ ಜಾರಿ ಮಾಡಿದ್ದಾರೆ.
ಉಪವಿಭಾಗಾಧಿಕಾರಿಗಳ ನೇತೃತ್ವದ ತಂಡ ಆಸ್ಪತ್ರೆಗಳಿಗೆ ಭೇಟಿ ನೀಡಿ, ಕೋವಿಡ್ ಚಿಕಿತ್ಸೆಗೆ ಸಿದ್ಧಪಡಿಸಲಾದ ಬೆಡ್‍ಗಳ ಸಂಖ್ಯೆ, ಆಕ್ಸಿಜನ್, ರೆಮ್ಡಿಸಿವಿರ್ ವೆಂಟಿಲೇಟರ್, ಐಸಿಯು, ಹೆಚ್.ಡಿ.ಯು ಬೆಡ್‍ಗಳ ದರ ಪಟ್ಟಿ ಪರಿಶೀಲಿಸಿದಾಗ ಸರಿಯಾದ ನಿರ್ವಹಣೆ ಕಂಡು ಬಂದಿಲ್ಲ. ಅಲ್ಲದೆ, ಆಕ್ಸಿಜನ್‍ಗೆ ಹೆಚ್ಚಿನ ಹಣ ಬೇಡಿಕೆ ಇಟ್ಟಿರುವುದು ಗೊತ್ತಾಗಿದೆ. ಅಧಿಕಾರಿಗಳ ಭೇಟಿ ಸಮಯದಲ್ಲಿ ಬೇಡಿಕೆ ಇಟ್ಟಿದ್ದ 30 ಬೆಡ್‍ಗಳ ಪೈಕಿ 20 ಮಾತ್ರ ಸಿದ್ಧಪಡಿಸಿರುವುದು ಕಂಡು ಬಂದಿದೆ. ಇವೆಲ್ಲವನ್ನೂ ಪರಿಶೀಲಿಸಿ ಸೂಕ್ತ ನಿರ್ದೇಶನ ನೀಡುವುದರ ಜೊತೆಗೆ ನೋಟಿಸ್ ಜಾರಿ ಮಾಡಿರುವುದಾಗಿ ತಿಳಿಸಿದ್ದಾರೆ.
ಫಲಶ್ರುತಿ ವರದಿ : ಕೊರೊನಾ 2ನೇ ಅಲೆ, ಖಾಸಗಿ ಆಸ್ಪತ್ರೆಗಳ ಪಾಲಿಗೆ ಲಾಭದಾಯಕವಾಗಿದೆ: ಸಾರ್ವಜನಿಕರ ಆರೋಪ
ಅಧಿಕಾರಿಗಳ ತಂಡದಲ್ಲಿ ತಹಶೀಲ್ದಾರ್ ಗುರುಸಿದ್ದಯ್ಯ ಹಿರೇಮಠ, ತಾಲೂಕು ವೈದ್ಯಾಧಿಕಾರಿ ಡಾ. ಡಿ.ಬಿ.ಪಟ್ಟಣಶೆಟ್ಟಿ ಹಾಗೂ ಪಿಎಸ್ಐ ಇದ್ದರು.