ಬಾಗಲಕೋಟೆ: ಉಕ್ರೇನ್ನಿಂದ ಬಾಗಲಕೋಟೆಗೆ ಬಂದ ವಿದ್ಯಾರ್ಥಿ ಓವೈಸ್ ಗುಲಬುರ್ಗಾ ಅವರು ಮನೆಗೆ ಬಂದ ನಂತರ ಉಕ್ರೇನ್‌ನಲ್ಲಿ ನಡೆಯುತ್ತಿದ್ದ ಯುದ್ಧದ ಭೀಕರತೆ ವಿವರಿಸಿದ್ದಾರೆ.
ಉಕ್ರೇನ್ ಮತ್ತು ರಷ್ಯಾ ನಡುವೆ ಭೀಕರ ಯುದ್ಧ ನಡೆಯುತ್ತಿದ್ದು, ಜೀವ ಭಯದಲ್ಲೇ ದಿನಗಳನ್ನು ಕಳೆಯುತ್ತಿದ್ದೆವು. ಆದರೆ, ಭಾರತೀಯ ರಾಯಭಾರಿ ಕಚೇರಿಯ ನೆರವಿನಿಂದ ಜೀವ ಉಳಿಸಿಕೊಂಡು ದೇಶಕ್ಕೆ ಮರಳಿದ್ದೇವೆ ಎಂದು ವಿದ್ಯಾರ್ಥಿ ಓವೈಸ್ ಗುಲಬುರ್ಗಾ ಹೇಳಿದರು.
ಉಕ್ರೇನ್ನಿಂದ ವಾಪಸ್: ಸರ್ಕಾರಕ್ಕೆ ಧನ್ಯವಾದ ತಿಳಿಸಿದ ಬಾಗಲಕೋಟೆ ವಿದ್ಯಾರ್ಥಿ ಸರ್ಕಾರಕ್ಕೆ ಚಿರರುಣಿ:ರಷ್ಯಾ-ಉಕ್ರೇನ್ ಯುದ್ಧ ಆರಂಭವಾದ ಬಳಿಕ ಒಂದು ವಾರ ಬಾಂಬ್ ಸೆಕ್ಟರ್ನಲ್ಲಿಯೇ ಆಶ್ರಯ ಪಡೆದಿದ್ದೆವು. ಆದರೆ, ನಿತ್ಯ ಅಲ್ಲಿ ನಡೆಯುತ್ತಿದ್ದ ಬಾಂಬ್ ದಾಳಿಯ ಶಬ್ಧ ಕೇಳಿ ನಾವು ನಮ್ಮ ದೇಶಕ್ಕೆ ಹೋಗುತ್ತೇವೆ ಇಲ್ಲವೋ ಎಂಬ ಭಯದಲ್ಲೇ ಇದ್ದೆವು. ಆದರೆ, ಭಾರತ ಸರ್ಕಾರ ನಮ್ಮನ್ನು ಕರೆತರಲು ಶಕ್ತಿಮೀರಿ ಪ್ರಯತ್ನ ಮಾಡಿದ್ದು, ಸರ್ಕಾರಕ್ಕೆ ಚಿರರುಣಿಯಾಗಿದ್ದೇನೆ.
ಉಕ್ರೇನ್ ರೈಲ್ವೆ ಮೂಲಕ ಪೊಲ್ಯಾಂಡ್ಗೆ ಬಂದು ಬಳಿಕ ದೆಹಲಿ ಮೂಲಕ ಪ್ರಯಾಣ ಆರಂಭಿಸಿ ಬಾಗಲಕೋಟೆಗೆ ಬಂದು ಸೇರಿದ್ದೇನೆ. ಯುದ್ಧ ನಡೆಯುತ್ತಿರುವ ಸ್ಥಳದಿಂದ ಬಾಗಲಕೋಟೆಗೆ ತಲುಪುವವರೆಗೂ ಕೇಂದ್ರ ಮತ್ತು ರಾಜ್ಯ ಸರ್ಕಾರ ಕಾಳಜಿ ವಹಿಸಿದೆ. ಸರ್ಕಾರಕ್ಕೆ ಮತ್ತು ಇಂಡಿಯನ್ ಏರ್ಫೋರ್ಸ್ಗೆ ಧನ್ಯವಾದ ಹೇಳುತ್ತೇನೆ ಎಂದರು.
ಉಕ್ರೇನ್ದಲ್ಲಿದ್ದ ವಿಎನ್ ಕರಾಜಿನ್ ನ್ಯಾಷನಲ್ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದ ಓವೈಸ್ ಕಳೆದ ಎರಡು ವರ್ಷಗಳಿಂದ ಉಕ್ರೇನ್ನ ಖಾರ್ಕಿವ್ ನಲ್ಲಿ ನೆಲೆಸಿದ್ದರು. ಉಕ್ರೇನ್-ರಷ್ಯಾ ನಡುವೆ ಯುದ್ಧ ಆರಂಭವಾದಾಗಿನಿಂದ ತುಂಬಾ ದುಃಖದಲ್ಲಿದ್ದೆವು. ಸರ್ಕಾರದ ಪ್ರಯತ್ನದಿಂದ ನಮ್ಮ ಮಗ ಮನೆಗೆ ವಾಪಸ್ ಬಂದಿದ್ದಾನೆ. ಸಂದಿಗ್ಧ ಪರಿಸ್ಥಿತಿಯಲ್ಲಿ ಸರ್ಕಾರ ವಿದ್ಯಾರ್ಥಿಗಳ ನೆರವಿಗೆ ಬಂದಿದೆ. ಹಾಗಾಗಿ ಸರ್ಕಾರಕ್ಕೆ ಧನ್ಯವಾದ ಎಂದು ವಿದ್ಯಾರ್ಥಿಯ ತಂದೆ ಸೈಯದ್ ಇರ್ಷಾದ್ ಹೇಳಿದರು.
ಇದನ್ನೂ ಓದಿ:ಭಾರತ ಸರ್ಕಾರದ ನಡೆ ಸುರಕ್ಷತೆಗೆ ಸಾಕ್ಷಿ: ಉ್ರಕೇನ್ನಿಂದ ಮರಳಿದ ವಿದ್ಯಾರ್ಥಿಯಿಂದ ಗುಣಗಾನ