ಬಾಗಲಕೋಟೆ:ಕೋವಿಡ್ ಹಿನ್ನೆಲೆ ಲಾಕ್ ಡೌನ್ ಆಗಿರುವ ಸಮಯದಲ್ಲಿ ಮದ್ಯ ಮಾರಾಟ ಬಂದ್ ಆಗಿದ್ದು, ನಗರದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆ ಅಬಕಾರಿ ಇಲಾಖೆಯವರು ಎರಡು ಬಾರ್ ಮೇಲೆ ದಾಳಿ ಮಾಡಿದ್ದಾರೆ.
ಬಾಗಲಕೋಟೆ: ಅಕ್ರಮ ಮದ್ಯ ಮಾರಾಟ, ಅಧಿಕಾರಿಗಳಿಂದ 2 ಬಾರ್ ಮೇಲೆ ದಾಳಿ - ಅಧಿಕಾರಿಗಳಿಂದ 2 ಬಾರ್ ಮೇಲೆ ದಾಳಿ, ಪರಿಶೀಲನೆ
ಕೋವಿಡ್ ಹಿನ್ನೆಲೆ ಲಾಕ್ ಡೌನ್ ಆಗಿರುವ ಸಮಯದಲ್ಲಿ ಮದ್ಯ ಮಾರಾಟ ಬಂದ್ ಆಗಿದ್ದು, ನಗರದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆ ಅಬಕಾರಿ ಇಲಾಖೆಯವರು ಎರಡು ಬಾರ್ ಮೇಲೆ ದಾಳಿ ಮಾಡಿದ್ದಾರೆ.

ನವ ನಗರದ ಡ್ರೈವ್ ಇನ್ ಹಾಗೂ ವಿದ್ಯಾಗಿರಿಯ ಮೂನ್ ಲೈಟ್ ಬಾರ್ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ಅಬಕಾರಿ ಇಲಾಖೆಯವರು ಲಾಕ್ ಡೌನ್ ಮುಂಚೆ ಓಪನ್ ಇದ್ದ ಸಮಯದಲ್ಲಿ ಇರುವ ಮಾಹಿತಿಯಂತೆ ಮದ್ಯ ಸ್ಟಾಕ್ ಇರಬೇಕು. ಹೀಗಾಗಿ ಅದನ್ನು ಚೆಕ್ ಮಾಡಿ, ಮೊದಲಿನ ಅಂಕಿ- ಸಂಖ್ಯೆಗಿಂತ ಕಡಿಮೆ ಆಗಿರುವುದು ಮಾಹಿತಿ ಬಂದಿದೆ.
ಇದರಿಂದ ಲಾಕ್ ಡೌನ್ ಸಮಯದಲ್ಲಿ ಹೆಚ್ಚಿನ ದರಕ್ಕೆ ಮಾರಾಟ ಮಾಡಿರುವ ಸಂಶಯ ವ್ಯಕ್ಯವಾಗಿದ್ದು, ಎರಡು ಬಾರ್ ಗಳ ಸಂಬಂಧಪಟ್ಟ ಮಾಲೀಕರ ಮೇಲೆ ದೂರು ದಾಖಲಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಡಾ.ಕೆ.ರಾಜೇಂದ್ರ ಅವರಿಗೆ ಅಬಕಾರಿ ಇಲಾಖೆಯ ಡಿವೈಎಸ್ಪಿ ಕಮತರ ಮಾಹಿತಿ ನೀಡಿದ ಬಳಿಕ ಬಾರ್ ಲೈನ್ಸನ್ ರದ್ದಾಗಲಿದೆ.