ಬಾಗಲಕೋಟೆ:ಜಿಲ್ಲೆಯಲ್ಲಿ ಮನಕಲುಕುವ ಘಟನೆಯೊಂದು ಬೆಳಕಿಗೆ ಬಂದಿದೆ. ಮುದ್ದಾದ ಮೂರು ಮಕ್ಕಳ ಪಾಲಿಗೆ ತಾಯಿಯೇ ಯಮನಾಗಿದ್ದಾಳೆ. ಮೂರು ಹೆಣ್ಣು ಮಕ್ಕಳನ್ನು ಸಾಯಿಸಿ ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ದುರಂತ ಘಟನೆ ತಿಮ್ಮಾಪುರ ಗ್ರಾಮದಲ್ಲಿ ನಡೆದಿದೆ. ಮೃತಪಟ್ಟವರನ್ನು ತಾಯಿ ರೇಖಾ ಬಗಲಿ (28), ಹೆಣ್ಣು ಮಕ್ಕಳಾದ ಸನ್ನಿಧಿ (7), ಸಮೃದ್ದಿ (4) ಮತ್ತು ಶ್ರೀನಿಧಿ (2) ಎಂದು ಗುರುತಿಸಲಾಗಿದೆ.
ಓದಿ:ಚಿಕ್ಕಬಳ್ಳಾಪುರದಲ್ಲಿ ಮೂವರ ಸಾವು ಪ್ರಕರಣ.. ನಮ್ಮ ಅಪ್ಪ, ಅಮ್ಮ, ಅಕ್ಕ ಎಂದು ಗುರುತಿಸಿದ ಸಹೋದರಿ
ಏನಿದು ಘಟನೆ: ತಿಮ್ಮಾಪುರ ಗ್ರಾಮದ ನಿವಾಸಿ ರೈತ ಅರ್ಜುನ್ ಮತ್ತು ರೇಖಾಗೆ ಕೆಲ ವರ್ಷಗಳ ಹಿಂದೆ ಮದುವೆಯಾಗಿತ್ತು. ರೇಖಾ ಅವರು ಮಾಜಿ ಸಚಿವ ಹೆಚ್ವೈ ಮೇಟಿ ಅವರ ಸಹೋದರಿ ಕಡೆಯ ಸಂಬಂಧಿಕರು ಎನ್ನಲಾಗಿದೆ. ಅರ್ಜುನ್ ಮತ್ತು ರೇಖಾ ದಂಪತಿಗೆ ಮೂರು ಮುದ್ದಾದ ಹೆಣ್ಣು ಮಕ್ಕಳಿದ್ದಾರೆ. ಮದುವೆಯಾಗಿ ಹಲವಾರು ವರ್ಷಗಳು ಕಳೆದರೂ ಸಹ ಸಣ್ಣಪುಟ್ಟ ಕಲಹ ಹೊಂದಿದ್ದರು ಎನ್ನಲಾಗಿದೆ. ಆದರೆ,ಇಷ್ಟೆಲ್ಲದರ ಮಧ್ಯೆ ಸಂಸಾರ ಸುಖವಾಗಿಯೇ ಸಾಗುತ್ತಿತ್ತು. ಎಂದಿನಂತೆ ಇಂದು ಅರ್ಜುನ್ ಕಬ್ಬು ಕಟಾವ್ ಮಾಡುವುದಕ್ಕೆ ಹೊಲಕ್ಕೆ ತೆರಳಿದ್ದಾರೆ. ಆದರೆ ರೇಖಾ ಇತ್ತೀಚೆಗೆ ಕೆಲ ವಿಚಾರಗಳಿಗಾಗಿ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದರು ಎಂದು ಹೇಳಲಾಗುತ್ತಿದೆ. ಮೂರು ಜನ ಹೆಣ್ಣು ಮಕ್ಕಳಿದ್ದ ಕಾರಣ ರೇಖಾ ಮಕ್ಕಳ ಬಗ್ಗೆ ಬಹಳ ಚಿಂತಿಳಾಗಿದ್ದರು, ನೆರೆ ಹೊರೆಯವರು ಮಾತನಾಡಿಕೊಳ್ಳುತ್ತಿದ್ದರು ಎಂಬ ವಿಷಯ ಹೊರ ಬಿದ್ದಿದೆ.
ಓದಿ:ಮೆಟ್ರೋ ಪಿಲ್ಲರ್ ಕುಸಿತ ಪ್ರಕರಣ: ಪೊಲೀಸರ ಮನವೊಲಿಕೆ ಬಳಿಕ ಮೃತದೇಹ ಸ್ವೀಕರಿಸಿದ ಕುಟುಂಬಸ್ಥರು