ಕರ್ನಾಟಕ

karnataka

ETV Bharat / state

ಬಾಗಲಕೋಟೆ: ನಗರಸಭೆಗೆ ಆಯ್ಕೆಯಾಗಿ ಎರಡು ವರ್ಷವಾದರೂ ಅಭ್ಯರ್ಥಿಗಳಿಗೆ ಸಿಕ್ಕಿಲ್ಲ ಅಧಿಕಾರ ಭಾಗ್ಯ - ಬಾಗಲಕೋಟೆ ನಗರಸಭೆ ಅಭ್ಯರ್ಥಿಗಳು

ಬಾಗಲಕೋಟೆ ನಗರಸಭೆಗೆ ಜನಪ್ರತಿನಿಧಿಗಳು ಆಯ್ಕೆಯಾಗಿ ಎರಡು ವರ್ಷ ಕಳೆದರೂ ಇನ್ನೂ ಅಧಿಕಾರ ಭಾಗ್ಯ ಸಿಗದೇ ನಿರಾಸೆಯಾಗಿದೆ.

Bagalkote
ಬಾಗಲಕೋಟೆ

By

Published : Oct 18, 2020, 1:49 PM IST

ಬಾಗಲಕೋಟೆ:ಬಾಗಲಕೋಟೆ ನಗರಸಭೆಗೆ ಆಯ್ಕೆಯಾಗಿರುವ ಸದಸ್ಯರ ಹಣೆ ಬರಹವೇ ಸರಿ ಇಲ್ಲ ಎಂಬುದು ಈಗ ಚರ್ಚೆಯ ವಿಷಯವಾಗಿದೆ. ಹೌದು, ಜನಪ್ರತಿನಿಧಿಗಳು ಆಯ್ಕೆಯಾಗಿ ಎರಡು ವರ್ಷ ಕಳೆದರೂ ಇನ್ನೂ ಅಧಿಕಾರ ಭಾಗ್ಯ ಸಿಕ್ಕಿಲ್ಲ.

ಹೈಕೋರ್ಟ್​ನಲ್ಲಿ ಮೀಸಲಾತಿ ಸಂಬಂಧಪಟ್ಟಂತೆ ವಿಚಾರಣೆ ನಡೆಯುದೆ. ಇತ್ತೀಚಿಗೆ ಹೈಕೋರ್ಟ್ ನಿಂದ ಆದೇಶ ಬಂದಿದ್ದು, ಮೀಸಲಾತಿಯೂ ಪ್ರಕಟಗೊಂಡು ಇನ್ನೇನೂ ಚುನಾವಣೆ ನಡೆಯುವ ದಿನಾಂಕ‌ ಸಹ ಪ್ರಕಟಗೊಂಡಿದ್ದು, ಎರಡು ವರ್ಷದ ಬಳಿಕ ಅಧಿಕಾರ ಸಿಗಲಿದೆ ಎಂದು ಆಸೆ ಇಟ್ಟುಕೊಂಡಿದ್ದ ಸದಸ್ಯರಿಗೆ ಮತ್ತೆ ನಿರಾಸೆ ಮೂಡಿಸಿದೆ.

ನಗರಸಭೆ ಮೀಸಲಾತಿ ಸಂಬಂಧ ಬೇರೆ ಜಿಲ್ಲೆಯ ಸದಸ್ಯರು ಹೈಕೋರ್ಟ್​ ಮೆಟ್ಟಿಲೇರಿದ ಪರಿಣಾಮ ರಾಜ್ಯದ ಎಲ್ಲ ನಗರಸಭೆಗಳಿಗೆ ತಡೆಯಾಜ್ಞೆ ನೀಡಲಾಗಿದೆ. ಇದರಿಂದ ಬಾಗಲಕೋಟೆ ನಗರ ಸಭೆ ಸದಸ್ಯರಿಗೆ ಮತ್ತೆ ನಿರಾಸೆಯಾಗಿದೆ.

35 ಸ್ಥಾನದಲ್ಲಿ 29 ಸದಸ್ಯರು ಹೊಂದಿರುವ ಬಿಜೆಪಿ ಪಕ್ಷವು ಬಹುಮತ ಹೂಂದಿದೆ. ಈಗಾಗಲೇ ಅಧ್ಯಕ್ಷ ಸ್ಥಾನಕ್ಕೆ ಮಹಿಳಾ ಎಸ್​ಸಿ, ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮೀಸಲಾತಿ ಪ್ರಕಟವಾಗಿತ್ತು. 17 ರಂದು ಚುನಾವಣೆ ನಡೆಸುವ ಬಗ್ಗೆ ಜಿಲ್ಲಾಧಿಕಾರಿ ಆದೇಶ ಸಹ ಹೂರಡಿಸಿದ್ದರು, ಆದರೆ ಮತ್ತೆ ಹೈಕೋರ್ಟ್​​ ತಡೆಯಾಜ್ಞೆ ಆದೇಶ ಹೂರಡಿಸಿದ ಹಿನ್ನೆಲೆ ಸದಸ್ಯರ ಕನಸಿಗೆ ಭಗ್ನ ಉಂಟಾಗಿದೆ.

ಎರಡು ವರ್ಷಗಳಿಂದ ಅಧಿಕಾರ ಆಸೆಗಾಗಿ ಜಾತಕ ಪಕ್ಷಿಯಂತೆ ಕಾಯುತ್ತಿದ್ದ ಸದಸ್ಯರಿಗೆ ನಿರಾಸೆ ಮೂಡಿಸಿದ್ದು, ಅಕ್ಟೋಬರ್ 22 ರಂದು ವಿಚಾರಣೆ ಬರಲಿದೆ. ಅಲ್ಲಿಯವರೆಗೆ ಏನು ಆದೇಶ ಬರಲಿದೆ ಎಂಬುದನ್ನು ಕಾಯ್ದು ನೋಡಬೇಕಾಗಿದೆ.

ABOUT THE AUTHOR

...view details