ಬಾಗಲಕೋಟೆ: ಕುಬ್ಜ ಜೋಡಿಯೊಂದು ದಾಂಪತ್ಯ ಜೀವನಕ್ಕೆ ಕಾಲಿಡುವ ಮೂಲಕ ಗಮನ ಸೆಳೆದ ಘಟನೆ ಬಾದಾಮಿ ಪಟ್ಟಣದಲ್ಲಿ ನಡೆದಿದೆ. ಪಟ್ಟಣದ ಮಹೇಶ್ ಹೊಸಗೌಡ್ರ ಸಮುದಾಯ ಭವನದಲ್ಲಿ ನಡೆದ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಕುಬ್ಜ ಯುವಕ-ಯುವತಿ ಹಸೆಮಣೆ ಏರಿದ್ದು, ವಿಶೇಷವಾಗಿತ್ತು.
ಬಾಗಲಕೋಟೆ ಸಾಮೂಹಿಕ ವಿವಾಹದಲ್ಲಿ ಗಮನ ಸೆಳೆದ ಕುಬ್ಜ ಜೋಡಿ - ವೈವಾಹಿಕ ಜೀವನ ಕುಬ್ಜ ದಂಪತಿ
ಬಾಗಲಕೋಟೆ ಪಟ್ಟಣದ ಮಹೇಶ್ ಹೊಸಗೌಡ್ರ ಸಮುದಾಯ ಭವನದಲ್ಲಿ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಕುಬ್ಜ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
![ಬಾಗಲಕೋಟೆ ಸಾಮೂಹಿಕ ವಿವಾಹದಲ್ಲಿ ಗಮನ ಸೆಳೆದ ಕುಬ್ಜ ಜೋಡಿ bagalkot-mass-wedding-shortest-couple-marriage](https://etvbharatimages.akamaized.net/etvbharat/prod-images/768-512-13630607-thumbnail-3x2-wedding.jpg)
ಕುಬ್ಜ ದಂಪತಿ
ಬಾಗಲಕೋಟೆ ಸಾಮೂಹಿಕ ವಿವಾಹದಲ್ಲಿ ಗಮನ ಸೆಳೆದ 'ಕುಬ್ಜ ಜೋಡಿ'
ಮೂಲತಃ ಬಾದಾಮಿ ತಾಲೂಕಿನ ಕುಟಕನಕೇರಿ ಗ್ರಾಮದ ನಿವಾಸಿ ರವಿ ನಾಯ್ಕರ್ (35) ಬೀಳಗಿ ಪಟ್ಟಣದ ಸುಜಾತ ತಳವಾರ (21) ಎಂಬ ಯುವತಿಯನ್ನು ವರಿಸಿದನು.
ರವಿ ನಾಯ್ಕರ್ ಹುಬ್ಬಳ್ಳಿಯಲ್ಲಿ ಪಾನ್ ಶಾಪ್ ಹಾಕಿಕೊಂಡಿದ್ದಾನೆ. ಮದುವೆ ವಯಸ್ಸಾದರೂ, ತಕ್ಕ ಯುವತಿ ದೊರೆಯದ ಕಾರಣ ಕಂಕಣ ಭಾಗ್ಯ ಕೂಡಿ ಬಂದಿರಲಿಲ್ಲ. ಯುವತಿ ವಿದ್ಯಾಭ್ಯಾಸ ಮಾಡುತ್ತಿದ್ದು, ಇಬ್ಬರು ಮದುವೆ ಆಗಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.