ಬಾಗಲಕೋಟೆ:ತಾಲೂಕಿನ ಪ್ರಸಿದ್ಧ ಕ್ಷೇತ್ರ ಚಿಮ್ಮನಕಟ್ಟಿ ಗ್ರಾಮದಲ್ಲಿ ನೀರಿನಿಂದ ದೀಪ ಬೆಳೆಗಿಸುವ ಮೂಲಕ ಮೊಹರಂ ಹಬ್ಬವನ್ನು ವಿಶೇಷವಾಗಿ ಆಚರಣೆ ಮಾಡುತ್ತಾರೆ. ನೀರಿನಿಂದ ದೀಪ ಪ್ರಜ್ವಲಿಸುವ ಬಗ್ಗೆ ನೋಡಲು ವಿವಿಧ ಪ್ರದೇಶಗಳಿಂದ ಜನರು ಆಗಮಿಸುತ್ತಾರೆ. ಗ್ರಾಮದ ದೊಡ್ಡ ಲಾಲಸಾಬವಲಿ ದರ್ಗಾದಲ್ಲಿ ಮೂರು ದಿನಗಳ ಕಾಲ ಮೊಹರಂ ಆಚರಣೆ ನಡೆಯುತ್ತದೆ.
ದೀಪ ಉರಿಯುವುದು ಎಣ್ಣೆಯಿಂದಲ್ಲ, ಬದಲಿಗೆ ನೀರು. ಹೌದು. ಇಲ್ಲಿ ಮೊಹರಂ ಪವಾಡ ಎನ್ನುವಂತೆ ನೀರಿನಿಂದ ದೀಪ ಬೆಳಗಿಸುತ್ತಾರೆ. ಗ್ರಾಮದ ಸಂಗಮೇಶ್ವರ ದೇವಸ್ಥಾನದ ಬಾವಿಯಲ್ಲಿನ ನೀರನ್ನು ಬಿಂದಿಗೆಯಲ್ಲಿ ತಂದು ದರ್ಗಾದಲ್ಲಿನ ದೀಪಗಳಿಗೆ ನೀರು ಹಾಕಿ ದೀಪ ಬೆಳಗಿಸುತ್ತಾರೆ. ಅಲ್ಲದೇ ದೇಸಾಯಿಯವರ ಮನೆಯಲ್ಲಿ ಗಂಧ ತಂದು ದೇವರಿಗೆ ಅರ್ಪಣೆ ಮಾಡಿ ಪ್ರಾರಂಭವಾಗುವ ಈ ಹಬ್ಬದಲ್ಲಿ ಸಾಕಷ್ಟು ವಿಶೇಷ ಆಚರಣೆಗಳು ನಡೆಯುತ್ತವೆ.