ಬಾಗಲಕೋಟೆ:ಮೃತಪಟ್ಟಿರುವ ತನ್ನ ಗಂಡ ಹಾವಿನ ರೂಪದಲ್ಲಿ ಬಂದಿದ್ದಾನೆ ಎಂದು ನಂಬಿರುವ ಅಜ್ಜಿಯೊಬ್ಬರು, ಕಳೆದ ನಾಲ್ಕು ದಿನಗಳಿಂದ ಅದರ ಜೊತೆಗೇ ವಾಸವಾಗಿರುವ ಮೂಲಕ ಎಲ್ಲರನ್ನು ಆಶ್ಚರ್ಯಚಕಿತಗೊಳಿಸಿದ್ದಾರೆ. ಈ ಘಟನೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಕುಲಹಳ್ಳಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಸಾರವ್ವಾ ಮೋನೇಶ್ ಕಂಬಾರ ಎಂಬುವವರ ಮನೆಗೆ ನಾಲ್ಕು ದಿನಗಳ ಹಿಂದೆ ನಾಗರಹಾವು ಬಂದಿದೆ. ಅದನ್ನು ಹೊರಗೆ ಕಳುಹಿಸಲು ಎಷ್ಟೇ ಪ್ರಯತ್ನ ಪಟ್ಟರೂ, ಅದು ಹೋಗಲಿಲ್ಲ. ಇದರಿಂದ ಅಜ್ಜಿ ಆತಂಕಗೊಳ್ಳದೆ ತನ್ನ ಪತಿ ಹಾವಿನ ರೂಪದಲ್ಲಿ ಬಂದಿರುವುದಾಗಿ ನಂಬಿ, ಅದರ ಜೊತೆಗೆ ನಾಲ್ಕು ದಿನ ಕಳೆದಿದ್ದಾರೆ. ಈ ಅಜ್ಜಿಯ ಪತಿ ಮೋನೇಶ ಎಂಬುವರು ಹಲವು ವರ್ಷಗಳ ಹಿಂದೆ ಮೃತಪಟ್ಟಿದ್ದಾರೆ.