ಕರ್ನಾಟಕ

karnataka

ETV Bharat / state

ಅನಗತ್ಯವಾಗಿ ರಸ್ತೆಗಿಳಿದಿದ್ದ ಬೈಕ್​ಗಳು ಜಪ್ತಿ.... - ಲಾಕ್​ಡೌನ್​

ಜಿಲ್ಲೆಯಲ್ಲಿ ಅನಗತ್ಯವಾಗಿ ತಿರುಗಾಡುತ್ತಿದ್ದ ಸುಮಾರು 400 ಕ್ಕೂ ಹೆಚ್ಚು ಬೈಕ್​ಗಳನ್ನು ಪೊಲೀಸ್​ ಇಲಾಖೆ ಜಪ್ತಿ ಮಾಡಿದೆ.

bikes Siege
ಬೈಕ್​ಗಳು ಜಪ್ತಿ

By

Published : Mar 31, 2020, 3:02 PM IST

ಬಾಗಲಕೋಟೆ:ಕೊರೊನಾ ವೈರಸ್ ಭೀತಿ ಹಿನ್ನೆಲೆ, ಜಿಲ್ಲೆಯಲ್ಲಿ ಲಾಕ್​ಡೌನ್​ ಇದ್ದರೂ ಸಹ ಕೆಲವರು ವಿನಾಕಾರಣ ರಸ್ತೆಗೆ ಇಳಿಯುತ್ತಿರುವುದರಿಂದ ಅವರ ಬೈಕ್​ಗಳನ್ನು ಪೊಲೀಸ್ ಇಲಾಖೆ ಜಪ್ತಿ ಮಾಡಿದೆ.

ಅನಗತ್ಯವಾಗಿ ರಸ್ತೆಗಿಳಿದಿದ್ದ ಬೈಕ್​ಗಳು ಜಪ್ತಿ

ಜಿಲ್ಲೆಯಲ್ಲಿ ಅನಗತ್ಯವಾಗಿ ತಿರುಗಾಡುತ್ತಿದ್ದ ಸುಮಾರು 400 ಕ್ಕೂ ಹೆಚ್ಚು ಬೈಕ್​ಗಳನ್ನು ಜಪ್ತಿ ಮಾಡಲಾಗಿದೆ. ಲಾಠಿ ಹೂಡೆತದಿಂದ ಕೆಲ ಅಮಾಯಕರು, ಉದ್ಯೋಗಳಿಗೆ ತೊಂದರೆ ಉಂಟಾದ ಹಿನ್ನೆಲೆ, ಆಕ್ರೋಶಕ್ಕೆ ಕಾರಣವಾಗಿತ್ತು.ಈ ಹಿನ್ನೆಲೆ ಪೊಲೀಸ್ ಇಲಾಖೆಯವರು ಲಾಠಿಯಿಂದ ಹೊಡೆಯುವ ಬದಲು ಬೈಕ್ ಜಪ್ತಿ ಮಾಡಲು ಮುಂದಾಗಿದ್ದಾರೆ.

ಇದರಿಂದ ಜಿಲ್ಲೆಯ 21 ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಎರಡು ದಿನಗಳಲ್ಲಿ 400 ಬೈಕ್​ಗಳನ್ನು ವಶಕ್ಕೆ ಪಡೆಯಲಾಗಿದ್ದು, ಲಾಕ್ ಡೌನ್ ಮುಗಿದ ಬಳಿಕ ವಾಪಸ್ಸು ಕೂಡಲಾಗುವುದು ಎಂದು ಪೊಲೀಸ್​ ಇಲಾಖೆ ತಿಳಿಸಿದೆ. ಜನ ಸಾಮಾನ್ಯರಿಗೆ ಮನೆಯಲ್ಲಿ ಇರಿ ಎಂದು ಎಷ್ಟೇ ವಿನಂತಿ ಮಾಡಿಕೊಂಡರು, ವಿನಾಕಾರಣ ಸಂಚಾರ ಮಾಡುವವರ ವಿರುದ್ದ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ಸರ್ಕಾರದ ಆದೇಶವನ್ನು ಎಲ್ಲರೂ ಪಾಲಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಲೋಕೇಶ ಜಗಲಸಾರ ತಿಳಿಸಿದ್ದಾರೆ.

ABOUT THE AUTHOR

...view details