ಕರ್ನಾಟಕ

karnataka

ಬಾಗಲಕೋಟೆಯ ವ್ಯಾಕ್ಸಿನೇಷನ್​: ಮಾಹಿತಿ ನೀಡಿದ ಡಿಸಿ ರಾಜೇಂದ್ರ..!

ಸರ್ಕಾರದ ಮಟ್ಟದಲ್ಲಿಯೇ ಲಸಿಕೆ ಪೂರೈಕೆ ‌ಆಗುತ್ತಿಲ್ಲ. ನಮ್ಮ ಬೇಡಿಕೆ ತಕ್ಕಂತೆ ಲಸಿಕೆ ಸಿಗದ ಕಾರಣ ಪ್ರತಿ ದಿನ 5 ರಿಂದ 6 ಸಾವಿರ ಲಸಿಕೆ ಪೂರೈಕೆಯಾಗುತ್ತಿದ್ದು, ಅವುಗಳನ್ನು ಹಾಕುವ ವ್ಯವಸ್ಥೆ ಮಾಡಲಾಗಿದೆ. ಸರ್ಕಾರದ ಸೂಚನೆಯಂತೆ 45 ವರ್ಷದ ಮೇಲ್ಪಟ್ಟವರಿಗೆ ಲಸಿಕೆ ‌ಹಾಕಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಕೆ.ರಾಜೇಂದ್ರ ತಿಳಿಸಿದ್ದಾರೆ.

By

Published : May 15, 2021, 8:37 PM IST

Published : May 15, 2021, 8:37 PM IST

ಬಾಗಲಕೋಟೆಯ ವ್ಯಾಕ್ಸಿನೇಷನ್​ ಬಗ್ಗೆ ಮಾಹಿತಿ ನೀಡಿದ ಡಿಸಿ ರಾಜೇಂದ್ರ..!
ಬಾಗಲಕೋಟೆಯ ವ್ಯಾಕ್ಸಿನೇಷನ್​ ಬಗ್ಗೆ ಮಾಹಿತಿ ನೀಡಿದ ಡಿಸಿ ರಾಜೇಂದ್ರ..!

ಬಾಗಲಕೋಟೆ- ಜಿಲ್ಲೆಯಲ್ಲಿ ಕೊರೊನಾ ಹಾವಳಿ ಹೆಚ್ಚಾಗುತ್ತಿದ್ದಂತೆ ಲಸಿಕೆ ಹಾಕಿಸಿಕೊಳ್ಳಲು ಜನ ಮುಗಿ ಬಿದ್ದಿದ್ದಾರೆ. ಆದರೆ, ಸರ್ಕಾರದಿಂದ ಲಸಿಕೆ ಪೂರೈಕೆಯಾಗದ ಹಿನ್ನೆಲೆ ‌ಲಸಿಕೆಗಾಗಿ ಪರದಾಡುವಂತಾಗಿದೆ.

ಬಾಗಲಕೋಟೆಯ ವ್ಯಾಕ್ಸಿನೇಷನ್​ ಬಗ್ಗೆ ಮಾಹಿತಿ ನೀಡಿದ ಡಿಸಿ ರಾಜೇಂದ್ರ..!

ಈ ಕುರಿತು ಮಾತನಾಡಿರುವ ಡಿಸಿ ಡಾ.ಕೆ.ರಾಜೇಂದ್ರ, ಈ ಹಿಂದೆ ಲಸಿಕೆ ಹಾಕಿಸಿಕೊಳ್ಳಿ ಅಂದರೂ ಆಸ್ಪತ್ರೆಗೆ ಬಾರದ ಜನ, ಈಗ ವ್ಯಾಕ್ಸಿನ್​ಗಾಗಿ ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ ಆರೋಗ್ಯ ಸಿಬ್ಬಂದಿಗೆ, ಫ್ರಂಟ್ ಲೈನ್ ಕೆಲಸ ಮಾಡುತ್ತಿರುವವರಿಗೆ ಹಾಗೂ 40 ವರ್ಷ ಮೇಲ್ಪಟ್ಟ ಮತ್ತು ಧೀರ್ಘಕಾಲಿಕ ಕಾಯಿಲೆ ಹೊಂದಿರುವ 2,44,544 ಸಾರ್ವಜನಿಕರಿಗೆ ಮೊದಲು ಹಂತದ ಲಸಿಕೆ ಹಾಗೂ 52,238 ಜನರಿಗೆ 2 ನೇ ಹಂತದ ಲಸಿಕೆಯನ್ನು ಮತ್ತು 18 ವರ್ಷದ ಮೇಲ್ಪಟ್ಟ 2,116 ಜನರಿಗೆ ಒಟ್ಟು 2,98,898 ಜನರಿಗೆ ಲಸಿಕೆ ಹಾಕಲಾಗಿದೆ ಎಂದರು.

ಜಿಲ್ಲೆಯಲ್ಲಿ ಇಲ್ಲಿಯವರೆಗೆ ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಸೇರಿ 3,014,48 ಡೋಸ್ ಲಸಿಕೆ ಬಂದಿದ್ದು, ಇನ್ನು 2,250 ಡೋಸ್ ಲಸಿಕೆ ದಾಸ್ತಾನು ಮಾಡಲಾಗಿದೆ. ಈಗ ಜಿಲ್ಲೆಯಲ್ಲಿ 18 ವರ್ಷದಿಂದ 44 ವಯಸ್ಸಿನವರೆಗೆ ಲಸಿಕೆ ಹಾಕುವುದಕ್ಕೆ ಸಾಧ್ಯವಾಗುತ್ತಿಲ್ಲ. ಲಸಿಕೆ ಪ್ರಮಾಣ ಕಡಿಮೆ ಬರುತ್ತಿರುವ ಪರಿಣಾಮ ಎರಡನೆಯ ಹಂತದ ಲಸಿಕೆ ಮಾತ್ರ‌ ನೀಡಲಾಗುತ್ತಿದೆ. ಸರ್ಕಾರದ ಮಟ್ಟದಲ್ಲಿಯೇ ಲಸಿಕೆ ಪೂರೈಕೆ ‌ಆಗುತ್ತಿಲ್ಲ. ನಮ್ಮ ಬೇಡಿಕೆ ತಕ್ಕಂತೆ ಲಸಿಕೆ ಸಿಗದ ಕಾರಣ ಪ್ರತಿ ದಿನ 5 ರಿಂದ 6 ಸಾವಿರ ಲಸಿಕೆ ಪೂರೈಕೆಯಾಗುತ್ತಿದ್ದು, ಅವುಗಳನ್ನು ಹಾಕುವ ವ್ಯವಸ್ಥೆ ಮಾಡಲಾಗಿದೆ. ಸರ್ಕಾರದ ಸೂಚನೆಯಂತೆ 45 ವರ್ಷದ ಮೇಲ್ಪಟ್ಟವರಿಗೆ ಲಸಿಕೆ ‌ಹಾಕಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಕೆ.ರಾಜೇಂದ್ರ ತಿಳಿಸಿದ್ದಾರೆ.

ABOUT THE AUTHOR

...view details